ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನಿಂದ ಇಬ್ಬರು ಮುಂಬೈ ಪೊಲೀಸರು ಸಾವು

|
Google Oneindia Kannada News

ಮುಂಬೈ, ಏಪ್ರಿಲ್ 26: ಸಾಂಕ್ರಾಮಿಕ ರೋಗ ಕೊರೊನಾ ವೈರಸ್‌ ತಡೆಗಟ್ಟುವ ಉದ್ದೇಶದಿಂದ ಪ್ರಾಣವನ್ನು ಲೆಕ್ಕಿಸದೆ ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ 52 ವರ್ಷದ ಸಂದೀಪ್ ಸರ್ವ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಮುಂಬೈನ ಆಸ್ಪತ್ರೆಯಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ ಎಂದು ಮುಂಬೈ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಕ್ವಾರಂಟೈನ್ ಲ್ಲಿದ್ದ ಬಾಗಲಕೋಟೆ 80 ಪೊಲೀಸರ ವರದಿ ನೆಗೆಟಿವ್ಕ್ವಾರಂಟೈನ್ ಲ್ಲಿದ್ದ ಬಾಗಲಕೋಟೆ 80 ಪೊಲೀಸರ ವರದಿ ನೆಗೆಟಿವ್

ಅದಕ್ಕೂ ಮುಂಚೆ ಮತ್ತೊಬ್ಬ ಮುಖ್ಯಪೇದೆ ಚಂದ್ರಕಾಂತ್ ಗಣಪತ್ ಪೆಂಡುರ್ಕರ್ ಕೂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮುಂಬೈನ ವಾರ್ಲಿಯಲ್ಲಿ ಈ ಪೊಲೀಸ್ ಸಿಬ್ಬಂದಿ ವಾಸಿಸುತ್ತಿದ್ದರು ಎಂಬ ಮಾಹಿತಿ ಇದೆ.

Two Mumbai Police Died Of Covid19

ಇಬ್ಬರು ಪೊಲೀಸ್ ಸಾವಿಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಂತಾಪ ಸೂಚಿಸಿದ್ದಾರೆ. 'ಇಬ್ಬರು ಪೊಲೀಸರು ಪ್ರಾಣ ತ್ಯಾಗ ಮಾಡಿರುವುದು ನೋವಿನ ಸಂಗತಿ. ಅವರಿಗೆ ನಾವು ಗೌರವ ಸಲ್ಲಿಸುತ್ತೇನೆ. ಸರ್ಕಾರದ ನಿಯಮ ಪ್ರಕಾರ, ಅವರ ಕುಟುಂಬಗಳಿಗೆ ಬೆಂಬಲ ನೀಡಲಾಗುವುದು'' ಎಂದಿದ್ದಾರೆ.

ಈ ಇಬ್ಬರು ಪೊಲೀಸ್ ಪೇದೆಗಳ ಸಾವಿಗೆ ಮುಂಬೈ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ. ಕೊರೊನಾ ಹೋರಾಟದಲ್ಲಿ ಮೃತಪಟ್ಟ ಇಬ್ಬರು ವಾರಿಯರ್ಸ್‌ಗೆ ಸಲ್ಯೂಟ್ ಮಾಡಿದೆ. ಇನ್ನು ಅಗಲಿದ ಪೊಲೀಸರಿಗೆ ನೆನಪಿನಲ್ಲಿ ಮುಂಬೈ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಇಂದು ಯಾವುದೇ ಪೋಸ್ಟ್ ಹಾಕದಿರಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಪೊಲೀಸರಿಗೆ ಮಾನಸಿಕ ಒತ್ತಡ ನಿರ್ವಹಣೆ ತರಬೇತಿಬೆಂಗಳೂರಿನಲ್ಲಿ ಪೊಲೀಸರಿಗೆ ಮಾನಸಿಕ ಒತ್ತಡ ನಿರ್ವಹಣೆ ತರಬೇತಿ

ವರದಿಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಈವರೆಗೂ 96 ಜನ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆಯಂತೆ. ಇದರಲ್ಲಿ 15 ಜನ ಆಫೀಸರ್ಸ್ ಎಂದು ಹೇಳಲಾಗಿದೆ.

English summary
Two of Mumbai Police's – HC Chandrakant Ganapat Pendurkar and HC Sandip Surve, who had tested positive for COVID19, passed away today: Mumbai Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X