ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದದ ನಡುವೆ ಕಾಡಿದ ಅನಾರೋಗ್ಯ: ಸಾವರ್ಕರ್ ಮೊಮ್ಮಗ ಆಸ್ಪತ್ರೆಗೆ

|
Google Oneindia Kannada News

ಮುಂಬೈ, ಜನವರಿ 4: ಹಿಂದುತ್ವವಾದಿ ವೀರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರನ್ನು ಅಧಿಕ ರಕ್ತದೊತ್ತಡದ ಕಾರಣದಿಂದ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೀರ್ ಸಾವರ್ಕರ್ ಅವರ ಕುರಿತಂತೆ ದೇಶದಾದ್ಯಂತ ತೀವ್ರ ಚರ್ಚೆಗಳು ಮತ್ತು ವಿವಾದಗಳು ಉಂಟಾಗುತ್ತಿದ್ದು, ವಿರೋಧಿಗಳಿಗೆ ಪ್ರತ್ಯುತ್ತರ ನೀಡುವುದರಲ್ಲಿ ಸತತ ಹೋರಾಟ ನಡೆಸಿದ್ದ 55 ವರ್ಷದ ರಂಜಿತ್ ಅವರು, ಅತೀವ ಒತ್ತಡ ಹಾಗೂ ಉದ್ವಿಗ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ವೀರ ಸಾವರ್ಕರ್ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್ ಬುಕ್ ಲೆಟ್? ವೀರ ಸಾವರ್ಕರ್ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್ ಬುಕ್ ಲೆಟ್?

ಕಾಂಗ್ರೆಸ್‌ನ ಸೇವಾದಳವು ಮಧ್ಯಪ್ರದೇಶದಲ್ಲಿ ನಡೆದ ಶಿಬಿರದ ವೇಳೆ ಕಿರುಪುಸ್ತಕವೊಂದನ್ನು ಹಂಚಿತ್ತು. ವೀರ್ ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆ ನಡುವೆ ದೈಹಿಕ ಸಂಪರ್ಕವಿತ್ತು. ಸಾವರ್ಕರ್ ಸಲಿಂಗಕಾಮಿಯಾಗಿದ್ದರು ಎಂದು ಅದರಲ್ಲಿ ಬರೆಯಲಾಗಿತ್ತು. ಜತೆಗೆ ಸಾವರ್ಕರ್ ಅವರ ರಾಷ್ಟ್ರಪ್ರೇಮವನ್ನು ಪ್ರಶ್ನಿಸಿದ್ದ ಬರಹ, ಅವರ ಪ್ರತಿಷ್ಠೆಯನ್ನು ಕುಂದಿಸುವಂತೆ ಮಾಡಿತ್ತು. ಇದು ಭಾರಿ ವಿವಾದ ಸೃಷ್ಟಿಸಿತ್ತು.

Veer Savarkars Grandson Ranjit Hospitalised Due To High Blood Pressure

'ತಾತನನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ರಂಜಿತ್ ಅವರು ಒಂದರ ಮೇಲೊಂದು ಟೆಲಿವಿಷನ್ ಸ್ಟುಡಿಯೋಗಳಿಗೆ ತೆರಳಿ ಸಂವಾದಗಳಲ್ಲಿ ಪಾಲ್ಗೊಂಡಿದ್ದರು. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕಳೆದ ರಾತ್ರಿ ಅವರ ರಕ್ತದೊತ್ತಡ 220ಕ್ಕೆ ಏರಿತ್ತು. ಕೂಡಲೇ ಅವರನ್ನು ಮಾಹಿಮ್‌ನಲ್ಲಿರುವ ರಹೇಜಾ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ರಂಜಿತ್ ಅವರನ್ನು ಐಸಿಯುದಲ್ಲಿ ಇರಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ' ಎಂದು ಮೂಲಗಳು ತಿಳಿಸಿವೆ.

English summary
Veer Savarkar's 55-year- old grandson hospitalised due to high blood pressure on Friday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X