ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮಳೆ ಬಳಿಕ ಯಥಾಸ್ಥಿತಿಗೆ ಮರಳಿದ ಮುಂಬೈ: ಮತ್ತೆ ಮಳೆ ಮುನ್ಸೂಚನೆ ಇದೆಯೇ?

|
Google Oneindia Kannada News

ಮುಂಬೈ, ಸೆಪ್ಟೆಂಬರ್ 24: ಮುಂಬೈನಲ್ಲಿ ಭಾರಿ ಮಳೆಯ ಬಳಿಕ ಜನರ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ವಾಹನ, ರೈಲುಗಳ ಸಂಚಾರ ಮತ್ತೆ ಆರಂಭಗೊಂಡಿದೆ. ಇದೀಗ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುಂಬೈನಲ್ಲಿ 26 ವರ್ಷಗಳ ದಾಖಲೆ ಮುರಿದ ಮಳೆ ಮುಂಬೈನಲ್ಲಿ 26 ವರ್ಷಗಳ ದಾಖಲೆ ಮುರಿದ ಮಳೆ

ಮುಂಬೈನಲ್ಲಿ ಬುಧವಾರ 24 ಗಂಟೆಯಲ್ಲಿ 265 ಮಿ.ಮೀ ಮಳೆ ಸುರಿದಿತ್ತು. ಇದರಿಂದಾಗಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಹಲವೆಡೆ ಹಳಿಗಳು ಮುಳುಗಡೆಯಾದ ಕಾರಣ, ಉಪನಗರ ರೈಲು ಸೇವೆಯನ್ನು ಕೇಂದ್ರೀಯ ರೈಲ್ವೆ ಹಾಗೂ ಪಶ್ಚಿಮ ರೈಲ್ವೆಯು ಬುಧವಾರ ಸ್ಥಗಿತಗೊಳಿಸಿತ್ತು.

Trains, Buses Operate Normally As Intensity Of Rain Reduces In Mumbai

ಉಪನಗರ ರೈಲು ಸೇವೆಯೂ ಪುನರಾರಂಭಗೊಂಡಿದ್ದು, ಅಗತ್ಯ ಸೇವೆಗಳ ಸಿಬ್ಬಂದಿಗಾಗಿ ವಿಶೇಷ ಉಪನಗರ ರೈಲು ಸೇವೆಯನ್ನೂ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹಲವು ರಸ್ತೆಗಳಲ್ಲಿ ನೀರು ತುಂಬಿದ್ದ ಕಾರ ಬಸ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು, ಗುರುವಾರ ಮಳೆ ಇಳಿಕೆಯಾಗಿದ್ದು, ಮುಂಬೈ ಉಪನಗರದಲ್ಲಿ ಹಾಗೂ ನವಿ ಮುಂಬೈನಲ್ಲಿ 100 ಮಿ.ಮೀ ಮಳೆ ದಾಖಲಾಗಿದೆ.

English summary
A day after heavy rain battered Mumbai and caused flooding in several areas, life slowly returned to normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X