• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ನಿಮ್ಮ ಮಗನ ವಯಸ್ಸಿನವಳು, ನಾಚಿಕೆಯಾಗಬೇಕು: ಸಿಎಂ ಠಾಕ್ರೆ ವಿರುದ್ದ ಗುಡುಗಿದ ಕಂಗನಾ ರಣಾವತ್

|

ಮುಂಬೈ, ಅ 26: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವಸೇನೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮುಂದುವರಿದಿದೆ. ನಾನು ನಿಮ್ಮ ಮಗನ ವಯಸ್ಸಿನವಳು, ನಿಮಗೆ ನಾಚಿಕೆಯಾಗಬೇಕು ಎಂದು ಕಂಗನಾ, ಠಾಕ್ರೆ ವಿರುದ್ದ ಕಿಡಿಕಾರಿದ್ದಾರೆ.

"ಮುಖ್ಯಮಂತ್ರಿಯವರೇ, ನಾನು ನಿಮ್ಮ ಹಾಗೇ ನಿಮ್ಮ ತಂದೆಯ ಸಂಪತ್ತು, ಹೆಸರಿನಿಂದ ಮೇಲೆ ಬಂದಳವಲ್ಲ. ಸ್ವಜನಪಕ್ಷಪಾತ ನನ್ನಲ್ಲಿದ್ದರೆ, ನಾನು ಹಿಮಾಚಲ ಪ್ರದೇಶದಲ್ಲೇ ಉಳಿದುಕೊಳ್ಳಬಹುದಾಗಿತ್ತು"ಎಂದು ಕಂಗನಾ ಟ್ವೀಟ್ ಮೂಲಕ, ಠಾಕ್ರೆಗೆ ತಿರುಗೇಟು ನೀಡಿದ್ದಾರೆ.

ನಾನು ಮತ್ತು ನನ್ನ ಮಗ ಇಬ್ಬರೂ ಕ್ಲೀನ್ ಇದ್ದೇವೆ: ಉದ್ಧವ್ ಠಾಕ್ರೆ

"ನಾನು ಹೆಸರಾಂತ ಕುಟುಂಬದಿಂದ ಬಂದವಳು. ಆದರೆ, ಅವರ ಸಂಪತ್ತು, ಶಕ್ತಿಯಿಂದ ಬದುಕಲು ಬಯಸುವವಳಲ್ಲ. ಕೆಲವರು ಸ್ವಾಭಿಮಾನ ಮತ್ತು ತಮ್ಮದೇ ಆದ ಸಿದ್ದಾಂತದ ಮೂಲಕ ಬದುಕಲು ಬಯಸುತ್ತಾರೆ"ಎಂದು ಸಿಎಂ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ದ ಕಂಗನಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

"ಶಿವಸೇನೆಯ ಮುಖಂಡ ಸಂಜಯ್ ರಾವತ್ ನಮ್ಮನ್ನು ಹರಾಮ್ ಕೋರ್ ಎಂದು ಕರೆದರು. ಉದ್ಧವ್ ಠಾಕ್ರೆ ನನ್ನನ್ನು ನಮಕ್ ಹರಾಂ ಎಂದರು. ಮುಂಬೈ ಮಹಾನಗರ ನನಗೆ ಆಶ್ರಯ ಕೊಡದಿದ್ದರೆ, ನನ್ನ ರಾಜ್ಯದಲ್ಲಿ ನನಗೆ ಆಹಾರ ಸಿಗುತ್ತಿರಲಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ"ಎಂದು ಕಂಗನಾ ಹೇಳಿದ್ದಾರೆ.

"ನನಗೆ ನಿಮ್ಮ ಮೇಲೊಂದು ಅನುಮಾನ, ನಾನು ನಿಮ್ಮ ಮಗನ ವಯಸ್ಸಿನವಳು. ನಾನೊಬ್ಬಳು ಒಂಟಿ ಮಹಿಳೆ, ನನ್ನ ಬಗ್ಗೆ ಈ ರೀತಿ ಮಾತನಾಡಲು ನಿಮಗೆ ನಾಚಿಕೆಯಾಗಬೇಕು. ಸ್ವಜನಪಕ್ಷಪಾತಕ್ಕೆ ಅತ್ಯಂತ ಕೆಟ್ಟ ಉದಾಹರಣೆ ನೀವು"ಎಂದು ಕಂಗನಾ ರಣಾವತ್ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೆಲವೊರೊಬ್ಬರಿಗೆ ಅವರ ರಾಜ್ಯದಲ್ಲಿ ಸರಿಯಾದ ಆಹಾರ ಸಿಗುವುದಿಲ್ಲ, ಅಂತವರು ಇಲ್ಲಿಗೆ (ಮುಂಬೈ) ಬಂದು ದುಡ್ಡು, ಹೆಸರನ್ನು ಸಂಪಾದಿಸಿ, ಇಲ್ಲಿಗೆ ನಮಕ್ ಹರಾಮ್ ಆಗುತ್ತಾರೆ. ಮುಂಬೈ ಪಿಓಕೆ ರೀತಿಯಲ್ಲಿದೆ ಎಂದು ಹೇಳುತ್ತಾರೆ. ನಾವು, ಮುಂಬೈ ಪೊಲೀಸರ ಬಗ್ಗೆ ಹೆಮ್ಮೆಯನ್ನು ಹೊಂದಿದ್ದೇವೆ"ಎಂದು ಠಾಕ್ರೆ ಹೇಳಿದ್ದರು.

English summary
War Of Words Between Uddhav Thackeray And Bollywood Actress Kangana Ranaut Continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X