ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉರಿಯೋ ಬೆಂಕಿಗೆ ತುಪ್ಪ ಸುರಿದರಾ ಸಂಜಯ್ ರಾವತ್?

|
Google Oneindia Kannada News

ಮುಂಬೈ, ನವೆಂಬರ್.26: ಉರಿಯೋ ಬೆಂಕಿಗೆ ತುಪ್ಪ ಸುರಿಯೋದು ಅಂದರೆ ಇದೆ ಅಂತಾ ಕಾಣುತ್ತದೆ. ಮಹಾರಾಷ್ಟ್ರದಲ್ಲಿ ರಚಿಸಿದ್ದ ಸರ್ಕಾರ ಪತನಗೊಂಡಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಈ ಗಾಯದ ಮೇಲೆ ಶಿವಸೇನೆ ಶಿವಸೇನೆ ಮುಖಂಡರ ಹೇಳಿಕೆ ಬರೆ ಎಳೆದಂತಿದೆ.

ಮೂರು ದಿನಗಳ ಹಿಂದೆ ರಚಿಸಿದ್ದ ಬಿಜೆಪಿ ಸರ್ಕಾರ ಪಲ್ಟಿ ಹೊಡೆದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ಎನ್ ಸಿಪಿ ಮಿತ್ರಪಕ್ಷಗಳು ಒಗ್ಗೂಡಿಕೊಂಡು ಸರ್ಕಾರ ರಚಿಸುವುದು ಪಕ್ಕಾ ಆಗಿದೆ. ಮಿತ್ರಪಕ್ಷಗಳ ನಾಯಕರಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಯ್ಕೆ ಆಗಿದ್ದಾರೆ. ಡಿಸೆಂಬರ್.01ನೇ ತಾರೀಖಿನಂದು ನೂತನ ಮುಖ್ಯಮಂತ್ರಿ ಪಟ್ಟಾಭಿಷೇಕಕ್ಕೆ ಮುಹೂರ್ತವೂ ಫಿಕ್ಸ್ ಆಗಿದೆ.

ಬಿಜೆಪಿಗೆ ಬಂದ ಪುಟ್ಟ, ಹೋದ ಪುಟ್ಟ: ಪವಾರ್ ಪರ ಇದೆಂಥಾ ಹೋರಾಟ?ಬಿಜೆಪಿಗೆ ಬಂದ ಪುಟ್ಟ, ಹೋದ ಪುಟ್ಟ: ಪವಾರ್ ಪರ ಇದೆಂಥಾ ಹೋರಾಟ?

ಈ ಹಿನ್ನೆಲೆ ಶಿವಸೇನೆ ಮುಖಂಡ ಸಂಜಯ್ ರಾವತ್ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಮುಂದಿನ ವಾರ ನಡೆಯಲಿರುವ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡುತ್ತೇವೆ ಎಂದು ಹೇಳಿದ್ದಾರೆ.

 Uddhav Thackeray swearing-in ceremony: PM Modi will be invited

ಪ್ರಧಾನಿಯಷ್ಟೇ ಅಲ್ಲ ಅಮಿತ್ ಷಾ ಅವರಿಗೂ ಆಹ್ವಾನ!

ಬಿಜೆಪಿ ಸಖ್ಯವನ್ನೇ ತೊರೆದು ಸರ್ಕಾರ ರಚಿಸಿರುವ ಶಿವಸೇನೆ ಬಿಜೆಪಿಗರಿಗೆ ಈ ಮೂಲಕ ಮಾತಿನೇಟು ಕೊಟ್ಟಿದೆ. ಮುಂದಿನ ಡಿಸೆಂಬರ್.01ರ ಬಾನುವಾರ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಅದ್ಧೂರಿ ಕಾರ್ಯಕ್ರಮಕ್ಕೆ ದೇಶದ ಗಣ್ಯರನ್ನೆಲ್ಲ ಆಹ್ವಾನಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅಷ್ಟೇ ಅಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

English summary
Uddhav Thackeray swearing-in ceremony: PM Modi will be invited - Shivasena Leader Sanjay Raut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X