ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆರೋಪ: ತನ್ನ ಬಂಗಲೆಯನ್ನು ತಾನೇ ಕೆಡವಿಸಿದ ಉದ್ದವ್‌ ಆಪ್ತ ಸಹಾಯಕ

|
Google Oneindia Kannada News

ಮುಂಬೈ, ಆಗಸ್ಟ್‌ 23: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್‌ ನಾರ್ವೆಕರ್‌ ಸಮುದ್ರದ ಬದಿಯಲ್ಲಿ ಸಮುದ್ರದ ಕಡೆಗೆ ಮುಖ ಮಾಡಿದ್ದ ತಮ್ಮ ಬಂಗಲೆಯನ್ನು ತಾವೇ ಕೆಡವಿಸಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುರೂಡು ಪ್ರದೇಶದಲ್ಲಿರುವ ಬಂಗಲೆಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂಬ ಆರೋಪಗಳ ಹಿನ್ನೆಲೆ ಉದ್ಧವ್‌ ಠಾಕ್ರೆ ಆಪ್ತ ಸಹಾಯಕ ಮಿಲಿಂದ್‌ ನಾರ್ವೆಕರ್‌ ಈ ಕ್ರಮ ಕೈಗೊಂಡಿದ್ದಾರೆ.

ಮುರೂಡು ಪ್ರದೇಶದಲ್ಲಿ ಕಡಲ ತೀರದಲ್ಲಿ ಸಮುದ್ರದತ್ತ ಮುಖ ಮಾಡಿದ್ದ ಮಿಲಿಂದ್‌ ನಾರ್ವೆಕರ್‌ ಬಂಗಲೆಯು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿಯಮವನ್ನು ಉಲ್ಲಂಘನೆ ಮಾಡುತ್ತದೆ. ಈ ಬಂಗಲೆಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂಬ ಆರೋಪವನ್ನು ಬಿಜೆಪಿಯು ಮಾಡಿದೆ.

ಬಿಜೆಪಿ, ಶಿವಸೇನೆ ಮೈತ್ರಿಯಾಗುತ್ತಾ?: ಉದ್ದವ್‌ ಠಾಕ್ರೆ ಹೇಳಿದ್ದಿಷ್ಟುಬಿಜೆಪಿ, ಶಿವಸೇನೆ ಮೈತ್ರಿಯಾಗುತ್ತಾ?: ಉದ್ದವ್‌ ಠಾಕ್ರೆ ಹೇಳಿದ್ದಿಷ್ಟು

ಈ ಬಗ್ಗೆ ಮಾಧ್ಯಮಗಳಿಗೆ ಶಿವಸೇನೆಯ ಮೂಲಗಳಿಂದ ಮಾಹಿತಿ ದೊರೆತಿದೆ. ಮಿಲಿಂದ್‌ ನಾರ್ವೆಕರ್‌ ಅವರು ತಮ್ಮ ಮನೆಯನ್ನು ತಾವೇ ಕೆಡವಿಸಿದ್ದಾರೆ ಎಂದು ಹೇಳಿದೆ. ಆರೋಪಗಳ ಹಿನ್ನೆಲೆ ಕಟ್ಟಡಗಳು ಅಧಿಕಾರಿಗಳ ವಶಕ್ಕೆ ಹೋಗಲಿದೆ ಎಂಬ ಸುದ್ದಿಗಳ ನಡುವೆ ಮಿಲಿಂದ್‌ ನಾರ್ವೆಕರ್‌ ತಮ್ಮ ಬಂಗಲೆಯನ್ನು ಕೆಳಗುರುಳಿಸಿದ್ದಾರೆ.

Uddhav Thackeray’s PA demolishes his own bungalow after allegations of illegal construction

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುರೂಡು ಪ್ರದೇಶದ ದಾಪೋಲಿ ಎಂಬಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್‌ ನಾರ್ವೆಕರ್‌ ಸಮುದ್ರ ತೀರದಲ್ಲಿ ಸಮುದ್ರದತ್ತ ಮುಖ ಮಾಡಿರುವ ಸುಮಾರು ಎರಡು ಸಾವಿರ ಸ್ವೇರ್‌ ಫೀಟ್‌ನ ಬಂಗಲೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ಮುಖಂಡ ಕೃತಿಕ್‌ ಸೋಮಯ್ಯ, "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್‌ ನಾರ್ವೆಕರ್‌ನ ದಾಪೋಪಿಯಲ್ಲಿ ಸಮುದ್ರ ತೀರದಲ್ಲಿನ ಅಕ್ರಮ ಕಟ್ಟಡವನ್ನು ಕೆಡವಲಾಗಿದೆ. ನಾವು ಕೊನೆಗೂ ಮಾಡಿ ತೋರಿಸಿದ್ದೇವೆ. ನಾಳೆ ಆಗಸ್ಟ್‌ 23 ರಂದು ಬಂಗಲೆಯನ್ನು ಕೆಡವಿದನ್ನು ನಾನು ಸ್ವತಃ ಭೇಟಿ ನೀಡಿ ಪರಿಶೀಲಿಸಲಿದ್ದೇನೆ. ಇನ್ನು ಸಚಿವ ಅನಿಲ್‌ ಪರಾಬ್‌ರ ರೆಸಾರ್ಟ್ ಕೆಡವುದು ಬಾಕಿಯಿದೆ," ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಕೇಸ್: ಅನಿಲ್ ದೇಶ್‌ಮುಖ್ ಮನೆ ಮೇಲೆ 'ಇಡಿ' ದಾಳಿ ಭ್ರಷ್ಟಾಚಾರ ಕೇಸ್: ಅನಿಲ್ ದೇಶ್‌ಮುಖ್ ಮನೆ ಮೇಲೆ 'ಇಡಿ' ದಾಳಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಪ್ತ ಸಹಾಯಕ ಮಿಲಿಂದ್‌ ನಾರ್ವೆಕರ್‌ ಆರೋಪದ ಬೆನ್ನಲ್ಲೇ ತಮ್ಮ ಕಟ್ಟಡವನ್ನು ಕೆಡವಿಸಿರುವುದು ಸಾರ್ವಜನಿಕವಾಗಿ ಮುಜುಗರುಕ್ಕೆ ಒಳಗಾಗುವುದನ್ನು ತಪ್ಪಿಸುವ ಕಾರ್ಯವಾಗಿದೆ ಎನ್ನಲಾಗಿದೆ. ಜೂನ್‌ನಲ್ಲಿ ಬಿಜೆಪಿ ನಾಯಕ ಕೃತಿಕ್‌ ಸೋಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಆಪ್ತ ಸಹಾಯಕ ಮಿಲಿಂದ್‌ ನಾರ್ವೆಕರ್‌, ಮಹಾರಾಷ್ಟ್ರದ ಶಿವಸೇನೆ ಪಕ್ಷದ ಸಚಿವ ಅನಿಲ್‌ ಪರಾಬ್‌ ಹಾಗೂ ಇನ್ನುಇತರೆ ಹಲವರು ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆ ಎಂದು ಆರೋಪ ಮಾಡಿ ಕೇಂದ್ರ ಹಾಗೂ ರಾಜ್ಯ ಸಂಬಂಧಪಟ್ಟ ಇಲಾಖೆಗಳಲ್ಲಿ ದೂರು ದಾಖಲು ಮಾಡಿದ್ದರು. ಈ ಬಳಿಕ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳನ್ನು ಒಳಗೊಂಡ ತಂಡವು ಸ್ಥಳಕ್ಕೆ ಭೇಟಿ ನೀಡಿತ್ತು.

ಇನ್ನು ಈ ನಡುವೆ ನಾಗಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 2002 ರಲ್ಲಿ ನಡೆದ 150 ಕೋಟಿ ಅವ್ಯವಹಾರ ಪ್ರಕರಣದ ಆರೋಪಿಯಾಗಿರುವ ಮಹಾರಾಷ್ಟ್ರದ ಸಚಿವ ಸುನಿಲ್‌ ಕೇದಾರ್‌ರನ್ನು ಸಂಪುಟದಿಂದ ವಜಾ ಮಾಡಲು ಎಂದು ಒತ್ತಾಯಿಸಿ ಕಾಂಗ್ರೆಸ್‌ ನಾಯಕ ಆಶಿಶ್‌ ದೇಶಮುಖ್‌, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ಪಕ್ಷದವರೇ ಆದ ಸುನಿಲ್‌ ಕೇದಾರ್‌ರನ್ನು ವಜಾ ಮಾಡುವಂತೆ ಕಾಂಗ್ರೆಸ್‌ ನಾಯಕ ಆಶಿಶ್‌ ದೇಶಮುಖ್‌ ಮನವಿ ಮಾಡಿದ್ದಾರೆ. "ಕೇದಾರ್‌ ಸುಮಾರು 19 ವರ್ಷದಿಂದ ಪ್ರಕರಣವನ್ನು ಬೇರೆ ಬೇರೆ ಕಾರಣ ನೀಡಿ ಮುಂದಕ್ಕೆ ಹೋಗುವಂತೆ ಮಾಡುತ್ತಿದ್ದಾರೆ. ಈಗ ಪ್ರಕರಣ ಕೊನೆಯ ಹಂತದಲ್ಲಿದೆ. ಪ್ರಕರಣ ಖುಲಾಸೆಯಾಗುವಂತೆ ಮಾಡಲು ಸರ್ಕಾರದ ವಕೀಲರನ್ನು ನೇಮಿಸಿಕೊಂಡಿದ್ದಾರೆ. ಈ ನೇಮಕಾತಿಯನ್ನು ರದ್ದು ಮಾಡಿ ಸುನಿಲ್‌ ಕೇದಾರ್‌ರನ್ನು ಸಂಪುಟದಿಂದ ಕೈಬಿಡಬೇಕು," ಎಂದು ಕಾಂಗ್ರೆಸ್‌ ನಾಯಕ ಆಶಿಶ್‌ ದೇಶಮುಖ್‌ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್‌ ಒಕ್ಕೂಟದ ಸರ್ಕಾರವಿದೆ.

(ಒನ್‌ ಇಂಡಿಯಾ ಸುದ್ದಿ)

English summary
Maharashtra Chief Minister Uddhav Thackeray’s PA Milind Narvekar demolishes his own bungalow after allegations of illegal construction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X