ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾಂಚಂದಾನಿ ಬಂಧನ

|
Google Oneindia Kannada News

ಮುಂಬೈ, ಡಿಸೆಂಬರ್ 13: ಟಿಆರ್‌ಪಿ ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಖಾಂಚಂದಾನಿ ಬಂಧಿಸಲಾಗಿದೆ. ವಿಕಾಸ್ ಪ್ರಕರಣದಲ್ಲಿ ಬಂಧಿತರಾಗಿರುವ 13ನೇ ಆರೋಪಿ.

ಭಾನುವಾರ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಾಂಚಂದಾನಿ ಬಂಧಿಸಿದ್ದಾರೆ. ಅಕ್ಟೋಬರ್ 6ರಂದು ಮುಂಬೈ ಪೊಲೀಸರು ರೇಟಿಂಗ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 ನಕಲಿ ಟಿಆರ್ ಪಿ ಪ್ರಕರಣ; ರಿಪಬ್ಲಿಕ್ ನೆಟ್ ವರ್ಕ್ ವಿತರಣಾ ಅಧಿಕಾರಿ ಪೊಲೀಸರ ವಶಕ್ಕೆ ನಕಲಿ ಟಿಆರ್ ಪಿ ಪ್ರಕರಣ; ರಿಪಬ್ಲಿಕ್ ನೆಟ್ ವರ್ಕ್ ವಿತರಣಾ ಅಧಿಕಾರಿ ಪೊಲೀಸರ ವಶಕ್ಕೆ

ಹಂಸ ರಿಸರ್ಚ್ ಅಧಿಕಾರಿ ನಿತಿನ್ ದೇವೂಕರ್ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದರು. ಒಟ್ಟು 140 ಸಾಕ್ಷಿಗಳನ್ನು ಪೊಲೀಸರು ಇದುವರೆಗೂ ವಿಚಾರಣೆ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ವಿಕಾಸ್ ಖಾಂಚಂದಾನಿ ಬಂಧನವಾಗಿದೆ.

 ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

 TRP Manipulation Case Republic TV CEO Vikas Khanchandani Arrested

ಪ್ರಕರಣದಲ್ಲಿ ವಿಕಾಸ್ ಖಾಂಚಂದಾನಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಇದು ಮುಂಬಯ ಪೊಲೀಸರು ಶೋಷಣೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲ ಭಾಷೆಗಳಲ್ಲೂ ಚಾನೆಲ್ ಮಾಡುತ್ತೇನೆ: ಅರ್ನಬ್ ಗೋಸ್ವಾಮಿಎಲ್ಲ ಭಾಷೆಗಳಲ್ಲೂ ಚಾನೆಲ್ ಮಾಡುತ್ತೇನೆ: ಅರ್ನಬ್ ಗೋಸ್ವಾಮಿ

ರಿಪಬ್ಲಿಕ್ ಟಿವಿ ವಿಕಾಸ್ ಖಾಂಚಂದಾನಿ ಬಂಧನ ಪ್ರಶ್ನಿಸಿ ಮುಂಬೈ ಹೈಕೋರ್ಟ್ ರಜೆ ಪೀಠಕ್ಕೆ ಅರ್ಜಿಯನ್ನು ಸಲ್ಲಿಸಲು ಮುಂದಾಗಿದೆ. ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿದ್ದರು.

ಟಿಆರ್‌ಪಿ ರೇಟಿಂಗ್ ತಿರುಚಿದ ಪ್ರಕರಣದಲ್ಲಿ ವಿಕಾಸ್ ಖಾಂಚಂದಾನಿ ಪೊಲೀಸರ ವಿಚಾರಣೆಗೆ ಸಹಕರಿಸಿದ್ದರು. ಸುಮಾರು 100 ಗಂಟೆಗಳ ಕಾಲ ಅವರ ವಿಚಾರಣೆಯನ್ನು ನಡೆಸಲಾಗಿತ್ತು. ಭಾನುವಾರ ಯಾವುದೇ ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

English summary
Mumbai Police arrested Republic TV CEO Vikas Khanchandani on Sunday just a day ahead of the his anticipatory bail hearing. Vikas Khanchandani arrested in connection with the alleged TRP manipulation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X