• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಶ್ಲೀಲ ಶೋ ಬಿಗ್ ಬಾಸ್ ನಿಷೇಧಕ್ಕೆ ಆಗ್ರಹಿಸಿ ಮೋದಿ ಸರ್ಕಾರಕ್ಕೆ ಪತ್ರ

|

ಮುಂಬೈ, ಅಕ್ಟೋಬರ್ 08: ಅತ್ಯಂತ ವಿವಾದಾತ್ಮಕ, ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿ ಆವೃತ್ತಿ ಮತ್ತೊಮ್ಮೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಗ್ ಬಾಸ್ 13ರ ಪ್ರಸಾರ ನಿಲ್ಲಿಸುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕಾರ್ಮಿಕರ ಒಕ್ಕೂಟ ಪತ್ರ ಬರೆದಿದ್ದಾರೆ.

ಅಖಿಲ ಭಾರತ ಕಾರ್ಮಿಕರ ಒಕ್ಕೂಟದಿಂದ ಅಧಿಕೃತವಾಗಿ ಮೋದಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಐಎಎನ್ ಎಸ್ ವರದಿ ಮಾಡಿದೆ. ಈ ರಿಯಾಲಿಟಿ ಶೋನಲ್ಲಿ ಅತ್ಯಂತ ಅಸಭ್ಯ ರೀತಿಯ ದೃಶ್ಯಗಳಿದ್ದು, ಮನೆಯಲ್ಲಿ ಎಲ್ಲರೂ ಕುಳಿತು ನೋಡುವಂಥ ಕಾರ್ಯಕ್ರಮವಂತೂ ಅಲ್ಲ,

ಬಿಗ್ ಬಾಸ್ ನ ಪರಮ ಬೋರಿಂಗ್ ಸ್ಪರ್ಧಿ ಬಿಜೆಪಿಗೆ ಎಂಟ್ರಿ

"ಬಿಗ್ ಬಾಸ್ 13ರಲ್ಲಿ ಆರಂಭವಾಗಿರುವ 'Bed friend forever' ಬಗ್ಗೆ ಅಕ್ಷೇಪ, ಟೀಕೆ, ಆಕ್ರೋಶ ವ್ಯಕ್ತವಾಗಿದ್ದು, ನೈತಿಕತೆಯ ಎಲ್ಲೆ ಮೀರಿರುವುದು ಕಂಡು ಬಂದಿದೆ. ಟಿವಿ ಮಾಧ್ಯಮದ ಸೆನ್ಸಾರ್ ಶಿಪ್ ಮೀರಿ ಇಂಥ ಚಟುವಟಿಕೆಗಳನ್ನು ಜನರ ಮುಂದಿಡಲಾಗುತ್ತಿದೆ. ಅದು ಅಲ್ಲದೆ, ಪ್ರೈಮ್ ಅವಧಿಯಲ್ಲಿ ಇಂಥ ಶೋ ಪ್ರಸಾರವಾಗುತ್ತದೆ. ಎಲ್ಲಾ ವಯೋಮಿತಿಯ, ಎಲ್ಲಾ ಸ್ತರ ವೀಕ್ಷಕರು ಬಿಗ್ ಬಾಸ್ ನೋಡುತ್ತಾರೆ.

ಬಿಗ್ ಬಾಸ್ ವಿರುದ್ಧ ತಿರುಗಿ ಬಿದ್ದ ಮಹಿಳಾಮಣಿಗಳು

ಈ ಹಿಂದೆ ಎಲ್ಲಾ ಹದ್ದು ಮೀರಿದಾಗ ಕೋರ್ಟ್ ಮೆಟ್ಟಿಲೇರಿ, ಶೋನ ಚಟುವಟಿಕೆಗಳು ಮಿತಿ ಮೀರದಂತೆ ನೋಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಮತ್ತೊಮ್ಮೆ ವೀಕ್ಷಣೆಗೆ ಅರ್ಹವಲ್ಲದೆ ದೃಶ್ಯಗಳು ನುಸುಳಿವೆ" ಎಂದು ಆಕ್ಷೇಪ ವ್ಯಕ್ತಪಡಿಸಿ ಪತ್ರದಲ್ಲಿ ಬರೆಯಲಾಗಿದೆ.

 ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್

ಪತ್ರ ಕಳಿಸಿರುವ ಬಗ್ಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೆಲ್ ವಾಲ್ ಅವರು ಖಚಿತಪಡಿಸಿದ್ದು, "ಪ್ರತಿ ಎಪಿಸೋಡ್ ಸೆನ್ಸಾರ್ ಮಂಡಳಿ ವೀಕ್ಷಣೆಗೆ ಒಳಪಡಲಿದೆ. ಯಾವುದೇ ಕಾರಣಕ್ಕೂ ಸ್ವೇಚ್ಛಾಚಾರಕ್ಕೆ ಆಸ್ಪದ ನೀಡುವುದಿಲ್ಲ. ಕುಟುಂಬದ ಜೊತೆ ಕುಳಿತು ನೋಡುವಂಥ ಕಾರ್ಯಕ್ರಮಗಳಿಗೆ ಮಾತ್ರ ಅನುಮತಿ ಸಿಗಲಿದೆ, ಈ ಬಗ್ಗೆ ಪ್ರಕಾಶ್ ಜಾವಡೇಕರ್ ಭೇಟಿ ಮಾಡಿ ಚರ್ಚಿಸಲಿದ್ದೇವೆ' ಎಂದರು. ಇತ್ತೀಚಿಗೆ ಮುಕ್ತಾಯವಾದ ಬಿಗ್ ಬಾಸ್ ತಮಿಳು ಆವೃತ್ತಿ ಕೂಡಾ ಮಹಿಳೆಯರಿಗೆ ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡ ದೃಶ್ಯಗಳಿದ್ದ ಕಾರಣಕ್ಕೆ ತಮಿಳು ಸಂಸ್ಕೃತಿ ನಾಶ ಪಡಿಸುತ್ತಿದ್ದು ನಿಷೇಧಕ್ಕೊಳಪಡಿಸುವಂತೆ ಆಗ್ರಹಿಸಿ ಹಿಂದೂ ಮಕ್ಕಳ್ ಕಚ್ಚಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಾಮಾಜಿಕ ಜಾಲ ತಾಣಗಳಲ್ಲೂ ಆಕ್ರೋಶ

ಕಾರ್ಮಿಕರ ಒಕ್ಕೂಟ ಅಷ್ಟೇ ಅಲ್ಲ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಗ್ ಬಾಸ್ 13ರ ಎಪಿಸೋಡ್ ಗಳ ಬಗ್ಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಬೆಡ್ ಫ್ರೆಂಡ್ ಫಾರೇವರ್ ಎಪಿಸೋಡ್, ಕಿಸ್ ಬಗ್ಗೆ ಸಲ್ಮಾನ್ ಖಾನ್ ವೀಕೇಂಡ್ ಕಾ ವಾರ್ ನಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಿಂದ ಈ ಶೋನ ವಿರೋಧಿಗಳು ಹೆಚ್ಚಾಗಿದ್ದಾರೆ. ಟ್ವಿಟ್ಟರ್ ನಲ್ಲಿ 'BoycottBiggBoss13', 'JehadFelataBiggBoss' and 'UnsubscribeColorsTV'. ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡಲಾಗುತ್ತಿದೆ. ಟೀಕೆ ಟಿಪ್ಪಣಿ, ಆಕ್ರೋಶದ ಪ್ರತಿಕ್ರಿಯೆಗಳು ಬರುತ್ತಿವೆ.

ಸ್ಪರ್ಧಿಗಳ ಕಿಸ್ಸಿಂಗ್ ಸೀನ್ ವೈರಲ್

ಸ್ಪರ್ಧಿಗಳ ಕಿಸ್ಸಿಂಗ್ ಸೀನ್ ವೈರಲ್

ಸ್ಪರ್ಧಿಗಳ ಕಿಸ್ಸಿಂಗ್ ಸೀನ್ ವೈರಲ್ ಆಗುತ್ತಿದ್ದಂತೆ ಎಚ್ಚರಗೊಂಡ ಕಲರ್ಸ್ ವಾಹಿನಿ, ಇದು ಈ ಹಿಂದಿನ ಸೀಸನ್ ಗೂ ಎಂದು ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದೆ. ಆದರೆ, ಕಲರ್ಸ್ ವಾಹಿನಿ ಹಾಗೂ ಬಿಗ್ ಬಾಸ್ ವಿರುದ್ಧ ಆಕ್ರೋಶ ದಿನದಿಂದ ದಿನಕ್ಕೆ ಎಪಿಸೋಡ್ ನಿಂದ ಎಪಿಸೋಡಿಗೆ ಹೆಚ್ಚಾಗುತ್ತಿದೆ.

ಜನರು ಯಾಕೆ ಈ ಶೋ ನೋಡುತ್ತಾರೆ?

ಜನರು ಯಾಕೆ ಈ ಶೋ ನೋಡುತ್ತಾರೆ?

"ಜನರು ಯಾಕೆ ಈ ಶೋ ನೋಡುತ್ತಾರೆ?, ಇದರಿಂದ ಏನಾದರೂ ಪ್ರಯೋಜನವಿದೆಯೇ? ಬೆಡ್ ಶೇರಿಂಗ್ ಅಂತೆ, ವೀಕ್ಷಕರು ಮನೋವೈದ್ಯರನ್ನು ಕಾಣುವುದು ಉತ್ತಮ" ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಭಾರತೀಯ ಸಂಸ್ಕೃತಿಯನ್ನು ಈ ಶೋ ನಾಶ ಮಾದುತ್ತಿದೆ. ಯುವ ಜನಾಂಗದ ಹಾದಿ ತಪ್ಪಿಸುತ್ತಿದೆ. ಅಶ್ಲೀಲತೆಯನ್ನು ಹಬ್ಬಿಸುವುದೆ ಇದರ ಉದ್ದೇಶ, ಇದಲ್ಲದೆ ಹಿಂದೂ ಮುಸ್ಲಿಂ ನಡುವೆ ಲವ್ ಜಿಹಾದ್ ಗೂ ಕಾರಣವಾಗಿದೆ. ಬಿಗ್ ಬಾಸ್ ನಿಷೇಧ ಮಾಡಿ, ಜಿಹಾದ್ ಬೆಳೆಸುತ್ತಿರುವ ಶೋ ಬಂದ್ ಆಗಲಿ.

ಇನ್ನೂ ಅನೇಕ ಶೋಗಳನ್ನು ಬಂದ್ ಮಾಡಿ

ಇನ್ನೂ ಅನೇಕ ಶೋಗಳನ್ನು ಬಂದ್ ಮಾಡಿ

ಬಿಗ್ ಬಾಸ್ ಅಷ್ಟೇ ಅಲ್ಲ, ರೋಡಿಸ್, ಸ್ಲಿಟ್ಸ್ ವಿಲ್ಲಾ. ಇತ್ಯಾದಿ ಎಲ್ಲಾ ಅನಿಷ್ಟ ಕಾರ್ಯಕ್ರಮಗಳನ್ನು ಬಂದ್ ಮಾಡಿ. ಭಾರತೀಯ ಸಂಸ್ಕೃತಿ, ಹಿಂದೂ ಸಂಪ್ರದಾಯಕ್ಕೆ ಮಾರಕವಾಗಿರುವ ಕಾರ್ಯಕ್ರಮ ನಿಲ್ಲಿಸುವಂತೆ ಆಗ್ರಹಿಸಬೇಕಿದೆ. ಧಾರ್ಮಿಕ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸಲ್ಮಾನ್ ಖಾನ್ ನಿಮ್ಮ ಮುಖವಾಡ ಕಳಚಿ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The Confederation of All India Traders, in a letter to the Information and Broadcasting Minister Prakash Javadekar, demanded a ban on Salman Khan-hosted reality show Bigg Boss 13, according to Indo-Asian News Service (IANS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X