ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಇಬ್ರಾಹಿಂ ಆಸ್ತಿ ರೂ. 11.58ಕೋಟಿಗೆ ಮಾರಾಟ

By Sachhidananda Acharya
|
Google Oneindia Kannada News

ಮುಂಬೈ, ನವೆಂಬರ್ 14: ನಗರದಲ್ಲಿ ಇಂದು ನಡೆದ ಹರಾಜಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಮೂರು ಆಸ್ತಿಗಳು ರೂ. 11.58ಕೋಟಿಗೆ ಮಾರಾಟವಾಗಿವೆ.

ಪಾಕ್ ಪಾಲಿಗೆ ದಾವೂದ್ ಈಗಲೂ ಆಸ್ತಿ, ಯೋಜನೆ ಬದಲಿಸಿದ ಭಾರತಪಾಕ್ ಪಾಲಿಗೆ ದಾವೂದ್ ಈಗಲೂ ಆಸ್ತಿ, ಯೋಜನೆ ಬದಲಿಸಿದ ಭಾರತ

ಹಣಕಾಸು ಸಚಿವಾಲಯವು ಕಳ್ಳಸಾಗಣಿಕೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆ ಕಾಯ್ದೆ ಅಡಿಯಲ್ಲಿ ಈ ಆಸ್ತಿಗಳನ್ನು ಹರಾಜು ಹಾಕಿತ್ತು.

 Three properties of Dawood Ibrahim auctioned in Mumbai

ದಾವೂದ್‌ ಇಬ್ರಾಹಿಂಗೆ ಸೇರಿದ ದೆಹಲಿ ಝೈಕಾ ಎಂದೇ ಜನಪ್ರಿಯವಾಗಿರುವ ಹೊಟೇಲ್ ರೋಣಕ್ ಅಫ್ರೋಜ್, ಶಬ್ನಮ್ ಗೆಸ್ಟ್ ಹೌಸ್ ಹಾಗೂ ಧರ್ಮಶಾಲಾ ಕಟ್ಟಡದಲ್ಲಿನ ಆರು ಕೊಠಡಿಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿದೆ.

ದಾವೂದ್ ಹೋಟೆಲ್ ಖರೀದಿಸಲು ಮುಂದಾದ ಹಿಂದೂ ಮುಖಂಡ!ದಾವೂದ್ ಹೋಟೆಲ್ ಖರೀದಿಸಲು ಮುಂದಾದ ಹಿಂದೂ ಮುಖಂಡ!

ಈ ಮೂರೂ ಆಸ್ತಿಗಳನ್ನು ಸೈಫೀ ಬುರ್ಹಾನಿ ಅಪ್ಲಿಫ್ಟ್ ಮೆಂಟ್ ಟ್ರಸ್ಟ್ ಅತೀ ಹೆಚ್ಚಿನ ಮೊತ್ತ ನೀಡಿ ಖರೀದಿಸಿದೆ.

ರೋಣಕ್ ಅಫ್ರೋಜ್ ರೆಸ್ಟೋರೆಂಟ್‌ ರೂ. 4.53 ಕೋಟಿಗೆ ಮಾರಾಟವಾಗಿದ್ದರೆ, ಶಬನಾಮ್ ಗೆಸ್ಟ್ ಹೌಸ್ ರೂ. 3.52 ಕೋಟಿಗೆ ಹಾಗೂ ಧಮರ್ವಾಲ ಕಟ್ಟಡ ರೂ. 3.53 ಕೋಟಿಗೆ ಮಾರಾಟವಾಗಿದೆ ಎಂದು ಹರಾಜಿನಲ್ಲಿ ಪಾಲ್ಗೊಂಡ ಅಧಿಕಾರಿಗಳು ತಿಳಿಸಿದ್ದಾರೆ.

English summary
Three south Mumbai properties belonging to fugitive don Dawood Ibrahim were auctioned for Rs 11.58 crore today, according to an official involved in the process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X