ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಗೆ ಆಘಾತ: ಪಕ್ಷಕ್ಕೆ ರಾಜೀನಾಮೆ ನೀಡಿದ ಊರ್ಮಿಳಾ ಮಾತೋಂಡ್ಕರ್
ಮುಂಬೈ, ಸೆಪ್ಟೆಂಬರ್ 10: ಬಾಲಿವುಡ್ ನಟಿ, ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2019 ರ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿ, ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಊರ್ಮಿಳಾ ಮಾತೋಂಡ್ಕರ್, ಪಕ್ಷದಲ್ಲಿನ ಆಂತರಿಕ ಕಲಹದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಮುಂಬೈ ಉತ್ತರ ಕ್ಷೇತ್ರದಿಂದ ಬಾಲಿವುಡ್ ನಟಿ ಕಾಂಗ್ರೆಸ್ ಅಭ್ಯರ್ಥಿ?
"ಗುರಿ, ಅಭಿವೃದ್ಧಿಗಾಗಿ ಹೋರಾಡುವ ಬದಲು ಕ್ಷುಲ್ಲಕ ಆಂತರಿಕ ರಾಜಕೀಯಕ್ಕಾಗಿ ನನ್ನನ್ನು ಕೆಲವರು ಬಳಸಿಕೊಳ್ಳುತ್ತಿರುವುದನ್ನು ನನ್ನ ಮನಸ್ಸು ಒಪ್ಪುವುದಿಲ್ಲ. ಆದ್ದರಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಮಾತೋಂಡ್ಕರ್ ಹೇಳಿದ್ದಾರೆ.
ಊರ್ಮಿಳಾ ಮುಖ ನೋಡಿ ಮಣೆ ಹಾಕಿದ ಕಾಂಗ್ರೆಸ್: ಬಿಜೆಪಿ ಸಂಸದ
ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಊರ್ಮಿಳಾ ಮಾತೋಂಡ್ಕರ್ ಬಿಜೆಪಿಯ ಗೋಪಾಲ್ ಶೆಟ್ಟಿ ಅವರ ವಿರುದ್ಧ ಸೋಲುಂಡಿದ್ದರು.
Comments
mumbai maharashtra congress resignation ಮುಂಬೈ ಮಹಾರಾಷ್ಟ್ರ ಕಾಂಗ್ರೆಸ್ ರಾಜೀನಾಮೆ maharashtra assembly elections 2019
English summary
Actor-turned-politician Urmila Matondkar resigns from the Congress party.