• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾರಿ ಕದ್ದು ಸಿಕ್ಕಿಬಿದ್ದ, ಜೈಲಿನಿಂದ ಬಂದು ಅದೇ ಲಾರಿಯನ್ನು ಮತ್ತೆ ಕದ್ದ!

|

ನಾಗ್ಪುರ, ಅಕ್ಟೋಬರ್ 20: ಲಾರಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಅದೇ ಲಾರಿಯನ್ನು ಪೊಲೀಸ್ ಠಾಣೆ ಆವರಣದಿಂದಲೇ ಕದ್ದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪೊಲೀಸ್ ಠಾಣೆಯಿಂದಲೇ ಲಾರಿ ಕದ್ದ ಆರೋಪಿ ಸಂಜಯ್ ದೋನೆ (50). ನಾಗ್ಪುರದ ಪೊಲೀಸರು ಅಕ್ಟೋಬರ್ 11ರಂದು ಸಂಜಯ್ ಬಂಧಿಸಿದ್ದರು. ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದ.

ಹುಲಿಕಲ್ ಘಾಟ್ ನಲ್ಲಿ 400 ಅಡಿ ಆಳಕ್ಕೆ ಉರುಳಿದ ಲಾರಿ: ಅಚ್ಚರಿಯಾಗಿ ಬದುಕಿ ಬಂದ ಚಾಲಕ

ಸೋಮವಾರ ಮುಂಜಾನೆ ನಾಗ್ಪುರದ ಲಖಡ್‌ಗನ್ ಪೊಲೀಸ್ ಠಾಣೆ ಆವರಣಕ್ಕೆ ಬಂದ ಸಂಜಯ್ ಅದೇ ಲಾರಿಯನ್ನು ಕದ್ದಿದ್ದಾನೆ. ಠಾಣೆ ಆವರಣದಲ್ಲಿದ್ದ ಲಾರಿ ಕದ್ದ ಆರೋಪಿ ಚಾಣಾಕ್ಷತೆ ಕಂಡು ಪೊಲೀಸು ಬೆಚ್ಚಿ ಬಿದ್ದಿದ್ದಾರೆ.

12 ಕೋಟಿ ಮೌಲ್ಯದ ಮೊಬೈಲ್ ಸಾಗಿಸುತ್ತಿದ್ದ ಲಾರಿ ಅಪಹರಣ!

ಲಾರಿಯನ್ನು ಕದ್ದ ಆರೋಪದ ಮೇಲೆ ಸಂಜಯ್ ಬಂಧನವಾಗಿತ್ತು. ಆರೋಪಿಯನ್ನು ಜೈಲಿಗೆ ಕಳಿಸಿದ ಪೊಲೀಸರು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಲಾರಿಯನ್ನು ಠಾಣೆ ಆವರಣದಲ್ಲಿ ನಿಲ್ಲಿಸಿದ್ದರು.

ಜಿಎಸ್‌ಟಿ ವ್ಯಾಪ್ತಿಗೆ ತಂದು ಡೀಸೆಲ್‌ ದರ ಇಳಿಸಿ: ಲಾರಿ ಮಾಲೀಕರು

ಪೊಲೀಸ್ ಠಾಣೆ ಅವರಣದಲ್ಲಿದ್ದ ಲಾರಿಯನ್ನು ಕಾಯಲು ಮಾಲೀಕರು ವ್ಯಕ್ತಿಯೊಬ್ಬನನ್ನು ನಿಯೋಜನೆ ಮಾಡಿದ್ದರು. "ಕಾವಲು ಕಾಯುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಸಂಜಯ್ ಲಾರಿ ಕದ್ದಿದ್ದಾನೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

"ಸಂಜಯ್ ವಾಹನಗಳನ್ನು ಕದಿಯುವದರಲ್ಲಿ ಎತ್ತಿದ ಕೈ. ಇದುವರೆಗೂ ಆತನ ವಿರುದ್ಧ 20 ವಾಹನಗಳನ್ನು ಕದ್ದ ಪ್ರಕರಣ ದಾಖಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.

English summary
Maharashtra's Nagpur police arrested Sanjay Dhone for stealing a truck on October 11. He get the bail and stole the same truck from police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X