ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ; ತೌಕ್ತೆ ಅಬ್ಬರ, ಸಾವಿನಿಂದ ಕ್ಷಣದಲ್ಲಿ ಬಚಾವಾದ ಮಹಿಳೆ

|
Google Oneindia Kannada News

ಮುಂಬೈ, ಮೇ 18; ಮುಂಬೈನಲ್ಲಿ ತೌಕ್ತೆ ಚಂಡಮಾರುತದ ಅಬ್ಬರದಿಂದ ಸೋಮವಾರ ಭಾರೀ ಮಳೆಯಾಗಿದೆ. ಗಾಳಿಗೆ ಮರವೊಂದು ಮುರಿದು ಬಿದಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯೊಬ್ಬರು ಅಚ್ಚರಿಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

Recommended Video

ಒಂದೇ ಒಂದು ಕ್ಷಣದಲ್ಲಿ ಬಚಾವಾದ ಮಹಿಳೆ | Oneindia Kannada

ಮಹಿಳೆ ಸಾವಿನಿಂದ ಕ್ಷಣ ಮಾತ್ರದಲ್ಲಿ ಪಾರಾಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಂಗಳವಾರ ವೈರಲ್ ಆಗಿದೆ. ಮರ ಬೀಳುವ ಸಮಯದಲ್ಲಿ ಅದೇ ಜಾಗದಲ್ಲಿ ಹೋಗುತ್ತಿದ್ದ ಮಹಿಳೆ ತಕ್ಷಣ ವಾಪಸ್ ಆಗಿದ್ದಾರೆ, ಇದರಿಂದ ಜೀವ ಉಳಿದಿದೆ.

ತೌಕ್ತೆ ಅಬ್ಬರ; ಕರ್ನಾಟಕದಲ್ಲಿ 6 ಸಾವು, 121 ಗ್ರಾಮಗಳಲ್ಲಿ ಹಾನಿ ತೌಕ್ತೆ ಅಬ್ಬರ; ಕರ್ನಾಟಕದಲ್ಲಿ 6 ಸಾವು, 121 ಗ್ರಾಮಗಳಲ್ಲಿ ಹಾನಿ

ಮುಂಬೈನ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದೆ. ಸುರಿಯುವ ಮಳೆಯ ನಡುವೆಯೇ ಮಹಿಳೆ ಮಹಿಳೆ ಛತ್ರಿ ಹಿಡಿದು ಸಾಗುತ್ತಿದ್ದರು. ಆಗ ಗಾಳಿಯ ರಭಸಕ್ಕೆ ಮರ ಮುರಿದು ರಸ್ತೆಗೆ ಬಿದ್ದಿದೆ. ಮರ ಮುರಿಯುದನ್ನು ನೋಡಿದ ಮಹಿಳೆ ತಕ್ಷಣ ವಾಪಸ್ ಓಡಿ ಬಂದಿದ್ದಾರೆ.

ಉಡುಪಿ: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಮೀನುಗಾರ ಕುಟುಂಬಗಳು ತತ್ತರ ಉಡುಪಿ: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಮೀನುಗಾರ ಕುಟುಂಬಗಳು ತತ್ತರ

Video Woman Narrow Escape In The Time Of Tree Uprooted And Fell Down

ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಮುಂಬೈ ನಗರದಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಮಂಗಳವಾರ ಸಹ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೋಮವಾರ ಸುರಿದ ಮಳೆಗೆ ಮುಂಬೈನ ಪಾಲ್ಘಾರ್‌ ಪ್ರದೇಶದಲ್ಲಿ ಇಬ್ಬರು, ಥಾಣೆ ಪ್ರದೇಶದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಮುಂಬೈನಲ್ಲಿ ಸೋಮವಾರ 114 ಕಿ. ಮೀ. ವೇಗದಲ್ಲಿ ಗಾಳಿ ಬೀಸಿದೆ. ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದು, ಯಾರೂ ಸಹ ಸಮುದ್ರ ತೀರಕ್ಕೆ ಹೋಗಬಾರದು ಎಂದು ಶನಿವಾರದಿಂದಲೇ ಜನರಿಗೆ ಎಚ್ಚರಿಕೆ ನೀಡಲಾಗಿತ್ತು.

English summary
Mumbai a woman had a narrow escape when she managed to move away from the spot just in time as a tree uprooted and fell there. Mumbai received heavy rain due to cyclone Tauktae.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X