• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ: ಮೈಮೇಲೆ ಕಾರು ಹರಿದರೂ 3 ವರ್ಷದ ಮಗು ಬಚಾವ್!

|

ಮುಂಬೈ, ಸಪ್ಟೆಂಬರ್.16: ಮನೆ ಬಾಗಿಲಿನಲ್ಲಿ ಪುಟ್ಟ ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ಕೊಂಚ ಮೈಮರೆತರೂ ಎಂಥಾ ಅನಾಹುತಗಳೇ ನಡೆದು ಹೋಗುತ್ತವೆ ಎನ್ನುವುದಕ್ಕೆ ಮುಂಬೈನಲ್ಲಿ ನಡೆದ ಇದೊಂದು ಘಟನೆಯೇ ಸಾಕ್ಷಿ.

ಮುಂಬೈನ ಮಲ್ವಾನಿ ಪ್ರದೇಶದಲ್ಲಿ ಮನೆ ಎದುರಿಗೆ ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ ಕಾರುವೊಂದು ಡಿಕ್ಕಿ ಹೊಡೆದಿದೆ. ಅಲ್ಲದೇ ಕೆಳಕ್ಕೆ ಬಿದ್ದ ಮಗುವಿನ ಮೇಲೆ ಕಾರಿನ ಎರಡೂ ಚಕ್ರಗಳು ಏರಿಳಿರುವುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವೈರಲ್ ವಿಡಿಯೋ: ಡ್ರೋನ್ ಮೂಲಕ ಗಾಂಜಾ ಡೆಲಿವರಿ..!

ಕಳೆದ ಸಪ್ಟೆಂಬರ್.11ರಂದು ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಗುವಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಾರು ಚಾಲಕನ ವಿರುದ್ಧ ಕೇಸ್:

ಮುಂಬೈನಲ್ಲಿ 3 ವರ್ಷದ ಪುಟ್ಟ ಮಗುವಿನ ಮೇಲೆ ಕಾರು ಹರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

English summary
Viral News: 3-Year-Old Was Playing Outside The House, The Driver Drove The Car On Child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X