ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಸೈರಸ್ ಮಿಸ್ತ್ರಿ ಕಾರಿನ ಕೊನೆಯ ಸಿಸಿಟಿವಿ ಫೂಟೇಜ್ ಬಹಿರಂಗ

|
Google Oneindia Kannada News

ಮುಂಬೈ ಸೆಪ್ಟೆಂಬರ್ 06: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈ ಪಕ್ಕದ ಪಾಲ್ಘರ್‌ನಲ್ಲಿ ಈ ದುರ್ಘಟನೆಯಲ್ಲಿ ಸೈರಸ್ ಮಿಸ್ತ್ರಿ ಜೊತೆ ಜಹಾಂಗೀರ್ ಪಾಂಡೋಲೆ ಸಹ ಮೃತಪಟ್ಟಿದ್ದರು. ಇದೀಗ ಈ ಅಪಘಾತಕ್ಕೂ ಮುನ್ನ ನಡೆದ ಆಘಾತಕಾರಿ ಸಿಸಿಟಿವಿ ದೃಶ್ಯವೊಂದು ಬೆಳಕಿಗೆ ಬಂದಿದೆ. ಇದು ಅಪಘಾತಕ್ಕೆ 7 ನಿಮಿಷಗಳ ಮೊದಲು ಕಂಡುಬಂದ ದೃಶ್ಯವಾಗಿದೆ.

ಪಾಲ್ಘರ್ ಜಿಲ್ಲೆಯ ಚರೋಟಿ ಚೆಕ್ ಪೋಸ್ಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾ ಐಷಾರಾಮಿ ಮರ್ಸಿಡಿಸ್ ಕಾರಿನಲ್ಲಿ ಸೈರಸ್ ಮಿಸ್ತ್ರಿ ಸುಮಾರು 134 ಕಿಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದುದನ್ನು ತೋರಿಸುತ್ತದೆ. ಭಾನುವಾರ ಮಧ್ಯಾಹ್ನ 2:21ರ ಸುಮಾರಿಗೆ ಸೈರಸ್ ಮಿಸ್ತ್ರಿ ಅವರ ಕಾರು ಚೆಕ್ ಪೋಸ್ಟ್ ದಾಟಿತ್ತು. ಈ ಚೆಕ್ ಪೋಸ್ಟ್ ನಿಂದ 20 ಕಿ.ಮೀ ಮುಂದೆ ಹೋದ ನಂತರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಮರ್ಸಿಡಿಸ್ ಕಾರು ಕೇವಲ 9 ನಿಮಿಷಗಳಲ್ಲಿ 20 ಕಿ.ಮೀ. ಚಲಾಯಿಸಲಾಗಿದೆ. ಇದರಿಂದಾಗಿ ಈ ಭೀಕರ ಅಪಘಾತ ಸಂಭವಿಸಿದೆ

ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ

ಓವರ್‌ಟೇಕ್ ಮಾಡುವ ಸಮಯದಲ್ಲಿ ಅತಿ ವೇಗ ಮತ್ತು ತಪ್ಪು ಲೆಕ್ಕಾಚಾರದಿಂದಾಗಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಇಬ್ಬರೂ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಆದರೆ ಇಬ್ಬರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ, ಕಾರಿನ ಮುಂಭಾಗದ ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆ. ಆದರೆ ಹಿಂದಿನ ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ತೆರೆಯಲಿಲ್ಲ. ಇದರಿಂದ ಸೈರಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಿಸ್ತ್ರಿ ತಲೆಗೆ ಬಲವಾದ ಪೆಟ್ಟು

ಮಿಸ್ತ್ರಿ ತಲೆಗೆ ಬಲವಾದ ಪೆಟ್ಟು

ಇದರಿಂದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇಬ್ಬರಿಗೂ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಅಪಘಾತದಲ್ಲಿ ಸೈರಸ್ ಮಿಸ್ತ್ರಿ ದೇಹದ ಆಂತರಿಕ ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಇದರಿಂದ ಸೈರಸ್ ಮಿಸ್ತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಹಾಂಗೀರ್ ಅವರ ಎಡಗಾಲಿನ ಮೂಳೆ ಮುರಿತ ಮತ್ತು ತಲೆಗೆ ಗಾಯವಾಗಿತ್ತು. ಇವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಅಪಘಾತ ಹೇಗೆ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಸ್ತೆ ಬದಿಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಅತಿವೇಗದಲ್ಲಿ ಬಂದಿದ್ದು, ಸೈಡ್‌ನಿಂದ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವಾಗ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಇಂದು ಮಿಸ್ತ್ರಿ ಅವರ ಅಂತ್ಯಕ್ರಿಯೆ

ಇಂದು ಮಿಸ್ತ್ರಿ ಅವರ ಅಂತ್ಯಕ್ರಿಯೆ

ಟಾಟಾ ಆ್ಯಂಡ್ ಸನ್ಸ್‌ನ ಮಾಜಿ ಅಧ್ಯಕ್ಷ 54 ವರ್ಷದ ಸೈರಸ್ ಮಿಸ್ತ್ರಿ ಅವರ ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ ವರ್ಲಿ ಚಿತಾಗಾರದಲ್ಲಿ ನಡೆಯಲಿದೆ. ಸೈರಸ್ ಮಿಸ್ತ್ರಿ ಅವರ ನಿಧನವು ಸಮಾಜದ ಎಲ್ಲಾ ವರ್ಗದ ಜನರನ್ನು ದಿಗ್ಭ್ರಮೆಗೊಳಿಸಿದೆ. ಅವರಿಗೆ ರಾಜಕಾರಣಿಗಳಿಂದ ಹಿಡಿದು ಕೈಗಾರಿಕೋದ್ಯಮಿಗಳವರೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೈರಸ್ ಮಿಸ್ತ್ರಿ ಅವರ ಕುಟುಂಬದ ಬಹುತೇಕ ಸದಸ್ಯರು ವಿದೇಶದಲ್ಲಿ ನೆಲೆಸಿದ್ದು, ಸೋಮವಾರ ರಾತ್ರಿ ಮುಂಬೈ ತಲುಪಿದ್ದಾರೆ.


ಸೈರಸ್ ಮಿಸ್ತ್ರಿ ಅವರ ಪುತ್ರ ಮತ್ತು ಪತ್ನಿ ಕೌಟುಂಬಿಕ ಕಾರ್ಯಕ್ರಮಕ್ಕಾಗಿ ಯುಕೆಯಲ್ಲಿದ್ದಾರೆ. ಅವರು ಸೋಮವಾರ ಮುಂಬೈ ತಲುಪಿದ್ದಾರೆ. ಪತ್ನಿ ಮತ್ತು ಮಗನನ್ನು ಹೊರತುಪಡಿಸಿ, ಅವರ ತಾಯಿ ಪ್ಯಾಟ್ಸಿ ಪೆರಿನ್ ದುಬಾಸ್, ಸಹೋದರ ಶಾಪೂರ್ ಮಿಸ್ತ್ರಿ, ಇಬ್ಬರು ಸಹೋದರಿಯರಲ್ಲದೆ ಲೈಲಾ ಮಿಸ್ತ್ರಿ ಮತ್ತು ಅಲು ಮಿಸ್ತ್ರಿ ಅವರು ಅಂತ್ಯಕ್ರಿಯೆಗೆ ಆಗಮಿಸಲಿದ್ದಾರೆ. ಸೈರಸ್ ಅವರ ತಂದೆ ಮತ್ತು ಉದ್ಯಮಿ ಪಲ್ಲೊಂಜಿ ಮಿಸ್ತ್ರಿ (93) ಈ ವರ್ಷ ಜೂನ್ 28 ರಂದು ನಿಧನರಾದರು. 54 ವರ್ಷದ ಸೈರಸ್ ಮಿಸ್ತ್ರಿ ಅವರ ಮರಣೋತ್ತರ ಪರೀಕ್ಷೆಯು ಅವರಿಗೆ ಪ್ರಮುಖ ಅಂಗಗಳಿಗೆ ತೀವ್ರವಾದ ಗಾಯಗಳಾಗಿರುವುದು ಬಹಿರಂಗಪಡಿಸಿದೆ. ಖ್ಯಾತ ಸ್ತ್ರೀರೋಗ ತಜ್ಞೆ ಅನಾಹಿತಾ ಚಾಲನೆ ಮಾಡುತ್ತಿದ್ದು, ಆಕೆಯ ಪತಿ ಡೇರಿಯಸ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೈರಸ್‌ ಮಿಸ್ತ್ರಿ ಸಾವಿನ ಕುರಿತು ಪಾಠ ಮಾಡಿದ ನಿತಿನ್‌ ಗಡ್ಕರಿ

ಸೈರಸ್‌ ಮಿಸ್ತ್ರಿ ಸಾವಿನ ಕುರಿತು ಪಾಠ ಮಾಡಿದ ನಿತಿನ್‌ ಗಡ್ಕರಿ

ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಜನಸಾಮಾನ್ಯರ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಚಿವ ನಿತಿನ್ ಗಡ್ಕರಿ, "ಹಿಂಭಾಗದವರಿಗೆ ಸೀಟ್ ಬೆಲ್ಟ್ ಅಗತ್ಯವಿಲ್ಲ ಎಂದು ಜನರು ಭಾವಿಸುತ್ತಾರೆ, ಇದು ಬಹಳ ದೊಡ್ಡ ಸಮಸ್ಯೆ, ಯಾವುದೇ ಅಪಘಾತದ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಮುಂಭಾಗದಂತೆ ಹಿಂಭಾಗದಲ್ಲೂ ಸೀಟ್ ಬೆಲ್ಟ್‌ಗಳು ಅಗತ್ಯವಿದೆ. ಅದನ್ನು ಧರಿಸಬೇಕು." ಐಎಎಯ ಜಾಗತಿಕ ಶೃಂಗಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವಿಷಯ ತಿಳಿಸಿದ್ದಾರೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, "ಸೈರಸ್ ಮಿಸ್ತ್ರಿ ಅವರ ಅಪಘಾತ ಅತ್ಯಂತ ದುರದೃಷ್ಟಕರ ಮತ್ತು ದೇಶಕ್ಕೆ ದೊಡ್ಡ ಹಾನಿ, ಅವರು ನನಗೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ನಮ್ಮ ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಮತ್ತು 1 ಲಕ್ಷ 50 ಸಾವಿರ ಸಾವುಗಳು ಸಂಭವಿಸುತ್ತವೆ ಮತ್ತು ಈ ಸಾವುಗಳಲ್ಲಿ, 65 ಪ್ರತಿಶತ 18 ರಿಂದ 34 ವರ್ಷ ವಯಸ್ಸಿನವರಾಗಿದ್ದಾರೆ. ಇದರಲ್ಲಿನ ಸಾವುಗಳಿಗೆ ಸಂಚಾರ ನಿಯಮಗಳ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದರು.

English summary
A shocking CCTV footage of Cyrus Mistry's car before the road accident has come to light.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X