ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಪುಟ್ಟ ಮಕ್ಕಳ ಕೆನ್ನೆ ಮುಟ್ಟುವುದು ಅಪರಾಧವಲ್ಲ"; ಷರತ್ತುಗಳು ಅನ್ವಯ!

|
Google Oneindia Kannada News

ಮುಂಬೈ, ಫೆಬ್ರವರಿ.05: ಲೈಂಗಿಕ ದುರುದ್ದೇಶವಿಲ್ಲದೇ ಪುಟ್ಟ ಮಕ್ಕಳ ಕೆನ್ನೆ ಮುಟ್ಟುವುದು ಶಿಕ್ಷಾರ್ಹ ಅಪರಾಧವಲ್ಲ ಎಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಬಗ್ಗೆ ಮುಂಬೈ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಎರಡು ಪ್ರತ್ಯೇಕ ಪ್ರಕರಣಗಳ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.

ಎರಡು ಪ್ರಕರಣಗಳ ಪೈಕಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆರೋಪಿಗೆ 1 ವರ್ಷ ಜೈಲುಶಿಕ್ಷೆಯನ್ನು ವಿಧಿಸಿದೆ. 33 ವರ್ಷದ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಈ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಜೈಲುಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ.

ಅಪ್ರಾಪ್ತ ಬಾಲಕಿ ಮೇಲೆ 17 ಜನರಿಂದ 5 ತಿಂಗಳು ಅತ್ಯಾಚಾರ; 8 ಜನರ ಬಂಧನಅಪ್ರಾಪ್ತ ಬಾಲಕಿ ಮೇಲೆ 17 ಜನರಿಂದ 5 ತಿಂಗಳು ಅತ್ಯಾಚಾರ; 8 ಜನರ ಬಂಧನ

ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಹೊರತುಪಡಿಸಿ ಆರೋಪಿ ವಿರುದ್ಧ ಬೇರೆ ಯಾವುದೇ ಪ್ರಕರಣಗಳಿಲ್ಲ. ಆರೋಪಿಗೆ ಸಣ್ಣ ವಯಸ್ಸು ಇರುವುದರಿಂದ ತಿದ್ದಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ. ಈ ಹಿನ್ನೆಲೆ ಆರೋಪಿಗೆ 10,000 ರೂಪಾಯಿ ದಂಡ ಮತ್ತು 1 ವರ್ಷ ಸೆರೆವಾಸ ವಿಧಿಸಲಾಗುತ್ತದೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಕೋರ್ಟ್ ನಲ್ಲಿ ಮಹಿಳೆ ನೀಡಿದ ಹೇಳಿಕೆಯ ವಿವರಣೆ

ಕೋರ್ಟ್ ನಲ್ಲಿ ಮಹಿಳೆ ನೀಡಿದ ಹೇಳಿಕೆಯ ವಿವರಣೆ

ಕಳೆದ 2017ರ ಜೂನ್.02ರಂದು ನಡೆದ ಘಟನೆ ಬಗ್ಗೆ ಮಹಿಳೆಯು ಕೋರ್ಟ್ ಗೆ ವಿವರಣೆ ನೀಡಿದ್ದಾರೆ. "ಅಂದು ನನ್ನ ಪತಿ ಕೆಲಸಕ್ಕಾಗಿ ಮನೆಯಿಂದ ಹೊರಹೋಗಿದ್ದರು. ಫ್ರಿಡ್ಜ್ ಹೊಂದಿಸುವುದಕ್ಕಾಗಿ ಎಲೆಕ್ಟ್ರಿಷನ್ ನ್ನು ಕರೆಸುವಂತೆ ವಾಚ್ ಮೆನ್ ಗೆ ಹೇಳಲಾಗಿತ್ತು. ಮಧ್ಯಾಹ್ನ 2.30 ಫ್ರಿಡ್ಜ್ ರಿಪೇರಿ ಮಾಡುವುದಕ್ಕಾಗಿ ಮನೆಗೆ ಬಂದ ಆರೋಪಿ (ಎಲೆಕ್ಟಿಷನ್) ನನ್ನ ಮಗಳ ಹತ್ತಿರ ಹೋಗಿ ಅವಳ ಕೆನ್ನೆಯನ್ನು ಗಿಲ್ಲಿದನು. ಮಗಳ ಹತ್ತಿರ ಹೋಗದೇ ಸುಮ್ಮನೆ ತನ್ನ ಕೆಲಸವನ್ನು ನೋಡಿಕೊಳ್ಳುವಂತೆ ಆರೋಪಿಗೆ ಹೇಳಿದೆ. ತದನಂತರ ನಾನು ಅಡುಗೆ ಮನೆಯಲ್ಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಹಿಂಭಾಗದಿಂದ ಬಂದ ಆರೋಪಿ ನನ್ನನ್ನು ಅಪ್ಪಿಕೊಂಡನು. ಆತನಿಂದ ಬಿಡಿಸಿಕೊಂಡು ಅವನನ್ನು ದೂರ ತಳ್ಳಿದೆ" ಎಂದು ಮಹಿಳೆಯು ಕೋರ್ಟ್ ಎದುರು ಹೇಳಿದ್ದಾರೆ.

ಮಹಿಳೆಯ ಕತ್ತು ಹಿಡಿದು ದೌರ್ಜನ್ಯಕ್ಕೆ ಯತ್ನ

ಮಹಿಳೆಯ ಕತ್ತು ಹಿಡಿದು ದೌರ್ಜನ್ಯಕ್ಕೆ ಯತ್ನ

ಅಸಭ್ಯವಾಗಿ ವರ್ತಿಸಲು ಮುಂದಾದ ಆರೋಪಿಗೆ ಆ ತಕ್ಷಣಕ್ಕೆ ಮನೆಯಿಂದ ಹೋಗುವಂತೆ ಮಹಿಳೆಯು ಎಚ್ಚರಿಕೆ ನೀಡಿದರು. ಆದರೆ ಅದಕ್ಕೆ ಬೆದರದ ಆರೋಪಿಯು ಮಹಿಳೆಯ ಕುತ್ತಿಗೆ ಹಿಡಿದು ಲೈಂಗಿಕ ದೌರ್ಜನ್ಯಕ್ಕೆ ಮುಂದಾಗುತ್ತಾನೆ. ಮಹಿಳೆಯು ಪ್ರತಿರೋಧ ತೋರಿದ ಸಂದರ್ಭದಲ್ಲಿ ಮತ್ತೆ ಅಲ್ಲಿ ನಿಂತಿದ್ದ ಪುಟ್ಟ ಮಗುವಿಗೆ ಕೆನ್ನೆಯನ್ನು ಗಿಲ್ಲುತ್ತಾನೆ ಎಂದು ತಿಳಿದು ಬಂದಿದೆ.

ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಮಹಿಳೆ

ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಮಹಿಳೆ

ಆರೋಪಿಯು ಲೈಂಗಿಕ ದೌರ್ಜನ್ಯಕ್ಕೆ ಮುಂದಾಗುತ್ತಿದ್ದಂತೆ ಮನೆಯಿಂದ ಹೊರ ಹೋಗುವಂತೆ ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಾರೆ. ಅದರಿಂದ ಬೆದರಿದ ಆರೋಪಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ತಕ್ಷಣ ಎಲೆಕ್ಟ್ರಿಷನ್ (ಆರೋಪಿ) ಮೇಲಾಧಿಕಾರಿಗೆ ಆತನ ವಿರುದ್ಧ ದೂರು ನೀಡುತ್ತಾರೆ. ಸಹೋದರಿ ಬಳಿ ನಡೆದ ಘಟನೆ ಬಗ್ಗೆ ತಿಳಿಸಿದ ಪೊಲೀಸರಿಗೆ ದೂರು ನೀಡಲಾಗುತ್ತದೆ. ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುತ್ತಾರೆ. ಆದರೆ ಆರೋಪಿಯು ಮತ್ತೆ ಕೋರ್ಟ್ ನಿಂದ ಜಾಮೀನು ಪಡೆದುಕೊಂಡಿರುತ್ತಾನೆ.

ನ್ಯಾಯಾಲಯಕ್ಕೆ ಮಗುವನ್ನು ಕರೆ ತಂದ ತಾಯಿ

ನ್ಯಾಯಾಲಯಕ್ಕೆ ಮಗುವನ್ನು ಕರೆ ತಂದ ತಾಯಿ

ಏಳು ವರ್ಷದ ಮಗುವನ್ನು ಕೂಡಾ ಸಾಕ್ಷ್ಯ ಹೇಳುವುದಕ್ಕಾಗಿ ತಾಯಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಎರಡ್ಮೂರು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಮಗುವಿಗೆ ಯಾವುದೇ ನೆನಪು ಇರಲಿಲ್ಲ. ಈ ಹಿನ್ನೆಲೆ ಮಗುವಿನ ಹೇಳಿಕೆ ಬದಲು ಮಹಿಳೆಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಆರೋಪಿಗೆ ಶಿಕ್ಷೆಯನ್ನು ವಿಧಿಸಲಾಗುತ್ತಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.

English summary
Touching Child's Cheek Without Sexual Intent Not Offence, Rules POCSO Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X