ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಒಂದು ಕಾರಣಕ್ಕೆ ಮಾತ್ರ ನಾವು ಬಿಜೆಪಿ ಜೊತೆಗಿದ್ದೇವೆ: ಉದ್ಧವ್ ಠಾಕ್ರೆ

|
Google Oneindia Kannada News

ಮುಂಬೈ, ಜೂನ್ 6: ಹಿಂದುತ್ವ, ರಾಮ ಮಂದಿರ ನಿರ್ಮಾಣಕ್ಕಾಗಿ ನಾವು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಜೊತೆಗಿದ್ದೇವೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ನಾವು ರಾಮ ಮಂದಿರದ ವಿಚಾರದಲ್ಲಿ ಏನಾದರೂ ಮಾತನಾಡಿದರೆ ಅಥವಾ ನಿರ್ಧಾರ ತೆಗೆದುಕೊಂಡರೆ, ಅದು ಕೇಂದ್ರ ಸರಕಾರದ ವಿರುದ್ದದ ನಮ್ಮ ನಿಲುವು ಎಂದು ವಾಖ್ಯಾನಿಸುವುದು ತಪ್ಪು ಠಾಕ್ರೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮೋದಿ ಅಯೋಧ್ಯೆಯತ್ತ ಗಮನಹರಿಸಲಿ: ಪೇಜಾವರಶ್ರೀಮೋದಿ ಅಯೋಧ್ಯೆಯತ್ತ ಗಮನಹರಿಸಲಿ: ಪೇಜಾವರಶ್ರೀ

ಎನ್ಡಿಎ ಮೈತ್ರಿಕೂಟಕ್ಕೆ ಮತದಾರ ಎರಡನೇ ಅವಧಿಗೆ ಆಶೀರ್ವದಿಸಿದ ನಂತರ, ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಒತ್ತಡ ಹೆಚ್ಚುತ್ತಿದೆ. ನಮ್ಮ ಪಕ್ಷದ ಎಲ್ಲಾ ಹದಿನೆಂಟು ಸಂಸದರು ಜೂನ್ 15ಕ್ಕೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆಂದು ಠಾಕ್ರೆ ಹೇಳಿದ್ದಾರೆ.

We are in the NDA alliance only for Hindutva and Ram Mandir: Uddhav Thackeray

ಜೂನ್ ಹದಿನೈದರಂದು ಅಯೋಧ್ಯೆಯಲ್ಲಿ ವಿವಿಧ ಪೀಠಾಧಿಪತಿಗಳು, ಸಂತರು ರಾಮ ಮಂದಿರ ನಿರ್ಮಾಣ ಸಂಬಂಧ ಮಹತ್ವದ ಗೊತ್ತುವಳಿಯನ್ನು ಆಂಗೀಕರಿಸುವ ಸಾಧ್ಯತೆಯಿದೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ನಮ್ಮ ಸಂಸದರು ಜೂನ್ 15-17ರ ವರೆಗೆ ಅಯೋಧ್ಯೆಯಲ್ಲಿ ಇರಲಿದ್ದಾರೆಂದು ಶಿವಸೇನೆಯ ಮಾಧ್ಯಮ ಮುಖ್ಯಸ್ಥ ಹರ್ಷಲ್ ಪ್ರಧಾನ್ ಹೇಳಿದ್ದಾರೆ.

'ಮಂದಿರ ಮೊದಲು, ಸರ್ಕಾರ ನಂತರ' : ಶಿವಸೇನಾದಿಂದ ರಾಮಜಪ'ಮಂದಿರ ಮೊದಲು, ಸರ್ಕಾರ ನಂತರ' : ಶಿವಸೇನಾದಿಂದ ರಾಮಜಪ

ಬಿಜೆಪಿ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಮೊದಲು, ರಾಮ ಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಶಿವಸೇನೆ ಷರತ್ತು ವಿಧಿಸಿತ್ತು. ಅಭೂತಪೂರ್ವ ಜಯಗಳಿಸಿದ ನಂತರ ನರೇಂದ್ರ ಮೋದಿ ಸರಕಾರಕ್ಕೆ, ರಾಮ ಮಂದಿರ ನಿರ್ಮಾಣ ಸಂಬಂಧದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

English summary
We are not in the alliance for any post, but for Hindutva. Expressing our opinion does not mean we are upset. We will be going to Ayodhya on June 16: Uddhav Thackeray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X