ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಮರಗಳಿಗಲ್ಲ 'ಮೆಟ್ರೋ ಕಾರ್ ಶೆಡ್' ಕಾಮಗಾರಿಗೆ ಕತ್ತರಿ!

|
Google Oneindia Kannada News

ಮುಂಬೈ, ನವೆಂಬರ್.28: ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದ ಸರ್ಕಾರದ ಪ್ಲ್ಯಾನ್ ಗೆ ಬ್ರೇಕ್ ಹಾಕಿದ್ದಾರೆ.

ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉದ್ಧವ್ ಠಾಕ್ರೆ, ತಮ್ಮ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ರಾಜ್ಯ ರಾಜಧಾನಿಯ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ಉಂಟಾಗುವಂತೆ ಯೋಜನೆಗೆ ಸರ್ಕಾರ ಯಾವುದ್ದೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಆರೇ ಕಾಲೋನಿ: ಕಾರ್ ಶೆಡ್ ಗೆ ಓಕೆ, ಮರ ಕಡಿವಂತಿಲ್ಲ ಎಂದ ಸುಪ್ರೀಂಆರೇ ಕಾಲೋನಿ: ಕಾರ್ ಶೆಡ್ ಗೆ ಓಕೆ, ಮರ ಕಡಿವಂತಿಲ್ಲ ಎಂದ ಸುಪ್ರೀಂ

ಹೌದು, ಮುಂಬೈನ ಆರೇ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಾಣ ಯೋಜನೆಯನ್ನು ಪುನರ್ ಪರಿಶೀಲಿನೆ ನಡೆಸುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಮುಂಬೈನಲ್ಲಿ ಹುಟ್ಟಿರುವ ನನಗೆ ನಗರದ ಅಭಿವೃದ್ಧಿಗಾಗಿ ಏನು ಮಾಡಬೇಕು. ಎಂಥ ಯೋಜನೆಗಳನ್ನು ಜಾರಿಗೊಳಿಸಿದರೆ ನಗರವನ್ನು ಅಭಿವೃದ್ಧಿಪಡಿಸಬಹುದು ಎಂಬುದರ ಅರಿವು ಚೆನ್ನಾಗಿದೆ ಎಂದು ಹೇಳಿದ್ದಾರೆ.

ಕಾರ್ ಶೆಡ್ ಯೋಜನೆ ಎಂದರೇನು?

ಕಾರ್ ಶೆಡ್ ಯೋಜನೆ ಎಂದರೇನು?

ಮೆಟ್ರೋ ಕಾರ್ ಶೆಡ್ ನಿರ್ಮಾಣ ಯೋಜನೆ ಈ ಹಿಂದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮುಂಬೈ ನಗರದ ಆರೇ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಯೋಜನೆಯ ಕಾಮಗಾರಿಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗಲಿದೆ. ಈ ಹಿಂದಿನ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಯೋಜನೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಯೋಜನೆಗಾಗಿ 2 ಸಾವಿರ ಮರಗಳಿಗೆ ಕೊಡಲಿ ಏಟು!

ಯೋಜನೆಗಾಗಿ 2 ಸಾವಿರ ಮರಗಳಿಗೆ ಕೊಡಲಿ ಏಟು!

ಅರಣ್ಯಪ್ರದೇಶವಾಗಿರುವ ಆರ್ಯ ಕಾಲೋನಿಯಲ್ಲಿ ಯೋಜನೆ ಜಾರಿಗಾಗಿ ಮರಗಳನ್ನು ಕತ್ತರಿಸಲು ಸರ್ಕಾರ ಮುಂದಾಗಿತ್ತು. ಸುಮಾರು 2 ಸಾವಿರ ಮರಗಳನ್ನು ಈ ಕಾಮಗಾರಿಗಾಗಿ ಕತ್ತರಿಸಬೇಕಿತ್ತು. ಇದಕ್ಕೆ ಪ್ರತಿಯಾಗಿ ಬೇರೊಂದು ಪ್ರದೇಶದಲ್ಲಿ 2 ಸಾವಿರ ಮರಗಳನ್ನು ನೆಡುವುದಾಗಿ ಹಿಂದಿನ ಸರ್ಕಾರ ಘೋಷಣೆಯನ್ನು ಮಾಡಿತ್ತು. ಆದರೆ, ಇದಕ್ಕೊಪ್ಪದ ಪರಿಸರವಾದಿಗಳು ಕೋರ್ಟ್ ಮೊರೆ ಹೋಗಿದ್ದರು.

ಛತ್ರಪತಿ ಶಿವಾಜಿ ಸಮಾಧಿ ಇರುವ ಪ್ರದೇಶ ಅಭಿವೃದ್ಧಿಗೆ 20 ಕೋಟಿಛತ್ರಪತಿ ಶಿವಾಜಿ ಸಮಾಧಿ ಇರುವ ಪ್ರದೇಶ ಅಭಿವೃದ್ಧಿಗೆ 20 ಕೋಟಿ

ಒಂದೇ ಒಂದು ಮರ ಕಡಿಯಲು ಬಿಡುವುದಿಲ್ಲ

ಒಂದೇ ಒಂದು ಮರ ಕಡಿಯಲು ಬಿಡುವುದಿಲ್ಲ

ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಿದಾಗಲೂ ಶಿವಸೇನೆ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಈಗ ತನ್ನದೇ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಆರೇ ಕಾಲೋನಿಯಲ್ಲಿ ಒಂದೇ ಒಂದು ಮರದ ಎಲೆಯನ್ನೂ ಸಹ ಕತ್ತರಿಸಲು ಬಿಡುವುದಿಲ್ಲ. ಮೆಟ್ರೋ ಕಾರ್ ಶೆಡ್ ಯೋಜನೆ ಬಗ್ಗೆ ಸಂಪೂರ್ಣವಾಗಿ ಪರಾಮರ್ಶೆ ಮಾಡಲಾಗುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಿಂದ ವರದಿ ನೀಡುವಂತೆ ಸೂಚನೆ

ಸುಪ್ರೀಂಕೋರ್ಟ್ ನಿಂದ ವರದಿ ನೀಡುವಂತೆ ಸೂಚನೆ

ಮುಂಬೈನ ಆರೇ ಕಾಲೋನಿಯಲ್ಲಿ ಈ ಯೋಜನೆಯಿಂದ ಸಾಕಷ್ಟು ಹಾನಿಯಾಗಲಿದೆ ಎಂದು ವಿರೋಧಿಸಿದ ಪರಿಸರವಾದಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆ ಕಳೆದ ತಿಂಗಳಷ್ಟೇ ಮರಗಳನ್ನು ಕಡಿಯುತ್ತಿರುವ ಹಾಗೂ ಬೇರೆ ಕಡೆ ಅವುಗಳನ್ನು ನೆಡುವ ಪ್ರಕ್ರಿಯೆ ಬಗ್ಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

English summary
Maharashtra Government Stay On Aarey Metro Car Shed Construction. I Will Not Allow A Culture Where Trees Are Cut At Night, CM Uddhav Thackeray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X