• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈನಲ್ಲಿ ಶೀಘ್ರವೇ ವಾಟರ್‌ ಟ್ಯಾಕ್ಸಿ ಸೇವೆ ಆರಂಭ

|

ನವದೆಹಲಿ, ಏಪ್ರಿಲ್ 8: ಮುಂಬೈ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಮೇ ವೇಳೆಗೆ ಭಾರೀ ಬದಲಾವಣೆ ಕಾಣಲಿದ್ದು, ಶೀಘ್ರವೇ 12 ಮಾರ್ಗಗಳಲ್ಲಿ ವಾಟರ್ ಟ್ಯಾಕ್ಸಿಗಳು ಸಂಚರಿಸಲಿವೆ ಹಾಗೂ ಡಿಸೆಂಬರ್ ವೇಳೆಗೆ ನಾಲ್ಕು ಮಾರ್ಗಗಳಲ್ಲಿ ರೋಪಾಕ್ಸ್ ದೋಣಿಗಳು ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ತಿಳಿಸಿದ್ದಾರೆ.

ಕಳೆದ ವರ್ಷ ಅಲಿಬಾಗ್ ಬಳಿಯ ಮುಂಬೈ ಹಾಗೂ ಮಾಂಡ್ವಾ ನಡುವೆ ರೋಲ್ ಆನ್ ರೋಲ್ ಆಫ್ (ರೋರೊ) ಪ್ಯಾಸೆಂಜರ್ ದೋಣಿ ಸೇವೆ ಆರಂಭಿಸಿದ ನಂತರ, ಇದನ್ನು ಪರಿಚಯಿಸಲಾಗುತ್ತಿದೆ. ಮುಂಬೈ ಹಾಗೂ ಮಂಡವಾ ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಯಿಂದ 45 ನಿಮಿಷಕ್ಕೆ ಇಳಿಸಿದ ಮಂಡವಾ ರೋಪಾಕ್ಸ್ ಸೇವೆಯ ಯಶಸ್ವಿ ಕಾರ್ಯಾಚರಣೆ ನಂತರ ನಾವು 2021ರ ಡಿಸೆಂಬರ್ ವೇಳೆಗೆ ಇನ್ನೂ ನಾಲ್ಕು ಮಾರ್ಗಗಳಲ್ಲಿ ರೋಪಾಕ್ಸ ಸೇವೆ ಆರಂಭಿಸಲಿದ್ದೇವೆ ಎಂದು ಬಂದರು, ಹಡಗು ಹಾಗೂ ಜಲಮಾರ್ಗ ಸಚಿವ ಮಾಂಡವಿಯಾ ತಿಳಿಸಿದ್ದಾರೆ.

ಬೆಂಗಳೂರಿನಿಂದ ಜಪಾನ್‌ಗೆ ಜೂನ್‌ನಿಂದ ನೇರ ವಿಮಾನ ಸೇವೆ

ರೋಪಾಕ್ಸ್ ಸೇವೆಗಳು ಇದೇ ಡಿಸೆಂಬರ್ ಒಳಗೆ ಪ್ರಾರಂಭವಾಗಲಿದ್ದು, ಮುಂಬೈ-ನೆರುಲ್, ಮುಂಬೈ-ಕಾರಂಜ, ಮುಂಬೈ-ಮೊರಾ ಹಾಗೂ ಮುಂಬೈ ರೇವಾಸ್ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

ವಾಟರ್ ಟ್ಯಾಕ್ಸಿ ಸೇವೆಗಳನ್ನು 12 ಮಾರ್ಗಗಳಲ್ಲಿ ಪರಿಚಯಿಸುತ್ತಿದ್ದು, ಮುಂಬೈ ನೆರುಲ್, ಬೇಲಾಪುರ, ವಶಿ, ಏರೋಲಿ, ರೇವಾಸ್, ಕಾರಂಜ, ಧರಂತರರ್, ಕನ್ಹೋಜಿ ಆಂಗ್ರೆ ಐಲೆಂಡ್ ಹಾಗೂ ಥಾಣೆಗೆ ಸಂರ್ಕ ಕಲ್ಪಿಸಲಿದೆ. ವಾಟರ್ ಟ್ಯಾಕ್ಸಿಯಲ್ಲಿ 14ರಿಂದ 45 ಪ್ರಯಾಣಿಕರು ಕೂರಬಹುದಾಗಿದೆ. ಶೀಘ್ರವೇ ಮುಂಬೈಗೆ ವಾಟರ್ ಟ್ಯಾಕ್ಸಿಗಳು ಕಾಲಿಡಲಿವೆ.

English summary
Mumbai's public transportation system is set to get a major boost with water taxis on 12 routes by May says Union Minister Mansukh Mandaviya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X