• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಮಾನದಲ್ಲಿ ಕ್ಯಾಬಿನ್ ಪ್ರೆಶರ್ ನಿರ್ವಹಿಸದಿದ್ದರೆ ಏನಾಗುತ್ತೆ?

|

ಮುಂಬೈಯಲ್ಲಿ ಜೆಟ್ ಏರ್ವೇಸ್ ವಿಮಾನದಲ್ಲಿ ಸಿಬ್ಬಂದಿಯೊಬ್ಬರು ಕ್ಯಾಬಿನ್ ಪ್ರೆಶರ್ ನಿರ್ವಹಿಸುವ ಸ್ವಿಚ್ ಅದುಮಲು ಮರೆತಿದ್ದು ಅಚಾತುರ್ಯಕ್ಕೆ ಕಾರಣವಾಗಿದೆ. ವಿಮಾನದಲ್ಲಿದ್ದ 166 ಕ್ಕೂ ಹೆಚ್ಚು ಜನ ಆತಂಕ ಪಟ್ಟು, 30ಕ್ಕೂ ಹೆಚ್ಚು ಪ್ರಯಾಣಿಕರು ಅನಾರೋಗ್ಯದಿಂದ ಬಳಲುವಂತಾಗಿತ್ತು.

ಅಷ್ಟಕ್ಕೂ ವಿಮಾನದಲ್ಲಿ ಕ್ಯಾಬಿನ್ ಪ್ರೆಶರ್ ನಿರ್ವಹಿಸುವ ಸ್ವಿಚ್ ಅದುಮುವುದನ್ನು ಮರೆತರೆ ಯಾಕಿಂಥ ಅನಾಹುತವಾಗುತ್ತದೆ? ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಪ್ರಯಾಣಿಕರೆಲ್ಲರೂ ಸಾಯುವ ಸ್ಥಿತಿಯೂ ಬರಬಹುದು.

ಜೆಟ್ ಏರ್ವೇಸ್ ಸಿಬ್ಬಂದಿಯ ನಿರ್ಲಕ್ಷ್ಯ: ವಿಮಾನದಲ್ಲಿ ಪ್ರಯಾಣಿಕರ ಪರದಾಟ

ಬಾಹ್ಯ ವಾತಾವರಣದಲ್ಲಿ ಮೇಲಕ್ಕೆ ಹೋದಂತೇ ಗಾಳಿಯ ಒತ್ತಡವೂ ಕಡಿಮೆಯಾಗುವುದು ಗೊತ್ತಿರುವ ಸಂಗತಿ. ವಿಮಾನ ಟೇಕಾಫ್ ಆಗಿ ಮೇಲಕ್ಕೇರುತ್ತಿದ್ದಂತೆಯೇ ಗಾಳಿಯ ಒತ್ತಡ ಕಡಿಮೆಯಾಗುತ್ತ ಆಗುತ್ತ, ಒಂದು ಅಂತಕ್ಕೆ ತಲುಪುತ್ತಿದ್ದಂತೆಯೇ ಆಮ್ಲಜನಕವೇ ಇಲ್ಲದ ಮಟ್ಟ ತಲುಪುತ್ತದೆ ವಿಮಾನ. ಆದರೆ ವಿಮಾನದ ಒಳಗಡೆ ಕೃತಕವಾಗಿ ಗಾಳಿಯ ಒತ್ತಡ ಸಮಸ್ಥಿತಿಯಲ್ಲಿರುವಂಥ ತಂತ್ರಜ್ಞಾನವಿರುವುದರಿಂದ ಈ ಯಾವುದೇ ಅನುಭವ ಪ್ರಯಾಣಿಕರಿಗಾಗುವುದಿಲ್ಲ. ವಿಮಾನ ಸಂಪೂರ್ಣವಾಗಿ ಹೊರಗಿನ ಸಂಪರ್ಕವಿಲ್ಲದೆ ಮುಚ್ಚಿರುವುದರಿಂದ ಬಾಹ್ಯ ವಾತಾವರಣದಲ್ಲಿ ಆಮ್ಲಜನಕದ ಕೊರತೆ ಇರುವುದು ತಿಳಿಯುವುದಿಲ್ಲ.

ಆದರೆ ಸಿಬ್ಬಂದಿಯೇನಾದರೂ ಈ ಕ್ಯಾಬಿನ್ ಪ್ರೆಶರ್ ಅನ್ನು ನಿರ್ವಹಿಸುವ ಬಟನ್ ಅದುಮುವುದನ್ನು ಮರೆತರೆ ಇಂದು ಜೆಟ್ ಏರ್ವೇಸ್ ನಲ್ಲಾದಂಥ ಸನ್ನಿವೇಶ ನಿರ್ಮಾಣವಾಗುತ್ತದೆ.

ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲೇ ಅಸುನೀಗಿದ ಬೆಂಗಳೂರಿನ ಹಸುಗೂಸು

ಹೀಗಾದಾಗ ದೇಹಕ್ಕೆ ಅಗತ್ಯವಾದಷ್ಟು ಆಮ್ಲಜನಕದ ಪೂರೈಕೆಯಾಗುವುದಿಲ್ಲ. ಮೆದುಳಿಗೆ ಆಮ್ಲಜನಕ ಪೂರೈಕೆಯಾಗದೆ ಇದ್ದಾಗ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂಬುದೇ ಆತನಿಗೆ ತಿಳಿಯುವುದಿಲ್ಲ. ಮಾತ್ರವಲ್ಲ, ಆತ ಪ್ರಜ್ಞಾಹೀನ ಸ್ಥಿತಿಗೂ ತಲುಪಬಹುದು, ಕೆಲವೊಮ್ಮೆ ಸಾವಿಗೀಡಾಗಲೂಬಹುದು! ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ವ್ಯಕ್ತಿಯ ದೇಹದ ಜೀವಕೋಶಗಳಿಗೆ ಆಮ್ಲಜನಕ ಪೂರೈಕೆಯಾದ ಸ್ಥಿತಿಯನ್ನು ಹೈಪೋಕ್ಸಿಯಾ ಎನ್ನಲಾಗುತ್ತದೆ.

ವಿಮಾನಗಳಲ್ಲಿ ಸಿಗರೇಟ್ ಸೇದುವುದನ್ನೂ ನಿಷೇಧಿಸಿರುವುದಕ್ಕೆ ಇದೂ ಒಂದು ಕಾರಣ. ಸಿಗರೇಟ್ ನಿಂದ ಬಿಡುಗಡೆಯಾಗುವ ಕಾರ್ಬನ್ ಮೋನಾಕ್ಸೈಡ್ ದೇಹದಲ್ಲಿರುವ ರಕ್ತಕ್ಕೆ ಸೇರಿ ಅದೂ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡಿ ಹೈಪೋಕ್ಸಿಯಾಕ್ಕೆ ಕಾರಣವಾಗುತ್ತದೆ.

ವಿಮಾನದಲ್ಲಿ ಕುಡಿದು ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ!

ಹೃದಯಸಂಬಂಧಿ ಸಮಸ್ಯೆ ಇರುವವರು, ಉಸಿರಾಟದ ಸಮಸ್ಯೆ, ಅಸ್ತಮಾದಂಥ ಸಮಸ್ಯೆ ಇರುವವರಿಗೆ ಹೈಪೋಕ್ಸಿಯಾ ಬೇಗನೇ ಉಂಟಾಗಬಹುದು. ಈ ಎಲ್ಲಾ ಕಾರಣದಿಂದಾಗಿ ವಿಮಾನದಲ್ಲಿ ಕ್ಯಾಬಿನ್ ಪ್ರೆಶರ್ ಅನ್ನು ಮೆಂಟೈನ್ ಮಾಡುವ ಬಟನ್ ಅನ್ನು ಆನ್ ಮಾಡುವುದಕ್ಕೆ ಮರೆಯುವಂತಿಲ್ಲ.

English summary
What happens to body if airoplane loses cabin pressure? After an attending crew forgot to maintain cabin pressure in Jet airways which was travelling to Jaipur from Mumbai, many passengers become sick
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X