ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ : ನಿರ್ಮಾಣ ಹಂತದ ಕಟ್ಟಡ ಕುಸಿತ, 3 ಸಾವು

|
Google Oneindia Kannada News

ಮುಂಬೈ, ಡಿಸೆಂಬರ್ 23 : ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದಿದೆ. ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 9ಕ್ಕೂ ಅಧಿಕ ಕಾರ್ಮಿಕರು ಗಾಯಗೊಂಡಿದ್ದಾರೆ.

ಭಾನುವಾರ ಮುಂಜಾನೆ ಗೋರೆಗಾಂವ್ ಪ್ರದೇಶದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ತಕ್ಷಣದ ಸ್ಥಳಕ್ಕೆ ಆಗಮಿಸಿದ ಎನ್‌ಟಿಆರ್‌ಎಫ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.

ಮುಂಬೈ: 5 ಸ್ಟಾರ್ ಟ್ರಿಡೆಂಟ್ ಹೊಟೇಲ್ ಬಳಿ ಅಗ್ನಿ ಆಕಸ್ಮಿಕಮುಂಬೈ: 5 ಸ್ಟಾರ್ ಟ್ರಿಡೆಂಟ್ ಹೊಟೇಲ್ ಬಳಿ ಅಗ್ನಿ ಆಕಸ್ಮಿಕ

ಅವಶೇಷಗಳಡಿ ಸಿಲುಕಿದ್ದ 9 ಜನರನ್ನು ರಕ್ಷಣೆ ಮಾಡಲಾಯಿತು. ಸಿದ್ದಾರ್ಥ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತಪಟ್ಟ ಕಾರ್ಮಿಕರ ಗುರುತು ಇನ್ನೂ ಪತ್ತೆಯಾಗಿಲ್ಲ.

ಲಾಜಿಸ್ಟಿಕ್ ಕಂಪನಿ ಗೋದಾಮಿನಲ್ಲಿ ಛಾವಣಿ ಕುಸಿತಲಾಜಿಸ್ಟಿಕ್ ಕಂಪನಿ ಗೋದಾಮಿನಲ್ಲಿ ಛಾವಣಿ ಕುಸಿತ

Under construction building collapses in Mumbai 3 dead

ಚಿತ್ರಗಳು : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತಚಿತ್ರಗಳು : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ

ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಅವಶೇಷಗಳ ಅಡಿ ಇನ್ನೂ ಕಾರ್ಮಿಕರು ಸಿಲುಕಿದ್ದಾರೆಯೇ? ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ತ್ಯಾಗರಾಜನಗರ ಅಪಾರ್ಟ್‌ಮೆಂಟ್ ಕುಸಿತ, ಎಫ್‌ಐಆರ್ ದಾಖಲುತ್ಯಾಗರಾಜನಗರ ಅಪಾರ್ಟ್‌ಮೆಂಟ್ ಕುಸಿತ, ಎಫ್‌ಐಆರ್ ದಾಖಲು

ಸಿದ್ದಾರ್ಥ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

English summary
An under-construction building collapsed at Goregaon area in Mumbai on Sunday, December 23, 2018. 3 people dead in incident and Eight people are said to be injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X