ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರಾವತಿ ಕೆಮಿಸ್ಟ್‌ ಹತ್ಯೆಗೆ ಪ್ರಚೋದಿಸಿದ್ದ ಪಶುವೈದ್ಯನ ಬಂಧನ

|
Google Oneindia Kannada News

ಮುಂಬೈ, ಜು.2: ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿಯ ನೂಪುರ್ ಶರ್ಮಾ ಮಾಡಿದ ವಿವಾದಾತ್ಮಕ ಹೇಳೀಕೆಗಳನ್ನು ಬೆಂಬಲಿಸುವ ವಾಟ್ಸಾಪ್ ಪೋಸ್ಟ್ ಅನ್ನು ಪ್ರಸಾರ ಮಾಡಿದ್ದಕ್ಕಾಗಿ ಜೂನ್ 21ರಂದು ಕೊಲ್ಲಲ್ಪಟ್ಟ ಉಮೇಶ್ ಕೋಲ್ಹೆ (54) ಹತ್ಯೆಗೆ ಸಂಬಂಧಿಸಿದಂತೆ ಅಮರಾವತಿಯ ಕೊತ್ವಾಲಿ ನಗರ ಪೊಲೀಸರು 44 ವರ್ಷದ ಪಶುವೈದ್ಯರನ್ನು ಬಂಧಿಸಿದ್ದಾರೆ.

ಪ್ರಕರಣದ ಆರನೇ ಆರೋಪಿಯಾಗಿ, ನಗರದಲ್ಲಿ ಕ್ಲಿನಿಕ್ ನಡೆಸುತ್ತಿರುವ ವೈದ್ಯ ಯೂಸುಫ್ ಖಾನ್ ಬಹದ್ದೂರ್ ಖಾನ್ (44) ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ನೂಪುರ್‌ ಶರ್ಮಾ ಅವರ ಹೇಳೀಕೆಗಳು ಮತ್ತು ಕೊಲ್ಹೆ ಅವರ ಹತ್ಯೆಯ ನಡುವಿನ ಸಂಬಂಧವನ್ನು ದೃಢಪಡಿಸಿದ ಉಪ ಪೊಲೀಸ್ ಆಯುಕ್ತ (ಅಮರಾವತಿ) ವಿಕ್ರಮ್ ಸಾಲಿ ಅವರು, ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಅವರು (ಕೊಲ್ಹೆ) ಮಾಡಿದ ಪೋಸ್ಟ್‌ಗೆ ಸೇಡು ತೀರಿಸಿಕೊಳ್ಳಲು ಕೊಲೆಯ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಉದಯಪುರ ಮಾದರಿಯಲ್ಲೇ ಅಮರಾವತಿಯಲ್ಲೂ ಹತ್ಯೆ: ತನಿಖೆಗೆ ಆದೇಶಿದ ಗೃಹ ಇಲಾಖೆಉದಯಪುರ ಮಾದರಿಯಲ್ಲೇ ಅಮರಾವತಿಯಲ್ಲೂ ಹತ್ಯೆ: ತನಿಖೆಗೆ ಆದೇಶಿದ ಗೃಹ ಇಲಾಖೆ

 ಕೊಲೆ ಮಾಡಲು ನಿರ್ಧಾರ

ಕೊಲೆ ಮಾಡಲು ನಿರ್ಧಾರ

ಕೊಲೆಯಲ್ಲಿ ಖಾನ್ ಪಾತ್ರವನ್ನು ವಿವರಿಸಿದ ಪೊಲೀಸ್ ಅಧಿಕಾರಿಯೊಬ್ಬರು, ಖಾನ್ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್‌ಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಕೋಲ್ಹೆ ವಿರುದ್ಧ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಿದ್ದರು. ಇದು ಕೋಲ್ಹೆ ವಿರುದ್ಧ ಆರೋಪಿಯನ್ನು ಕೆರಳಿಸಿತು ಮತ್ತು ಅವರು ಅವನನ್ನು ಕೊಲೆ ಮಾಡಲು ನಿರ್ಧರಿಸಿದರು. ಹಾಗಾಗಿ, ಖಾನ್ ಇತರ ಆರೋಪಿಗಳನ್ನು ಪ್ರಚೋದಿಸಿದರು ಎಂದು ಹೇಳಿದ್ದಾರೆ.

ಉದಯಪುರ ಟೈಲರ್ ಹತ್ಯೆ: 32 ಹಿರಿಯ ಪೊಲೀಸರ ವರ್ಗಾವಣೆಉದಯಪುರ ಟೈಲರ್ ಹತ್ಯೆ: 32 ಹಿರಿಯ ಪೊಲೀಸರ ವರ್ಗಾವಣೆ

 ಒಬ್ಬ ಆರೋಪಿ ಇನ್ನೂ ನಾಪತ್ತೆ

ಒಬ್ಬ ಆರೋಪಿ ಇನ್ನೂ ನಾಪತ್ತೆ

ಶನಿವಾರ, ಖಾನ್ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಮುಂದುವರಿದು ಅವರನ್ನು ಜುಲೈ 4 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಒಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ, ಕೋಲ್ಹೆಯನ್ನು ಕೊಲೆ ಮಾಡಲು ಬೈಕ್‌ನಲ್ಲಿ ಬಂದ ಮೂವರಲ್ಲಿ ಇಬ್ಬರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ಜೂನ್ 21 ರಂದು ರಾತ್ರಿ 10 ರಿಂದ 10.30 ರ ನಡುವೆ ಉಮೇಶ್ ಕೋಲ್ಹೆ ತನ್ನ ಮೆಡಿಕಲ್ ಶಾಪ್ ಅನ್ನು ಮುಚ್ಚಿ ತನ್ನ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕೊಲೆ ನಡೆದಿತ್ತು. ಆಗ ಕೊಲ್ಹೆ ಅವರ ಪುತ್ರ ಸಂಕೇತ್ (27) ಮತ್ತು ಸಂಕೇತ್ ಅವರ ಪತ್ನಿ ವೈಷ್ಣವಿ ಮತ್ತೊಂದು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು.

 ಕುತ್ತಿಗೆಯ ಎಡಭಾಗಕ್ಕ ಚಾಕುವಿನಿಂದ ಇರಿತ

ಕುತ್ತಿಗೆಯ ಎಡಭಾಗಕ್ಕ ಚಾಕುವಿನಿಂದ ಇರಿತ

ತಮ್ಮ ದೂರಿನಲ್ಲಿ ಸಂಕೇತ್ ಪೊಲೀಸರಿಗೆ ನಾವು ಪ್ರಭಾತ್ ಚೌಕ್‌ನಿಂದ ಚಲಿಸುತ್ತಿದ್ದೆವು. ನಮ್ಮ ಸ್ಕೂಟರ್‌ ಮಹಿಳಾ ಕಾಲೇಜು ನ್ಯೂ ಹೈಸ್ಕೂಲ್‌ನ ಗೇಟ್‌ಗೆ ತಲುಪಿದ್ದವು. ಆಗ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಇದ್ದಕ್ಕಿದ್ದಂತೆ ನನ್ನ ತಂದೆಯ ಸ್ಕೂಟರ್‌ನ ಮುಂದೆ ಬಂದರು. ಅವರು ನನ್ನ ತಂದೆಯ ಬೈಕನ್ನು ನಿಲ್ಲಿಸಿದರು ಮತ್ತು ಅವರಲ್ಲಿ ಒಬ್ಬರು ಅವರ ಕುತ್ತಿಗೆಯ ಎಡಭಾಗದಲ್ಲಿ ಚಾಕುವಿನಿಂದ ಇರಿದಿದ್ದರು. ನನ್ನ ತಂದೆ ನೆಲಕ್ಕೆ ಬಿದ್ದು ರಕ್ತಸ್ರಾವವಾಗುತ್ತಿತ್ತು. ನಾನು ನನ್ನ ಸ್ಕೂಟರ್ ನಿಲ್ಲಿಸಿ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದೆ. ಆಗ ಮತ್ತೊಬ್ಬ ವ್ಯಕ್ತಿ ಬಂದಿದ್ದು, ಮೂವರು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾದರು ಎಂದು ಹೇಳಿದ್ದಾರೆ.

ಇತರರ ಸಹಾಯದಿಂದ, ಕೊಲ್ಹೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಅದೇ ರಾತ್ರಿ ಚಿಕಿತ್ಸೆಯಲ್ಲಿ ನಿಧನರಾದರು. 24 ಗಂಟೆಗಳ ಒಳಗೆ ಅಮರಾವತಿ ಪೊಲೀಸರು ಇಬ್ಬರನ್ನು ಬಂಧಿಸಿದರು ಮತ್ತು ತನಿಖೆಯ ಆಧಾರದ ಮೇಲೆ ಇತರ ಮೂವರನ್ನು ಬಂಧಿಸಲಾಯಿತು.

 ಶೋಯೆಬ್ ಕೊಲ್ಹೆಗೆ ಚೂರಿ ಇರಿದವ

ಶೋಯೆಬ್ ಕೊಲ್ಹೆಗೆ ಚೂರಿ ಇರಿದವ

ಅಬುಜಾರ್ ಮಸೀದಿ ಹಿಂಭಾಗದ ಬಿಸ್ಮಿಲ್ಲಾ ನಗರದ ನಿವಾಸಿ ಮುದ್ದಾಸಿರ್ ಅಹ್ಮದ್ ಅಲಿಯಾಸ್ ಸೋನು ರಜಾ ಶೇಖ್ (22), ಸುಫಿಯಾನ್ ನಗರದ ನಿವಾಸಿ ಶಾರುಖ್ ಪಠಾಣ್ ಅಲಿಯಾಸ್ ಬಾದ್‌ಶಾ ಹಿದಾಯತ್ ಖಾನ್ (25), ಲಾಲ್‌ಖಾಲಿ ಪ್ರದೇಶದ ನಾನೂ ಅಲಿಯಾಸ್ ನೌಫಿಕ್ ವಾಲ್ಡ್ ತಸ್ಲೀಮ್ (24) ಬಂಧಿತ ಆರೋಪಿಗಳು. ಇಮಾಮ್ ಹುಸೇನ್ ಮಸೀದಿ ಬಳಿ ಮತ್ತು ಛಾಯಾನಗರದ ನಿವಾಸಿ ಶೋಯೆಬ್ ಅಲಿಯಾಸ್ ಭೂರ್ಯಾ ಖಾನ್ ಕೊಲ್ಹೆಗೆ ಚೂರಿ ಇರಿದವನು ಶೋಯೆಬ್ ಎಂದು ಪೊಲೀಸರು ತಿಳಿಸಿದ್ದಾರೆ.

Recommended Video

ಟೈಲರ್ ಹತ್ಯೆ ವಿಚಾರಕ್ಕೆ ಸಾಥ್ ಕೊಟ್ರಾ ರಾಹುಲ್ ಗಾಂಧಿ! | OneIndia Kannada

English summary
Kotwali Nagar police in Amravati have arrested a 44-year-old veterinarian in connection with the murder of Umesh Kolhe (54), who was killed on June 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X