• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇದೆಂಥ ವಿಪರ್ಯಾಸ! ಹೆಗಡೆಗೆ ಪಾಠ ಕಲಿಸೋಕೆ ಪತ್ನಿಯನ್ನು ಎಳೆದುತರೋದಾ?!

|

ಮುಂಬೈ, ಜನವರಿ 30: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆಗೆ ಪರಿಣಾಮಕಾರಿ ಪ್ರತ್ಯುತ್ತರ ನೀಡುವುದಕ್ಕೆಂದು ಹೊರಟು, ಕಾಂಗ್ರೆಸ್ ಬೆಂಬಲಿಗ ತೆಹಸೀನ್ ಪೂನಾವಾಲಾ ಎಡವಟ್ಟು ಮಾಡಿಕೊಂಡಿದ್ದಾರೆ.

"ಹಿಂದು ಯುವತಿಯರನ್ನು ಮುಟ್ಟಿದರೆ ಅಂಥವರ ಕೈ ಅಸ್ತಿತ್ವದಲ್ಲಿರಬಾರದು" ಎಂದು ಇತ್ತೀಚೆಗೆ ಅನಂತ್ ಕುಮಾರ್ ಹೆಗಡೆ ನೀಡಿದ ಹೇಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಖಡಕ್ ಪ್ರತಿಕ್ರಿಯೆ ನೀಡಲು ಹೊರಟ ಪೂನಾವಾಲಾ, ತಮ್ಮ ಪತ್ನಿಯೊಂದಿಗೆ ತಾವಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, "ನನ್ನ ಕೈ ನನ್ನ ಹಿಂದು ಜೀವದ(ಪತ್ನಿಯ) ದೇಹವನ್ನು ಮುಟ್ಟುತ್ತಿದೆ. ಧೈರ್ಯವಿದ್ದರೆ ಕೈ ಕತ್ತರಿಸಿ!" ಎಂಡು ಟ್ವೀಟ್ ಮಾಡಿದ್ದರು.

ಹೆಗಡೆ-ರಾಹುಲ್ ಟ್ವೀಟ್ ಸಮರ: ಪರಸ್ಪರ ಯೋಗ್ಯತೆಯ ಲೆಕ್ಕಾಚಾರ!

ಹೀಗೆ ಯಾವುದೋ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಕ್ಕೆಂದು ಪತ್ನಿಯ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, ರಾಜಕೀಯ ದಾಳವಾಗಿ ಆಕೆಯನ್ನು ಎಳೆಯುವುದು ಸರಿಯೇ ಎಂದು ಹಲವರು ಪ್ರಶ್ನಿಸಿ, ಪೂನಾವಾಲಾ ಅವರಿಗೆ ಛೀಮಾರಿ ಹಾಕಿದ್ದಾರೆ.

ನಿಮ್ಮ ಪತ್ನಿಗೆ ಅವಮಾನ ಮಾಡುತ್ತಿದ್ದೀರಾ!

ನೀವು ಈ ಚಿತ್ರ ಹಾಕುವ ಮೂಲಕ ನಿಮ್ಮ ಪತ್ನಿಗೇ ಅವಮಾನ ಮಾಡುತ್ತಿದ್ದೀರಾ! ಹೆಗಡೆ ಅವರು ಹೇಳಿದ್ದು, ಯಾವುದೇ ಹಿಂದು ಹುಡುಗಿಯ ಘನತೆಗೆ ದಕ್ಕೆಯುಂಟುಮಾಡುವ ಕೈಗಳನ್ನು ಕತ್ತರಿಸಬೇಕು ಎಂದು. ಅವರು ನಿಮ್ಮ ಪತ್ನಿ. ಹೆಗಡೆ ಅವರ ಮಾತು ನಿಮ್ಮ ಪತ್ನಿಯ ವಿಶಶಯಕ್ಕೆ ಹೇಗೆ ಹೊಂದುತ್ತದೆ? ನೀವು ಅವರಿಗೆ ಅವಮಾನ ಮಾಡಿದ್ದನ್ನು ಬಿಟ್ಟರೆ ಇದರಿಂದ ಇನ್ನೇನು ಆಗಲಿಲ್ಲ - ಅವಿನಾಶ್ ಸಿಂಗ್

ಸಿದ್ದರಾಮಯ್ಯ ದುಪ್ಪಟ್ಟಾ ಎಳೆದಿದ್ದನ್ನು ಒಪ್ಪುತ್ತೀರಾ?

ಪ್ರಿಯತಮೆ, ಪತ್ನಿಯನ್ನು ಮುಟ್ಟಿದರೆ ಎಂದು ಹೆಗಡೆ ಅವರು ಹೇಳಲಿಲ್ಲ. ಅಕಸ್ಮಾತ್ ಅವರನ್ನು ಯಾರಾದರೂ ಅಪರಿಚಿತರು ಅಸಭ್ಯವಾಗಿ ಮುಟ್ಟಿದರೆ ನಿಮಗೆ ಕೋಪ ಬರುವುದಿಲ್ಲವೇ? ಸಿದ್ದರಾಮಯ್ಯ ಮಹಿಳೆಯೊಬ್ಬರ ದುಪ್ಪಟ್ಟ ಎಳೆದಿದ್ದನ್ನು ನೀವು ಸಮರ್ಥಿಸುತ್ತೀರಾ? ಎಂದು ಗೀತಾ ಎಸ್ ಕಪೂರ್ ಪ್ರಶ್ನಿಸಿದ್ದಾರೆ.

ಹೆಗಡೆಗೆ ಮಾತಿನ ತಪರಾಕಿ ನೀಡಿದ ದಿನೇಶ್ ಗುಂಡೂರಾವ್ ಪತ್ನಿ ಟಬು

ಇದು ಹೇಡಿತನವಲ್ಲವೇ?

ಯಾರಿಗೋ ಪಾಠ ಕಲಿಸಲು ಪತ್ನಿಯನ್ನು ಈ ವಿಷಯದಲ್ಲಿ ಎಳೆದು ತರೋದು ಒಬ್ಬ ಒಳ್ಳೆಯ ಪತಿಯ ಲಕ್ಷಣವಲ್ಲ. ಹೀಗೆ ಪತ್ನಿಯ ಹಿಂದೆ ಅಡಗಿ ಸವಾಲೆಸೆಯುವುದನ್ನು ಹೇಡಿತನ ಎನ್ನುತ್ತಾರೆ. ಧೈರ್ಯವಿದ್ದರೆ ಪತ್ನಿಯನ್ನು ಎಳೆದುತರದೆ, ನೀವೇ ನೇರವಾಗಿ ಬಂದು ಸವಾಲೆಸೆಯಿರಿ ಎಂದು ತುಷಾರ್ ಡೆ ಟ್ವೀಟ್ ಮಾಡಿದ್ದಾರೆ.

ಅವರ ಹೇಳಿಕೆಯಲ್ಲಿ ತಪ್ಪಿಲ್ಲ!

"ತಮ್ಮ ಪತ್ನಿಯನ್ನು ಮುಟ್ಟುವುದಕ್ಕೂ ಮತ್ತೊಬ್ಬರ ತಂಗಿ ಅಥವಾ ಮಗಳನ್ನು ಮುಟ್ಟುವುದಕ್ಕೂ ಬಹಳ ವ್ಯತ್ಯಾಸವಿದೆ. ಅವರ ಮಾತುಗಳಲ್ಲಿ ಯಾವ ತಪ್ಪೂ ಇಲ್ಲ. ಅದನ್ನು ಶಬ್ದಶಃ ಅರ್ಥ ಮಾಡಿಕೊಳ್ಳುವ ಬದಲು, ಆ ಹೇಳಿಕೆಯಲ್ಲಿದ್ದ ಭಾವನೆಗಳನ್ನು ಅರ್ಥಮಾಡಿಕೊಳ್ಳಿ" ಎಂದು ಮಾಹಿ ಎಂಬುವವರು ಟ್ವೀಟ್ ಮಾಡಿದ್ದಾರೆ.

'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ!

ಮುಂಬೈ ದಕ್ಷಿಣ ರಣಕಣ
Po.no Candidate's Name Votes Party
1 416786
2 Deora Milind Murli 318147 INC

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress Supporter Tehseen Poonawalla becomes a subject for troll, after he posted his wife;s photo with him to give a effective replay to union minister Anant Kumar Hegde.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+153198351
CONG+444488
OTH958103

Arunachal Pradesh

PartyLWT
BJP24024
CONG404
OTH606

Sikkim

PartyLWT
SDF12012
SKM11011
OTH000

Odisha

PartyLWT
BJD1080108
BJP24024
OTH14014

Andhra Pradesh

PartyLWT
YSRCP10346149
TDP18725
OTH101

TRAILING

Ram Kripal Yadav - BJP
Pataliputra
TRAILING
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more