ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವನ ದೇವಸ್ಥಾನ ಒಳಗೆ ಸ್ಕೂಟರ್ ನುಗ್ಗಿಸಿದ ಯುವತಿ

|
Google Oneindia Kannada News

ಮಹಾರಾಷ್ಟ, ಮಾರ್ಚ್ 8: ಹೊಸ ಸ್ಕೂಟರ್ ಕೊಂಡುಕೊಂಡಾಗ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಯುವತಿ ತನ್ನ ಸ್ಕೂಟರ್ ಅನ್ನು ದೇವಸ್ಥಾನದ ಒಳಗೆಯೇ ನುಗ್ಗಿಸಿದ್ದಾಳೆ. ಈ ಘಟನೆ ಮಹಾರಾಷ್ಟದಲ್ಲಿ ನಡೆದಿದೆ.

ಮಹಾರಾಷ್ಟದ ವಕಾಡ್ ನಗರದ ಶಿವನ ದೇವಸ್ಥಾನದಲ್ಲಿ ಇಂತಹ ಘಟನೆ ನಡೆದಿದೆ. ದೇವಸ್ಥಾನದ ಹೊರೆಗೆ ಸ್ಕೂಟರ್ ಮೇಲೆ ಕುಳಿತಿದ್ದ ಯುವತಿ ಸೀದಾ ದೇವಸ್ಠಾನದ ಒಳಗೆ ಬಂದಿದ್ದಾರೆ. ಶಿವನ ಮುಂದೆ ಇರುವ ನಂದಿ ಹತ್ತಿರ ಬಂದು ಬಿದ್ದಿದ್ದಾರೆ. ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Video Viral: Women Enters Temple With Scooter

ವೈರಲ್ ವಿಡಿಯೋ ; ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಟ್ಟಿದ್ದು ಹೀಗೆವೈರಲ್ ವಿಡಿಯೋ ; ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಟ್ಟಿದ್ದು ಹೀಗೆ

ಈ ಘಟನೆ ನಡೆದಿರುವುದು ನಿಜವಾದರೂ, ಆ ಯುವತಿ ಬೇಕೆಂದು ಈ ರೀತಿ ಮಾಡಿಲ್ಲ. ಆಕೆಯ ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ಸ್ಕೂಟರ್ ನುಗ್ಗಿಸಿದ್ದಾಳೆ. ದೇವಸ್ಠಾನದ ಹೊರಗೆ ತನ್ನ ಸ್ಕೂಟರ್ ಆನ್ ಮಾಡಿ ಕುಳಿತಿದ್ದಳು. ತನಗೆ ತಿಳಿಯದೆ ಎಕ್ಸಲೇಟರ್ ಮೇಲೆ ಕೈ ಇಟ್ಟಿದ್ದಾಳೆ. ಇದರಿಂದ ಸ್ಕೂಟರ್ ದೇವಸ್ಠಾನದ ಒಳಗೆ ನುಗ್ಗಿದೆ.

ದೇವಸ್ಠಾನದ ಒಳಗೆ ನಂದಿ ವಿಗ್ರಹಕ್ಕೆ ಗುದ್ದಿ, ಯುವತಿಯನ್ನು ಬಿದ್ದಳು. ಆಗ ಆಕೆಯ ಸಹಾಯಕ್ಕೆ ಸ್ಥಳಿಯರು ಬಂದರು. ದೇವಸ್ಥಾನಕ್ಕೆ ಬಂದ ಭಕ್ತರು ಆಕೆಯನ್ನು ಎತ್ತಿದರು. ಯುವತಿ ದೇವಸ್ಥಾನದಿಂದ ವಾಪಸ್ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ.

English summary
A womans enters scooter inside of the temple in Maharashtra. The video is now going viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X