ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ:ಚಲಿಸುತ್ತಿರುವ ರೈಲಿಂದ ಬಿದ್ದರೂ ಪವಾಡಸದೃಶವಾಗಿ ಪಾರಾದ ಯುವತಿ

|
Google Oneindia Kannada News

Recommended Video

ಚಲಿಸುತ್ತಿದ್ದ ರೈಲಿನಲ್ಲಿ ಬಿದ್ದರು ಪವಾಡ ರೀತಿಯಲ್ಲಿ ಬದುಕುಳಿದ ಯುವತಿ | Oneindia Kannada

ಮುಂಬೈ, ಅಕ್ಟೋಬರ್ 04: ಮುಂಬೈಯ ರೈಲೊಂದರಲ್ಲಿ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಅಕಸ್ಮಾತ್ತಾಗಿ ಹಳಿಗಳ ಮೇಲೆ ಬಿದ್ದರೂ ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.

ಸಹ ಪ್ರಯಾಣಿಕರ ಸಮಯಪ್ರಜ್ಞೆಯಿಂದಾಗಿ ಯುವತಿ ಬದುಕುಳಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಿಲ್ಲಿ ವೈರಲ್ ಆಗಿದೆ.

Viral video: Lady escapes miraculously after fell off a train

ವೈರಲ್ ವಿಡಿಯೋ: ನೆಲಮಂಗಲದಲ್ಲಿ ಪವಾಡಸದೃಶವಾಗಿ ಅಪಘಾತದಿಂದ ಪಾರಾದ ಮಗುವೈರಲ್ ವಿಡಿಯೋ: ನೆಲಮಂಗಲದಲ್ಲಿ ಪವಾಡಸದೃಶವಾಗಿ ಅಪಘಾತದಿಂದ ಪಾರಾದ ಮಗು

ರೈಲಿನಲ್ಲಿ ಬಾಗಿಲ ಬಳಿ ನಿಲ್ಲುವುದು ಅಪಾಯವೆಂಮದು ಗೊತ್ತಿದ್ದರೂ ಕೆಲವರು ಅಲ್ಲಿಯೇ ನಿಲ್ಲುವ ಅಭ್ಯಾಸವನ್ನು ಬಿಟ್ಟಿಲ್ಲ. ಅಂತೆಯೇ ಥಾಣೆ ಜಿಲ್ಲೆಯ 17 ವರ್ಷದ ಯುವತಿಯೊಬ್ಬರು ಬಾಗಿಲ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ಆಕೆ ಜೋರಾಗಿ ಚಲಿಸುತ್ತಿದ್ದ ಅದೇ ರೈಲಿನಿಂದ ಬಿದ್ದಿದ್ದಾರೆ. ಆದರೆ ತಕ್ಷಣವೇ ಆಕೆಯೊಂದಿಗಿದ್ದ ಸಹ ಪ್ರಯಾಣಿಕರು ಆಕೆಯ ಟಿ ಶರ್ಟ್ ಹಿಡಿದು, ಆಕೆಯನ್ನು ಮೇಲಕ್ಕೆತ್ತಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪವಾಡ : ರೈಲಿಗೆ ಡಿಕ್ಕಿ ಹೊಡೆದ್ರು ಸಾವು ಗೆದ್ದ ಯುವತಿಪವಾಡ : ರೈಲಿಗೆ ಡಿಕ್ಕಿ ಹೊಡೆದ್ರು ಸಾವು ಗೆದ್ದ ಯುವತಿ

ರೈಲು ಖಾಲಿಯಿದ್ದರೂ ಯುವತಿ ಬೇಕೆಂದೇ ಬಾಗಿಲ ಬಳಿ ನಿಂತಿದ್ದರು ಎಂದು ಸಹಪ್ರಯಾಣಿಕರು ಆರೋಪಿಸಿದ್ದಾರೆ. ಈ ಕುರಿತು ರೈಲ್ವೇ ಪೊಲೀಸರು ವಿಚಾರಣೆ ನಡೆಸಿದ್ದು, 'ತಾನು ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಯತಪ್ಪಿ ಬಿದ್ದೆ' ಎಂದು ಯುವತಿ ಹೇಳಿಕೆ ನೀಡಿದ್ದಾರೆ.

English summary
A lady miraculously escaped after she fell off a local train in Mumbai. The video becomes viral now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X