• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಸಂಸ್ಕಾರಿ'ಯಿಂದ ಅತ್ಯಾಚಾರ! ಸ್ಫೋಟಕ ಸುದ್ದಿ ಹೊರಹಾಕಿದ ವಿನ್ತಾ ನಂದಾ

|

ಮುಂಬೈ, ಅಕ್ಟೋಬರ್ 09: "ಅತ್ಯುತ್ತಮ ನಟ, ಸಿನಿಮಾ ರಂಗದಲ್ಲಿ 'ಸಂಸ್ಕಾರಿ' ಎಂದೇ ಕರೆಸಿಕೊಂಡ ವ್ಯಕ್ತಿಯೊಬ್ಬರಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ" ಎಂದು ಬರಹಗಾರ್ತಿ ಮತ್ತು ನಿರ್ಮಾಪಕಿ ವಿನ್ತಾ ನಂದಾ ಸ್ಫೋಟಕ ಸುದ್ದಿಯೊಂದನ್ನು ಹೊರಹಾಕಿದ್ದಾರೆ!

'ಸಂಸ್ಕಾರಿ' ಎಂದು ಅವರು ಬಳಸಿದ ಪದದ ಮೂಲಕವೇ ಅವರು ಯಾರನ್ನು ಗುರಿಯಾಗಿಸಿ ಮಾತನಾಡುತ್ತಿದ್ದಾರೆ ಎಂಬುದು ಬಹುತೇಕ ಜನರಿಗೆ ಅರ್ಥವಾಗಿದೆ. ಆದರೆ ಹಿಂದಿ ಚಿತ್ರರಂಗ, ಕಿರುತೆರೆಯಲ್ಲಿ ಅತ್ಯಂತ ಸಂಸ್ಕಾರವಂತ ನಟ ಎಂದೇ ಕರೆಸಿಕೊಂಡ ಅಲೋಕ್ ನಾಥ್ ಇಂಥ ಕೆಲಸ ಮಾಡುವುದಕ್ಕೆ ಸಾಧ್ಯವೇ ಎಂದು ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಟ್ಟು ಯೋಚಿಸುವಂತೆ ಮಾಡಿದೆ ನಂದಾ ಅವರ ಫೇಸ್ ಬುಕ್ ಸ್ಟೇಟಸ್!

ಬಾಲಿವುಡ್ ನಟಿ ತನುಶ್ರೀ ದತ್ತಾ ವರು ತಮ್ಮ ಮೇಲೆ ನಟ ನಾನಾ ಪಾಟೇಕರ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆಯ ನಂತರ ಕಂಗನಾ ರನೌತ್ ಸೇರಿದಂತೆ ಹಲವು ನಟಿಯರು ತಮಗೂ ಇಂಥದೇ ಅನುಭವವಾಗಿತ್ತು ಎಂದು ಧ್ವನಿ ಎತ್ತಿದ್ದರು. ಈ ಧ್ವನಿಯೇ ಆನ್ ಲೈನ್ ನಲ್ಲಿ #MeToo ಅಭಿಯಾನವಾಗಿದೆ. ಈ ಹ್ಯಾಶ್ ಟ್ಯಾಗ್ ಮೂಲಕ ಹಲವರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ವಿನ್ತಾ ನಂದಾ!

ಲೈಂಗಿಕ ಕಿರುಕುಳ ಆರೋಪ : ರಾಷ್ಟ್ರೀಯ ದಿನಪತ್ರಿಕೆ ಸಂಪಾದಕ ರಾಜೀನಾಮೆ

ತಾವು ಅಲೋಕ್ ನಾಥ್ ಅವರ ಬಗ್ಗೆಯೇ ಮಾತನಾಡುತ್ತಿರುವುದಾಗಿಯೂ ಚಾನೆಲ್ ವೊಂದಕ್ಕೆ ಅವರೇ ಖಚಿತಪಡಿಸಿದ್ದಾರೆ. ಅವರು ತಮ್ಮ ಕಹಿ ಅನುಭವಗಳನ್ನು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದು ಹೇಗೆಂದು ಅವರ ಮಾತಲ್ಲೇ ಕೇಳಿ...

ಬದುಕು ಬದಲಿಸಿದ ಘಟನೆ

'ಅವರ' ಪತ್ನಿ ನನಗೆ ಉತ್ತಮ ಸ್ನೇಹಿತೆಯಾಗಿದ್ದರು. ನಾನು ಅವರ ಮನೆಗೆ ಆಗಾಗ ತೆರಳುತ್ತಿದ್ದೆ, ಅವರೂ ನಮ್ಮ ಮನೆಗೆ ಬರುತ್ತಿದ್ದರು. ನಾವೆಲ್ಲರೂ ಸಿನಿಮಾ, ಕಿರುತೆರೆ ಕ್ಷೇತ್ರದಲ್ಲೇ ಇದ್ದಿದ್ದರಿಂದ ಹೀಗೆ ಆಗಾಗ ಭೇಟಿಯಾಗುವುದು ಸಹಜವಾಗಿತ್ತು. ನಾನು ಆಗಿನ ನಂ.1 ಟಿವಿ ಶೋ 'ತಾರಾ'ದ ನಿರ್ಮಾಪಕಿಯಾಗಿದ್ದೆ. ಈ ಸಂದರ್ಭದಲ್ಲಿ ಘಟನೆಯೊಂದು ನಡೆಯಿತು. ಅದು ನನ್ನ ಬದುಕನ್ನು ಬದಲಿಸಿತು- ವಿನ್ತಾ ನಂದಾ

ಹೆಸರಾಂತ ಲೇಖಕ ಚೇತನ್ ಭಗತ್ ತಪ್ಪಿಗೆ ಕ್ಷಮೆ ಕೇಳಿದರೂ ಚರ್ಚೆ ನಿಂತಿಲ್ಲ

ಎರಡು ದಶಕಗಳ ಹಿಂದೆ...

ಎರಡು ದಶಕಗಳ ಹಿಂದೆ...

1990 ರಲ್ಲಿ 'ತಾರಾ' ಎಂಬ ಧಾರಾವಾಹಿಯನ್ನು ಮಾಡುತ್ತಿದ್ದಾಗ ನಮ್ಮ ತಂಡದಲ್ಲಿದ್ದ ಮುಖ್ಯಪಾತ್ರಧಾರಿ ಮಹಿಳೆಯೊಬ್ಬರ ಮೇಲೆ 'ಅವರು' ಆಕರ್ಷಿತರಾಗಿದ್ದರು. ಸದಾ ಆಕೆಯ ಹಿಂದೆ ಬೀಳುತ್ತಿದ್ದರು. ಆದರೆ ಆಕೆಗೆ ಅವರ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ. ಆತ ಒಬ್ಬ ಮದ್ಯವ್ಯಸನಿ. ಆದರೆ ಆ ಕಾಲದಲ್ಲಿ ಅವರು ಪ್ರಸಿದ್ಧ ನಟರಾಗಿದ್ದರು. 'ಅವರು' ಆಕೆಯ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದರು. ಈ ಕುರಿತು ಆಕೆ ನಮಗೆ ದೂರು ನೀಡಿದಾಗ ನಾವು ಅವರನ್ನು ತಂಡದಿಂದ ದೂರವಿಡಲು ಪ್ರಯತ್ನಿಸಿದೆವು. ಕೊನೆಗೆ ಒಂದೇ ಒಂದು ದೃಶ್ಯದ ಚಿತ್ರೀಕಣವಿದ್ದಿದ್ದರಿಂದ ಅದೊಂದು ದೃಶ್ಯ ಮುಗಿಸಿ ನಂತರ ಅವರನ್ನು ಹೊರಗಿಡುವುದು ನಮ್ಮ ಯೋಜನೆಯಾಗಿತ್ತು- ವಿಂತಾ ನಂದಾ

ಬೆಚ್ಚಿಬಿತ್ತು ಯುರೋಪ್: ಪತ್ರಕರ್ತೆಯ ಅತ್ಯಾಚಾರ-ಕೊಲೆ, ಕಾರಣ ನಿಗೂಢ!

ಶೂಟಿಣಗ್ ನಲ್ಲಿ ಕುಡಿತ ರಂಪ ಮಾಡಿದ್ದರು!

ಶೂಟಿಣಗ್ ನಲ್ಲಿ ಕುಡಿತ ರಂಪ ಮಾಡಿದ್ದರು!

"ಆದರೆ ಅದ್ಹೇಗೋ ನಮ್ಮ ಯೋಜನೆಯ ಬಗ್ಗೆ ತಿಳಿದುಕೊಂಡ ಅವರು ಒಂದು ದಿನ ಶೂಟಿಂಗ್ ಸೆಟ್ ಗೆ ಕುಡಿದು ಬಂದು ರಂಪ ಮಾಡಿದ್ದರು. ನಮ್ಮೆಲ್ಲರೆದುರಲ್ಲೇ 'ಆ ಮಹಿಳೆ' ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದರು. ಆಗ ಬೇರೆ ದಾರಿ ಕಾಣದೆ ನಾವು ಅವರನ್ನು ಹೊರಗಿಟ್ಟೆವು. ಆದರೆ ಇದು ಚಾನೆಲ್ ನವರಿಗೆ ಇಷ್ಟವಾಗಲಿಲ್ಲ. ಅವರು ಧಾರಾವಾಹಿಯನ್ನೇ ಬದಲಿಸುವಂತೆ ಹೇಳಿದರು. ಕೆಲ ದಿನದ ನಂತರ ಧಾರಾವಾಹಿ ನಿಂತಿತು. ನಮ್ಮ ನಿರ್ಮಾಣ ಸಂಸ್ಥೆಯ ಎಲ್ಲಾ ಕಾರ್ಯ ಚಟುವಟಿಕೆಗಳೂ ಸ್ಥಗಿತಗೊಂಡಿತ್ತು!" -ವಿನ್ತಾ ನಂದಾ

ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ

ಆ ಕಹಿ ಅನುಭವ

ಆ ಕಹಿ ಅನುಭವ

"ಈ ಘಟನೆಯ ನಂತರ ನನಗೆ ಸಾಕಷ್ಟು ಆಘಾತವಾಗಿತ್ತು. ಭವಿಷ್ಯದ ಹಾದಿಯೇ ಗೋಚರಿಸಲಿಲ್ಲ. ಇದಾದ ನಂತರ ಕೆಲ ದಿನ 'ಅವರು' ಸುಮ್ಮನಿದ್ದರು. ಆದರೆ ನಮ್ಮ ಕೆಲವು ಸ್ನೇಹಿತರು ನಮ್ಮ ನಡುವೆ ಹದಗೆಟ್ಟಿದ್ದ ಸಂಬಂಧವನ್ನು ಸರಿಮಾಡಲು ಪ್ರಯತ್ನಿಸಿದರು. ಒಂದೇ ಕ್ಷೇತ್ರದಲ್ಲಿದ್ದಿದ್ದರಿಂದ ಆಗಾಗ ಬೇಟಿಯಾಗಲೇಬೇಕಿತ್ತು. ಮತ್ತೆ ಮೊದಲಿನಂತೆಯೇ ಅವರ ಮನೆಗೆ ತೆರಳುವುದು, ಅವರು ನಮ್ಮ ಮನೆಗೆ ಬರುವುದು ಆರಂಭವಾಯ್ತು. ತೀರಾ ಖಿನ್ನತೆಗೊಳಗಾಘಿದ್ದ ನಾನು ಪ್ರತಿದಿನವೂ ಮದ್ಯಪಾನ ಮಾಡುವ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದೆ. ಒಂದು ದಿನ 'ಅವರು' ನನ್ನನ್ನು ತಮ್ಮ ಮನೆಗೆ ಕರೆದರು. ನಾನು ಸಹಜವಾಗಿಯೇ ಹೋದೆ. ಆದರೆ ಅಂದು ಅವರ ಪತ್ನಿ ಮನೆಯಲ್ಲಿರಲಿಲ್ಲ ಎಂಬುದು ನನಗೆ ಆಮೇಲೆ ತಿಳಿಯಿತು. ಮತ್ತು ಭರಿಸುವ ಏನನನ್ನೋ ಬೆರೆಸಿದ ಆಲ್ಕೋಹಾಲ್ ಅನ್ನು ನನಗೆ ನೀಡಿದ್ದರು ಅನ್ನಿಸುತ್ತೆ. ನನಗೆ ಒಂದು ರೀತಿಯ ವಿಚಿತ್ರ ಅನುಭವವಾಗುತ್ತಿತ್ತು. ನನಗೆ ಅಲ್ಲಿರುವುದಕ್ಕೆ ಭಯವಾಗಿ ರಾತ್ರಿ ಎರಡು ಗಂಟೆಗೆ ಅಲ್ಲಿಂದ ಹೊರಟೆ. ರಸ್ತೆಗೆ ಬಂದರೆ ನಿಲ್ಲುವುದಕ್ಕೂ ಆಗುತ್ತಿರಲಿಲ್ಲ!" -ವಿನ್ತಾ ನಂದಾ

ನನ್ನ ಮನೆಯಲ್ಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ

ನನ್ನ ಮನೆಯಲ್ಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ

"ಆಟೋಕ್ಕಾಗಿ, ಟ್ಯಾಕ್ಸಿಗಾಗಿ ನಾನು ಕಾಯುತ್ತಿದ್ದಾಗ 'ಅವರೇ' ತಮ್ಮ ಕಾರು ಓಡಿಸಿಕೊಂಡು ಬಂದರು. ಕೂರುವಂತೆ ನನ್ನಲ್ಲಿ ಹೇಳಿದರು. ನನಗೆ ಇಲ್ಲ ಎನ್ನುವುವದಕ್ಕೆ ಸಾಧ್ಯವಿರಲಿಲ್ಲ. ಆ ಪರಿಸ್ಥಿತಿಯಲ್ಲಿ ಗೊತ್ತಿಲ್ಲದ ಯಾರೊಂದಿಗೂ ಹೋಗುವುದಕ್ಕಿಂತ ಇವರೊಂದಿಗೆ ಹೋಗುವುದು ಒಳಿತು ಎನ್ನಿಸಿತ್ತು. ಅವರು ನನ್ನನ್ನು ನಮ್ಮ ಮನೆ ಬಳಿ ಕರೆದೊಯ್ದರು. ನನಗೆ ಗೊತ್ತು, ಮನೆಗೆ ಬಂದ ಮೇಲೂ ನನ್ನ ಬಾಯಿಗೆ ಒಂದಷ್ಟು ಆಲ್ಕೋಹಾಲ್ ಸುರಿದರು. ನಂತರ ಏನಾಯಿತು ಎಂಬುದು ಗೊತ್ತಿಲ್ಲ. ಮತ್ತೆ ಎದ್ದಾಗ ದೇಹವೆಲ್ಲ ವಿಪರೀತ ನೋಯುತ್ತಿತ್ತು. ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ತಿಳಿಯಿತು. ಆದರೆ ಅದನ್ನು ಎಲ್ಲರೆದುರು ಬಾಯಿಬಿಡುವ ಧೈರ್ಯವಿರಲಿಲ್ಲ. ಏಕೆಂದರೆ ಆಗ ನಾನು ಎಲ್ಲವನ್ನೂ ಕಳೆದುಕೊಂದು ಸೋತು ನಿಂತಿದ್ದೆ" -ವಿನ್ತಾ ನಂದಾ

ಯಾರು ಆ ಸಂಸ್ಕಾರಿ ನಟ?

ಯಾರು ಆ ಸಂಸ್ಕಾರಿ ನಟ?

"ಆದರೆ ಇದೀಗ MeToo ಅಭಿಯಾನ ಆರಂಭವಾದಾಗ ನನಗೂ ಆ ಘಟನೆ ಮತ್ತೆ ನೆನಪಾಯ್ತು. ಎರಡು ದಶಕಗಳಂದ ನಾನು ಇದನ್ನು ಎಲ್ಲರಿಗೂ ಹೇಳಿಬಿಡಬೇಕು ಅಂತ ಕಾಯುತ್ತಿದ್ದೆ. ಈಗ ಆ ಸಮಯ ಬಂದಿದೆ. ನಾನು ಮಾತನಾಡುತ್ತಿರುವುದು ಒಬ್ಬ ಅತ್ಯುತ್ತಮ ನಟ. ಕಿರುತೆರೆ, ಸಿನೆಮಾ ರಂಗದ ಅತ್ಯಂತ 'ಸಂಸ್ಕಾರಿ' ನಟನ ಬಗ್ಗೆ"-ವಿನ್ತಾ ನಂದಾ

English summary
Vinta Nanda, a veteran writer and producer has accused Alok Nath who is known for his 'sanskarri on screen image' of sexually against on her slomost 2 decades ago
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X