ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಕಾಂಗ್ರೆಸ್ಸಿನಲ್ಲಿ ಕಿರಿಕ್ : ಅಶೋಕ್ ಚವಾಣ್ ಸಂಭಾಷಣೆ ಆಡಿಯೋ ಸೋರಿಕೆ

|
Google Oneindia Kannada News

ಮುಂಬೈ, ಮಾರ್ಚ್ 24 : ಮಹಾರಾಷ್ಟ್ರ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿಯಿಲ್ಲ. ಒಂದು ಕಡೆ ಸಾಲು ಸಾಲಾಗಿ ಹಿರಿಯ ಮುಖಂಡರುಗಳು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇನ್ನೊಂದೆಡೆ ಆಂತರಿಕ ಕಲಹ ತಾರಕ್ಕೇರುತ್ತಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಪಕ್ಷದ ಮುಖ್ಯಸ್ಥ ಅಶೋಕ್ ಚವಾಣ್ ಹಾಗೂ ಬೇಸತ್ತ ಕಾರ್ಯಕರ್ತನೊಬ್ಬನ ಜೊತೆಗಿನ ಸಂಭಾಷಣೆಯ ಆಡಿಯೋ ಈಗ ಬಹಿರಂಗವಾಗಿದ್ದು, ಕಾಂಗ್ರೆಸ್ಸಿಗೆ ಮುಜುಗರ ಉಂಟು ಮಾಡಿದೆ.

ಬಿಜೆಪಿ ಪಾಲಾದ ಎನ್ ಸಿಪಿ ಮಾಜಿ ಸಂಸದ ಮೋಹಿತೆ ಪಾಟೀಲ್ ಬಿಜೆಪಿ ಪಾಲಾದ ಎನ್ ಸಿಪಿ ಮಾಜಿ ಸಂಸದ ಮೋಹಿತೆ ಪಾಟೀಲ್

ಚಂದ್ರಾಪುರ್ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಕುರಿತ ಈ ಸಂಭಾಷಣೆ ನಡೆಸಲಾಗಿದೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ಮುಕುಲ್ ವಾಸ್ನಿಕ್ ಅವರು ಮೂಗು ತೂರಿಸುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಆಡಿಯೋ ಬಗ್ಗೆ ಅಶೋಕ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅದನ್ನು ನಿರಾಕರಿಸಿಯೂ ಇಲ್ಲ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದಾಗ ವೈಮನಸ್ಯ ಉಂಟಾಗುವುದು ಸಹಜ ಎಂದಿದ್ದಾರೆ.

Want To Quit: Alleged Ashok Chavan Tape Embarrasses Congress

ರಾಜೀನಾಮೆ ನೀಡಲು ಬಯಸಿದ್ದೆ : ನನ್ನ ಮಾತು ಯಾರು ಕೇಳುತ್ತಿಲ್ಲ, ಮಾನಸಿಕ ಒತ್ತಡ ಎಷ್ಟು ಹೆಚ್ಚಾಗಿದೆ ಎಂದರೆ ಹುದ್ದೆಗೆ ರಾಜೀನಾಮೆ ನೀಡಲು ಬಯಸಿದ್ದೆ ಎಂದು ಕಾರ್ಯಕರ್ತನ ಬಳಿ ಅಶೋಕ್ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ, ಆಡಿಯೋ ಮುದ್ರಿಕೆಯ ಸತ್ಯಾಸತ್ಯತೆ ಬಗ್ಗೆ ಇನ್ನೂ ದೃಢಪಟ್ಟೀಲ್ಲ.

ನ್ಯೂಸ್ ನೇಷನ್ ಸಮೀಕ್ಷೆ: ಬಿಜೆಪಿ-ಶಿವಸೇನಾ vs ಕಾಂಗ್ರೆಸ್-ಎನ್ಸಿಪಿ ನ್ಯೂಸ್ ನೇಷನ್ ಸಮೀಕ್ಷೆ: ಬಿಜೆಪಿ-ಶಿವಸೇನಾ vs ಕಾಂಗ್ರೆಸ್-ಎನ್ಸಿಪಿ

ಮುಕುಲ್ ವಾಸ್ನಿಕ್ ಅವರಿಗೆ ದೂರು ನೀಡಿ ಎಂದು ಕಾರ್ಯಕರ್ತರಿಗೆ ಅಶೋಕ್ ಹೇಳಿದ್ದಾರೆ. ಆದರೆ, ಕಾರ್ಯಕರ್ತರು ಈ ಮಾತಿನಿಂದ ಕೆರಳಿದ್ದು, ಮುಕುಲ್ ವಾಸ್ನಿಕ್ ಅಂದರೆ ಯಾರು? ಇಲ್ಲಿ ನೀವೆ(ಅಶೋಕ್) ನಮಗೆ ಎಲ್ಲಾ ಎಂದಿದ್ದಾರೆ. ನನಗೆ ಗೊತ್ತಿದೆ. ಆದರೆ, ನಾನ ಹತಾಶನಾಗಿದ್ದೇನೆ. ನಾನು ಒತ್ತಡದಿಂದ ಎಲ್ಲವನ್ನು ತೊರೆಯಲು ಮುಂದಾಗಿದ್ದೇನೆ, ಅದನ್ನು ಮುಕುಲ್ ವಾಸ್ನಿಕ್ ಗೆ ಹೇಳಿ' ಎಂದು ಅಶೋಕ್ ಹೇಳಿದ್ದಾರೆ.

ಎನ್ ಸಿಪಿ ಮೊದಲ ಪಟ್ಟಿ ಪ್ರಕಟ, ಬಾರಾಮತಿಯಿಂದ ಸುಪ್ರಿಯಾ ಕಣಕ್ಕೆ ಎನ್ ಸಿಪಿ ಮೊದಲ ಪಟ್ಟಿ ಪ್ರಕಟ, ಬಾರಾಮತಿಯಿಂದ ಸುಪ್ರಿಯಾ ಕಣಕ್ಕೆ

ಎನ್ ಸಿಪಿ ಅಲ್ಲದೆ 54 ಇತರೆ ಪಕ್ಷ, ಸಂಘಟನೆಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ. ನಾನು ನನ್ನ ಪಕ್ಷದ ಕಾರ್ಯಕರ್ತರ ಜತೆ ಆಪ್ತವಾಗಿ ಖಾಸಗಿಯಾಗಿ ನಡೆಸಿದ ಸಂಭಾಷಣೆ ಇದಾಗಿದ್ದು, ಸಾರ್ವಜನಿಕವಾಗಿ ಈ ಬಗ್ಗೆ ಚರ್ಚಿಸಲು ಇಷ್ಟಪಡುವುದಿಲ್ಲ. ಎಂದು ಅಶೋಕ್ ಅವರು ಎನ್ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ 24 ಹಾಗೂ ಎನ್ಸಿಪಿ 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಮಿಕ್ಕ ಕ್ಷೇತ್ರಗಳನ್ನು ಸಣ್ಣ ಪುಟ್ಟ ಮೈತ್ರಿ ಪಕ್ಷಗಳಿಗೆ ನೀಡಲಾಗಿದೆ.

English summary
a purported phone conversation between party chief Ashok Chavan and a distraught worker has gone viral. Ashok Chavan has not denied that the voice is indeed his and he admits there is major discontent over the Chandrapur seat for which candidate was declared on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X