ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಗೆ ಉದ್ಧವ್‌ ಠಾಕ್ರೆ ಆಗ್ರಹ

|
Google Oneindia Kannada News

ಮುಂಬೈ,ಜು.9: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡ ನಂತರ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ , ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಒತ್ತಾಯಿಸಿದರು.

ಈ ವೇಳೆ ಬಂಡಾಯ ಶಾಸಕರು ಶಿವಸೇನೆಯ ಚುನಾವಣಾ ಚಿಹ್ನೆಯನ್ನು ಬಳಸಲು ಬಿಡುವುದಿಲ್ಲ. ನಾನು ಇಂದೇ ವಿಧಾನಸಭೆ ಚುನಾವಣೆ ನಡೆಸಲಿ ಎಂದು ಸವಾಲು ಹಾಕುತ್ತೇನೆ. ನಾವು ತಪ್ಪು ಮಾಡಿದ್ದರೆ ಜನ ಮನೆಗೆ ಕಳುಹಿಸುತ್ತಾರೆ ಎಂದರು. ಇದೇ ವೇಳೆ ನೀವು ಈ ಕೆಲಸ ಮಾಡಬೇಕಿದ್ದರೆ ಎರಡೂವರೆ ವರ್ಷಗಳ ಹಿಂದೆಯೇ ಮಾಡಬೇಕಿತ್ತು. ಇದೆಲ್ಲವೂ ಸಂಭವಿಸುವ ಅಗತ್ಯವಿರಲಿಲ್ಲ ಎಂದು ಉದ್ಧವ್‌ ಠಾಕ್ರೆ ಹೇಳಿದರು.

ಶಿವಸೇನೆಯಿಂದ ಬಿಲ್ಲು ಬಾಣದ ಚಿಹ್ನೆಯನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ಜನರು ಕೇವಲ ಚಿಹ್ನೆಯನ್ನು ನೋಡುವುದಿಲ್ಲ, ಅವರು ಚಿಹ್ನೆಯನ್ನು ತೆಗೆದುಕೊಂಡ ವ್ಯಕ್ತಿಯನ್ನು ನೋಡುತ್ತಾರೆ ಎಂದು ಅವರು ಹೇಳಿದರು. ಕಳೆದ ಎರಡೂವರೆ ವರ್ಷಗಳಲ್ಲಿ ಬಿಜೆಪಿಯು ತನ್ನನ್ನು ಮತ್ತು ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದರೂ ಮೌನವಾಗಿರುವ ಬಂಡಾಯ ಶಿವಸೇನೆ ಗುಂಪನ್ನು ಠಾಕ್ರೆ ಟೀಕಿದರು. ನೀವು ಅವರೊಂದಿಗೆ ಸಂಪರ್ಕದಲ್ಲಿರುತ್ತೀರಿ ಮತ್ತು ನಿಮ್ಮ ಸ್ವಂತ ಪಕ್ಷಕ್ಕೆ ಈ ರೀತಿ ದ್ರೋಹ ಮಾಡುತ್ತೀರಿ ಎಂದು ನಾವು ಊಹಿಸಿರಲಿಲ್ಲ ಎಂದು ಶಿಂಧೆ ಹೆಸರನ್ನು ಉಲ್ಲೇಖಿಸದೆ ಹೇಳಿದರು.

ಕೆಲವರು ಮಾತೋಶ್ರೀಗೆ ಕರೆದರೆ ಬರುತ್ತಾರೆ ಎನ್ನುತ್ತಾರೆ. ನನಗೆ ಗೌರವವಿದೆ ಎನ್ನುತ್ತಾರೆ. ಅವರಿಗೆ ನನ್ನ ಧನ್ಯವಾದ. ಬಂಡಾಯಕ್ಕೂ ಮುಂಚೆ ನೀವು ಬಂದು ಮಾತನಾಡಿಸಿದ್ದರೆ ಈ ವಲಸೆ ಹೋಗಬೇಕಾಗಿರಲಿಲ್ಲ. ಆದರೆ ಈಗ ನೀವು ನನ್ನ ಕುಟುಂಬವನ್ನು ನಿಂದಿಸಿದ ಜನರೊಂದಿಗೆ ಇದ್ದೀರಿ. ಅವರು ನಮ್ಮ ಪ್ರತಿಷ್ಠೆಯ ಮೇಲೆ ದಾಳಿ ಮಾಡಿದ್ದಾರೆ. ಆದ್ದರಿಂದ ನಿಮ್ಮ ಪ್ರೀತಿ ಮತ್ತು ಗೌರವ ನಿಜವೇ ಎಂದು ನೀವೇ ನಿರ್ಧರಿಸಿ ಎಂದು ಬಂಡಾಯ ಶಾಸಕರ ಬಗ್ಗೆ ಹೇಳಿದರು.

 ನನ್ನ ಮಗನನ್ನು ಮುಗಿಸಲು ಪ್ರಯತ್ನಿಸಿದರು

ನನ್ನ ಮಗನನ್ನು ಮುಗಿಸಲು ಪ್ರಯತ್ನಿಸಿದರು

ಬೆದರಿಕೆಯ ನಡುವೆಯೂ ನನ್ನೊಂದಿಗೆ ಇರುವ 15-16 ಶಾಸಕರ ಬಗ್ಗೆ ನನಗೆ ಹೆಮ್ಮೆ ಇದೆ. ಈ ದೇಶ ಸತ್ಯಮೇವ ಜಯತೆಯಲ್ಲಿ ಅಭಿವೃದ್ಧಿ ಹೊಂದುತ್ತದೆ ಹೊರತು ಅಸತ್ಯಮೇವ ಜಯತೇ ಅಲ್ಲ ಎಂದು ಅವರು ಹೇಳಿದರು. ಸರ್ಕಾರದಲ್ಲಿ ಸಚಿವರಾಗಿದ್ದ ತಮ್ಮ ಪುತ್ರ ಆದಿತ್ಯ ಠಾಕ್ರೆ ಅವರ ಪರವಾಗಿ ಮಾತನಾಡುತ್ತಾ ಭಾವೋದ್ವೇಗಕ್ಕೆ ಒಳಗಾದ ಠಾಕ್ರೆ, ಅವರು (ಬಿಜೆಪಿ) ನನ್ನ ಮಗನನ್ನು ಮುಗಿಸಲು ಪ್ರಯತ್ನಿಸಿದರು. ನೀವು ಅವರೊಂದಿಗೆ ಕುಳಿತು ಸಂತಸದಿಂದ ಇರುವುದು ಎಷ್ಟು ಸರಿ ಎಂದು ಕೇಳಿದರು.

 16 ಬಂಡಾಯ ಶಾಸಕರ ಅನರ್ಹ

16 ಬಂಡಾಯ ಶಾಸಕರ ಅನರ್ಹ

ಸೋಮವಾರ ಸುಪ್ರೀಂ ಕೋರ್ಟ್ ಶಿವಸೇನೆಯ ಭವಿಷ್ಯವನ್ನು ಮಾತ್ರವಲ್ಲ, ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯವನ್ನೂ ನಿರ್ಧರಿಸುತ್ತದೆ ಎಂದು ಅವರು ಹೇಳಿದರು. ಶಿವಸೇನೆಯ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಮತ್ತು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ನಿರ್ಧಾರದ ವಿರುದ್ಧ ಠಾಕ್ರೆ ಅವರ ಕ್ರಮವನ್ನು ಸುಪ್ರೀಂ ಕೋರ್ಟ್ ನಿರ್ಧರಿಸಲಿದೆ.

 ಕಾನೂನು ನಿರ್ಧಾರ ತೆಗೆದುಕೊಳ್ಳುತ್ತದೆ

ಕಾನೂನು ನಿರ್ಧಾರ ತೆಗೆದುಕೊಳ್ಳುತ್ತದೆ

ನಮಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಕಾಳಜಿ ಇದೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯಾಂಗವು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಜನರು ನೋಡುತ್ತಿದ್ದಾರೆ. ನಾನು ನಿರ್ಧಾರದ ಬಗ್ಗೆ ಚಿಂತಿಸುವುದಿಲ್ಲ. ಅದನ್ನು ಕಾನೂನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

 ಶಾಸಕರು ಹೋದ ಮಾತ್ರಕ್ಕೆ ಅಂತ್ಯವಲ್ಲ

ಶಾಸಕರು ಹೋದ ಮಾತ್ರಕ್ಕೆ ಅಂತ್ಯವಲ್ಲ

ಶಿವಸೇನೆಯನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಇದು ಶಾಸಕಾಂಗ ಪಕ್ಷವಾಗಿದೆ ಮತ್ತು ನೆಲ ಮೂಲದ ಮೇಲೆ ಕೆಲಸ ಮಾಡುವ ಪಕ್ಷವಾಗಿದೆ. ಶಾಸಕರು ಹೋದ ಮಾತ್ರಕ್ಕೆ ನೀವು ಪಕ್ಷವನ್ನು ಮುಗಿಸಬಹುದೇ? ಅವರು ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಎದರಬೇಡಿ. ಶಾಸಕಾಂಗ ಪಕ್ಷ ಮತ್ತು ನೋಂದಾಯಿತ ಪಕ್ಷ ಎರಡು ವಿಭಿನ್ನ ವಿಷಯಗಳು ಎಂದು ಠಾಕ್ರೆ ಹೇಳಿದರು.

 ಅವರದೇ ಸರ್ಕಾರವನ್ನು ಉರುಳಿಸಿದರು.

ಅವರದೇ ಸರ್ಕಾರವನ್ನು ಉರುಳಿಸಿದರು.

ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಸರ್ಕಾರದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ ಬಿಜೆಪಿ ಬೆಂಬಲದಿಂದ ಠಾಕ್ರೆ ವಿರುದ್ಧ ಶಿವಸೇನೆ ಪಕ್ಷದಲ್ಲಿ ಬಂಡಾಯ ಎದ್ದರು. ಶಿವಸೇನೆಯಿಂದ ಹೆಚ್ಚಿನ ಶಾಸಕರನ್ನು ತಮ್ಮ ಕಡೆಗೆ ಸೆಳೆದುಕೊಂಡು ಅವರದೇ ಸರ್ಕಾರವನ್ನು ಉರುಳಿಸಿದರು. ಶಿಂಧೆ ಅವರು ಜೂನ್ 30 ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

 ಅವರೇ ಈಗ ನಿಜವಾದ ಶಿವಸೇನೆ

ಅವರೇ ಈಗ ನಿಜವಾದ ಶಿವಸೇನೆ

ನಾಲ್ಕು ದಿನಗಳ ನಂತರ ಏಕನಾಥ್‌ ಶಿಂಧೆ 288 ಸದಸ್ಯರ ವಿಧಾನಸಭೆಯಲ್ಲಿ 164 ಮತಗಳೊಂದಿಗೆ ವಿಶ್ವಾಸ ಮತ ಗೆದ್ದರು. ಸರಳ ಬಹುಮತಬಂದಿತು. ಕೇವಲ 99 ಶಾಸಕರು ಮಾತ್ರ ಅವರ ವಿರುದ್ಧ ಮತ ಚಲಾಯಿಸಿದರು. ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಬಹುತೇಕ ಶಾಸಕರನ್ನು ಬಂಡಾಯದ ಬಣವಾಗಿ ಕಳೆದುಕೊಂಡಿದ್ದಾರೆ. ಆದರೆ ಈಗ ಅದೇ ದೊಡ್ಡ ಗುಂಪಾಗಿದೆ. ಅವರೇ ಈಗ ನಿಜವಾದ ಸೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅನೇಕ ಕಾರ್ಪೊರೇಟರ್‌ಗಳು ಏಕನಾಥ್ ಶಿಂಧೆ ಅವರ ಬಣಕ್ಕೆ ಸೇರಿಕೊಳ್ಳುತ್ತಿದ್ದಾರೆ. ಶಿವಸೇನೆಯ ಪ್ರಬಲ ಘಟ್ಟವಾಗಿರುವ ಮಹಾರಾಷ್ಟ್ರದ ನಾಗರಿಕ ಸಂಸ್ಥೆಗಳ ಮೇಲೆ ಉದ್ಧವ್ ಠಾಕ್ರೆ ಅವರ ನಿಯಂತ್ರಣವನ್ನು ದುರ್ಬಲಗೊಳಿಸುತ್ತಿದ್ದಾರೆ.

English summary
Former Maharashtra CM Uddhav Thackeray, in his first public address after Eknath Shinde took charge as Chief Minister of Maharashtra, called for by-elections in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X