ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಾಪುರ ಜಿಲ್ಲೆಯಲ್ಲಿ ಹೆಣ್ಣು ಹುಲಿ, ಎರಡು ಹುಲಿ ಮರಿಗಳ ಕಳೇಬರ ಪತ್ತೆ

By ಅನಿಲ್ ಆಚಾರ್
|
Google Oneindia Kannada News

ಚಂದ್ರಾಪುರ (ಮಹಾರಾಷ್ಟ್ರ), ಜುಲೈ 8: ಹೆಣ್ಣು ಹುಲಿ ಹಾಗೂ ಅದರ ಎರಡು ಮರಿಗಳ ಕಳೇಬರವು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿಮೂರ್ ಅರಣ್ಯ ವಲಯ ವ್ಯಾಪ್ತಿಯ ಮೇಟೆಪುರ್ ಹಳ್ಳಿಯ ಚರಂಡಿಯ ಬಳಿಯಲ್ಲಿ ಕಳೇಬರ ದೊರೆತಿದೆ ಎಂದು ಹಿರಿಯ ಅಧಿಕಾರಿ ಎಸ್.ವಿ.ರಾಮರಾವ್ ತಿಳಿಸಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ಕಾದಾಡಿ ಸತ್ತ ಹುಲಿ?ಬಂಡೀಪುರ ಅರಣ್ಯದಲ್ಲಿ ಕಾದಾಡಿ ಸತ್ತ ಹುಲಿ?

ಇವುಗಳ ಸಾವಿಗೆ ಕಾರಣ ಏನು ಎಂದು ಕಂಡುಹಿಡಿಯಲು ತನಿಖೆಗೆ ಆದೇಶ ನೀಡಲಾಗಿದೆ. ಚಂದ್ರಾಪುರ ಜಿಲ್ಲೆಯ ಥಡೋಬಾ ಅಂಧೇರಿ ಹುಲಿ ರಕ್ಷಿತ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಹುಲಿಗಳು ವಾಸವಿವೆ. ಅಂದಹಾಗೆ ಚಂದ್ರಾಪುರ ಜಿಲ್ಲೆಯು ಮುಂಬೈನಿಂದ ಆರು ನೂರಾ ಎಂಬತ್ತು ಕಿಲೋಮೀಟರ್ ದೂರದಲ್ಲಿ ಇದೆ.

Tigress and two cub died in Chandrapur district forest

ಭಾರತದಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಏರುತ್ತಾ ಬರುತ್ತಿದೆ. ಇದಕ್ಕೆ ಸರಕಾರ ಹಾಗೂ ಪರಿಸರ ಸಂರಕ್ಷಣಾ ತಜ್ಞರ ಪ್ರಯತ್ನವೇ ಕಾರಣ ಎಂಬ ಅಭಿಪ್ರಾಯ ಇದೆ. ಈಗ್ಗೆ ಕೆಲ ತಿಂಗಳ ಹಿಂದೆ ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಿಂಹಗಳು ಸಾವನ್ನಪ್ಪಿದ್ದವು. ಆ ಬಗ್ಗೆ ತನಿಖೆ ನಡೆಸುವಂತೆ ಗುಜರಾತ್ ನ ರಾಜ್ಯ ಸರಕಾರವು ಆದೇಶ ನೀಡಿತ್ತು.

English summary
Tigress and two cub died in Chandrapur district forest, Maharashtra on Monday morning. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X