ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವಳಿ ತಲಾಕ್ ಕಾಯ್ದೆ ಜಾರಿ: ವಾಟ್ಸಾಪ್‌ನಲ್ಲಿ ತಲಾಕ್ ನೀಡಿದವನ ಮೇಲೆ ಕೇಸ್

|
Google Oneindia Kannada News

ಮುಂಬೈ, ಆಗಸ್ಟ್ 3: ವಾಟ್ಸಾಪ್ ಮೂಲಕ ಪತ್ನಿಗೆ ವಿಚ್ಚೇದನ ನೀಡಿದ ಆರೋಪದಲ್ಲಿ 35 ವರ್ಷದ ವ್ಯಕ್ತಿಯೊಬ್ಬನ ಮೇಲೆ ಇತ್ತೀಚೆಗಷ್ಟೇ ಅಂಗೀಕಾರಗೊಂಡ ತ್ರಿವಳಿ ತಲಾಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮುಸ್ಲಿಂ ಮಹಿಳೆ (ವಿವಾಹದ ಮೇಲಿನ ಹಕ್ಕಿನ ರಕ್ಷಣೆ) ಕಾಯ್ದೆ ಸಂಸತ್‌ನಲ್ಲಿ ಬುಧವಾರ ಅಂಗೀಕಾರವಾದ ಬಳಿಕ ಮಹಾರಾಷ್ಟ್ರದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ಐತಿಹಾಸಿಕ ಕ್ಷಣ: ರಾಜ್ಯಸಭೆಯಲ್ಲೂ ತ್ರಿವಳಿ ತಲಾಖ್ ಪಾಸ್ ಐತಿಹಾಸಿಕ ಕ್ಷಣ: ರಾಜ್ಯಸಭೆಯಲ್ಲೂ ತ್ರಿವಳಿ ತಲಾಖ್ ಪಾಸ್

ಬೇರೊಂದು ಸಂಬಂಧ ಹೊಂದಿದ್ದಾನೆ ಎನ್ನಲಾಗಿರುವ ಆರೋಪಿಯು ಪತ್ನಿಗೆ ತನ್ನ ಮೂರು ವರ್ಷದ ದಾಂಪತ್ಯದ ಬಳಿಕ ತಲಾಕ್ ನೀಡಿದ್ದಾನೆ. ಗುರುವಾರ ಬೆಳಿಗ್ಗೆ ಥಾಣೆ ಕಮಿಷನರ್ ಕಚೇರಿಯನ್ನು ಸಂಪರ್ಕಿಸಿದ ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Triple Talaq Act Man Booked For Giving Divorce In WhatsApp Maharashtra

ಎಂಬಿಎ ಪದವೀಧರೆಯಾಗಿರುವ 31 ವರ್ಷದ ಮಹಿಳೆ 2015ರ ಸೆಪ್ಟೆಂಬರ್ 7ರಂದು ಮದುವೆಯಾಗಿದ್ದಳು. ಇಬ್ಬರಿಗೂ ಅದು ಎರಡನೆಯ ಮದುವೆಯಾಗಿತ್ತು. ಆದರೆ, ಮದುವೆಯಾದ ಮೊದಲ ದಿನವೇ ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ.

'ಹಣ ತಂದುಕೊಡುವಂತೆ ಪತಿ ಒತ್ತಾಯಿಸತೊಡಗಿದ. ಕೊನೆಗೆ ಆಕೆಯ ತಂದೆ ಸಾಲ ಮಾಡಿ ಹಣದ ಜತೆಗೆ ಅಳಿಯನಿಗೆ ಬೈಕ್ ಕೂಡ ಕೊಡಿಸಿದರು. ಇಷ್ಟಕ್ಕೆ ಕಿರುಕುಳ ನಿಲ್ಲಲಿಲ್ಲ. ಕೊನೆಗೆ 2017ರಲ್ಲಿ ಮಹಿಳೆ ಪತಿಯ ಮನೆಯನ್ನು ತೊರೆದು ತಂದೆಯ ಮನೆಯಲ್ಲಿ ವಾಸಿಸತೊಡಗಿದರು.

2017ರ ಸೆಪ್ಟೆಂಬರ್‌ನಲ್ಲಿ ಪತಿಯು ಬೇರೊಬ್ಬ ಮಹಿಳೆ ಜತೆ ಸಂಬಂಧ ಹೊಂದಿರುವುದು ಆಕೆಗೆ ಗೊತ್ತಾಯಿತು. ಅಂದಿನಿಂದ ಇಬ್ಬರೂ ಫೋನ್ ಕರೆ ಹಾಗೂ ವಾಟ್ಸಾಪ್‌ನಲ್ಲಿ ನಿರಂತರವಾಗಿ ಜಗಳವಾಡತೊಡಗಿದರು. ಈ ನಡುವೆ ಆಕೆ ಗರ್ಭಿಣಿಯಾಗಿ ಮಗುವನ್ನೂ ಹೆತ್ತಿದ್ದಳು.

ಮೇಲ್ಮನೆಯಲ್ಲೂ ತ್ರಿವಳಿ ತಲಾಖ್ ಅಂಗೀಕಾರ: ಗಣ್ಯರಿಂದ ಮಿಶ್ರ ಪ್ರತಿಕ್ರಿಯೆಮೇಲ್ಮನೆಯಲ್ಲೂ ತ್ರಿವಳಿ ತಲಾಖ್ ಅಂಗೀಕಾರ: ಗಣ್ಯರಿಂದ ಮಿಶ್ರ ಪ್ರತಿಕ್ರಿಯೆ

2018ರ ನವೆಂಬರ್ 30ರಂದು ತೀವ್ರ ಜಗಳ ನಡೆದಾಗ ಪತಿಯು ಆಕೆಗೆ ವಾಟ್ಸಾಪ್‌ನಲ್ಲಿ ಮೂರು ಬಾರಿ ತಲಾಕ್ ಎಂದು ಮೆಸೇಜ್ ಕಳುಹಿಸಿದ್ದ. ಬಳಿಕ ಕರೆ ಮಾಡಿ ಕೂಡ ಮೂರು ಬಾರಿ ತಲಾಕ್ ಉಚ್ಚರಿಸಿದ್ದ. ಅಂದಿನಿಂದ ಇಬ್ಬರೂ ಮಾತನಾಡಿರಲಿಲ್ಲ. ಬುಧವಾರ ಈ ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಠಾಣೆಗೆ ಬಂದ ಮಹಿಳೆ ಪತಿ ವಿರುದ್ಧ ಈ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದೂರನ್ನು ಮುಂಬ್ರಾ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಅಲ್ಲಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಆತನ ತಾಯಿ ಮತ್ತು ಸಹೋದರಿ ವಿರುದ್ಧವೂ ವರದಕ್ಷಿಣೆ ಮತ್ತು ನಂಬಿಕೆ ದ್ರೋಹದ ಅಪರಾಧ ಪ್ರಕರಣ ದಾಖಲಿಸಲಾಗಿದೆ.

ಹನುಮಾನ್ ಚಾಲಿಸಾ ವಾಚಿಸಿದ್ದಕ್ಕೆ ಬೆದರಿಕೆ: ತ್ರಿವಳಿ ತಲಾಖ್ ಅರ್ಜಿದಾರಳ ಅಳಲುಹನುಮಾನ್ ಚಾಲಿಸಾ ವಾಚಿಸಿದ್ದಕ್ಕೆ ಬೆದರಿಕೆ: ತ್ರಿವಳಿ ತಲಾಖ್ ಅರ್ಜಿದಾರಳ ಅಳಲು

'ಮೂರು ಬಾರಿ ತಲಾಕ್ ಎಂದು ಟೈಮ್ ಮಾಡಿ ಕಳುಹಿಸಿದ ವಾಟ್ಸಾಪ್ ಸಂದೇಶದ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದೇವೆ. ಅದನ್ನೇ ಸಾಕ್ಷಿಯನ್ನಾಗಿ ಬಳಸಿಕೊಳ್ಳಲಾಗುವುದು. ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಆರೋಪಿಯು ಅಬುದಾಬಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಆತ ಹೊಸ ಪತ್ನಿ ವಿಖ್ರೋಲಿ ಜತೆ ವಾಸಿಸುತ್ತಿದ್ದಾನೆ ಎಂದು ಆಕೆಯ ಪತ್ನಿ ಆರೋಪಿಸುತ್ತಿದ್ದಾರೆ. ಆತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
Mumbra police has booked a man under Triple Talaq Act who sent Talaq to his wife through WhatsApp on November 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X