ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಡ್ನವಿಸ್ ಅವಧಿಯಲ್ಲೇ ವಾಜೆ ಅಮಾನತು ವಾಪಸಾತಿಗೆ ಒತ್ತಡ ಹೇರಿದ್ದ ಠಾಕ್ರೆ

|
Google Oneindia Kannada News

ಮುಂಬೈ, ಮಾರ್ಚ್ 17: ದೇವೇಂದ್ರ ಫಡ್ನವಿಸ್ ಅವಧಿಯಲ್ಲೇ ಸಚಿನ್ ವಾಜೆ ಅಮಾನತು ವಾಪಸಾತಿಗೆ ಉದ್ಧವ್ ಠಾಕ್ರೆ ಒತ್ತಡ ಹೇರಿದ್ದರು ಎನ್ನುವ ವಿಷಯ ಈಗ ಬಹಿರಂಗಗೊಂಡಿದೆ.

ಖುದ್ದಾಗಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮಾತನಾಡಿ, ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ, ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು 2018ರಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ರಾಜ್ಯ ಪೊಲೀಸ್ ಪಡೆಗೆ ಪುನಃ ನೇಮಕ ಮಾಡುವಂತೆ ಕೋರಿದ್ದರು ಎಂದಿದ್ದಾರೆ.

ಎನ್‌ಐಎ ತನಿಖೆ ನಡುವೆಯೇ ಮುಂಬೈ ಪೊಲೀಸ್ ಆಯುಕ್ತರ ವರ್ಗಾವಣೆಎನ್‌ಐಎ ತನಿಖೆ ನಡುವೆಯೇ ಮುಂಬೈ ಪೊಲೀಸ್ ಆಯುಕ್ತರ ವರ್ಗಾವಣೆ

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ವಾಜೆ ಅವರನ್ನು ಮಾ. 13ರಂದು ಬಂಧಿಸಲಾಗಿತ್ತು.

Uddhav Had Asked Me To Reinstate Waze When I Was CM: Fadnavis

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ವಾಜೆ ಅವರನ್ನು ಮರು ನೇಮಕ ಮಾಡುವಂತೆ ನನ್ನ ಮೇಲೆ ಒತ್ತಡ ಸಹ ಹಾಕಿತ್ತು ಎಂದು ಫಡ್ನವಿಸ್ ಆರೋಪಿಸಿದ್ದಾರೆ.

ವಾಜೆ ಅವರನ್ನು ಮತ್ತೆ ಪೊಲೀಸ್ ಪಡೆಗೆ ಸೇರಿಸಿಕೊಳ್ಳುವ ಪ್ರಸ್ತಾಪವನ್ನು ಸ್ವೀಕರಿಸಿದ ನಂತರ ನಾನು ಮೌಖಿಕವಾಗಿ ಅದರ ಬಗ್ಗೆ ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನು ಕೇಳಿದೆ.

Recommended Video

Modi's best 3 advise to avoid covid 19 | Oneindia Kannada

ಬಾಂಬೆ ಹೈಕೋರ್ಟ್ ಆದೇಶದ ನಂತರ ವಾಜೆ ಅವರನ್ನು ಅಮಾನತುಗೊಳಿಸಲಾಗಿದೆ ಎಂಬುದು ನನಗೆ ತಿಳಿಯಿತು. ಆದ್ದರಿಂದ ಅವರ ಅಮಾನತು ರದ್ದು ಮಾಡಲು ಮುಂದಾಗಿರಲಿಲ್ಲ ಎಂದು ಹೇಳಿದರು.

English summary
BJP leader Devendra Fadnavis on Wednesday claimed that when he was Maharashtra chief minister, Shiv Sena president Uddhav Thackeray had called him in 2018 to seek reinstatement of the then suspended police officer Sachin Waze into the state police force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X