• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾದಕವಸ್ತು ಖರೀದಿಸುತ್ತಿದ್ದ ವೇಳೆ ನಟಿಯನ್ನು ಬಂಧಿಸಿದ ಎನ್ ಸಿಬಿ ತಂಡ

|

ಮುಂಬೈ, ಅಕ್ಟೋಬರ್.25: ಮಾದಕವಸ್ತುಗಳ ಮಾರಾಟ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಆಂಕರ್ ಪ್ರೀತಿಕಾ ಚೌವ್ಹಾಣ್ ರನ್ನು ಮುಂಬೈನ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಮಾದಕವಸ್ತುವನ್ನು ಖರೀದಿಸುತ್ತಿದ್ದ ಸಂದರ್ಭದಲ್ಲೇ ಅಧಿಕಾರಿಗಳು ಪ್ರೀತಿಕಾ ಚೌವ್ಹಾಣ್ ರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಇನ್ನು, ಬಂಧಿತ ಆರೋಪಿಯನ್ನು ಅಧಿಕಾರಿಗಳು ಕಿಲ್ಲೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಟಿಯು ಸಾವಧಾನ್ ಇಂಡಿಯಾ, ದೇವೋ ಕಿ ದೇವ್ ಮಹಾದೇವ್ ಸೇರಿದಂತೆ ಕೆಲವು ಹಿಂದಿ ಧಾರಾವಾಹಿಗಳನ್ನಿ ನಟಿಸುತ್ತಿದ್ದರು ಎಂದು ತಿಳಿದು ಬಂದಿದೆ.

ನಟ ಸುಶಾಂತ್ ಸಿಂಗ್ ಸಾವಿನ ಕೇಸ್: ನ್ಯಾಯ ಕೇಳಿದ ನಾಯಕರು ಮೌನಕ್ಕೆ ಶರಣು

ವರ್ಸೋವಾ ಮತ್ತು ಮುಂಬೈನಲ್ಲಿ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಮಫ್ತಿನಲ್ಲಿದ್ದ ಅಧಿಕಾರಿಗಳು ಇದುವರೆಗೂ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹುಷಾರ್:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ರನ್ನು ಬಂಧಿಸಿದ ಬಳಿಕ ಬಾಲಿವುಡ್ ನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹರಡಿರುವ ಶಂಕೆ ವ್ಯಕ್ತವಾಗಿತ್ತು. ರಿಯಾ ಚಕ್ರವರ್ತಿ ಮೊಬೈಲ್ ಸಂದೇಶ, ಕಾಲ್ ಡಿಸೈಲ್ಸ್ ನಲ್ಲಿ ಅನೇಕ ಅಂಶಗಳು ಪತ್ತೆಯಾಗಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ನಟರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಾಕುಲ್ ಪ್ರೀತಿ ಸಿಂಗ್ ರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.

ಕಳೆದ ಜೂನ್.14ರಂದು ಮುಂಬೈ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಮೃತಪಟ್ಟಿದ್ದರು. ಕೇಂದ್ರ ತನಿಖಾ ತಂಡವು ಈ ಸಾವಿನ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು, ಇನ್ನೊಂದು ದಿಕ್ಕಿನಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಎನ್ ಸಿಬಿ ಹೆಚ್ಚಿನ ನಿಗಾ ವಹಿಸಲಾಗಿದೆ. ಬಾಲಿವುಡ್ ನಲ್ಲಿ ಅನೇಕ ನಟ-ನಟಿಯರು ಸೇರಿದಂತೆ ಹಲವನ್ನು ಬಂಧಿಸಿರುವ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮಾದರ ವಸ್ತುಗಳ ಪೂರೈಕೆ, ಮಾರಾಟ, ಮಧ್ಯವರ್ತಿಗಳು ಮತ್ತು ಗ್ರಾಹಕರ ಮೇಲೆ ಅಧಿಕಾರಿಗಳ ತಂಡವು ಹದ್ದಿನ ಕಣ್ಣಿಟ್ಟಿದೆ.

English summary
TV Actor Preetika Chauhan Arrested By NCB While Buying Drugs At Mumbai. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X