ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ, ಮಹಾರಾಷ್ಟ್ರದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ

|
Google Oneindia Kannada News

ಮುಂಬೈ, ಜುಲೈ 02 : ಮುಂಬೈನ ತಾಜ್ ಹೋಟೆಲ್‌ಗೆ ಪೊಲೀಸ್ ಭದ್ರತೆ ಹೆಚ್ಚಳ ಮಾಡುವಂತೆ ಮಹಾರಾಷ್ಟ್ರದ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಕರಾಚಿಯಿಂದ ಹೋಟೆಲ್‌ಗೆ ಬೆದರಿಕೆ ಕರೆ ಬಂದಿತ್ತು.

ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್‌ಮುಖ್ ರಾಜ್ಯದ ಡಿಜಿಪಿ ಮತ್ತು ಮುಂಬೈ ಪೊಲೀಸ್ ಆಯುಕ್ತರ ಜೊತೆ ಬುಧವಾರ ಸಭೆ ನಡೆಸಿದರು. ಬೆದರಿಕೆ ಕರೆ, ಪೊಲೀಸ್ ಭದ್ರತೆ ಬಗ್ಗೆ ಚರ್ಚೆ ನಡೆಸಿದರು.

ಮುಂಬೈ ಮೇಲೆ ಉಗ್ರರ ದಾಳಿ; ಕರಾಚಿಯಿಂದ ಬಂತು ಬೆದರಿಕೆ ಕರೆ ಮುಂಬೈ ಮೇಲೆ ಉಗ್ರರ ದಾಳಿ; ಕರಾಚಿಯಿಂದ ಬಂತು ಬೆದರಿಕೆ ಕರೆ

ಕರಾಚಿಯ ಷೇರು ಮಾರುಕಟ್ಟೆ ಮೇಲೆ ಉಗ್ರರ ದಾಳಿ ನಡೆದಿತ್ತು. ಅಂದು ಕರಾಚಿಯಿಂದ ಮುಂಬೈನ ತಾಜ್ ಹೋಟೆಲ್‌ಗೆ ಬೆದರಿಕೆ ಕರೆ ಬಂದಿತ್ತು. ಹೋಟೆಲ್ ಸ್ಫೋಟಿಸುವುದಾಗಿ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ.

ಬೋಧ್ ಗಯಾ, ಬುರ್ದ್ವಾನ್ ಸ್ಫೋಟಕ್ಕೆ ಕಾರಣನಾದ ಉಗ್ರ ಸೆರೆಬೋಧ್ ಗಯಾ, ಬುರ್ದ್ವಾನ್ ಸ್ಫೋಟಕ್ಕೆ ಕಾರಣನಾದ ಉಗ್ರ ಸೆರೆ

Threat Call Security Arrangements Reviewed In Mumbai

"ಡಿಜಿಪಿ ಮತ್ತು ಮುಂಬೈ ಪೊಲೀಸ್ ಆಯುಕ್ತರ ಜೊತೆ ವಿವರವಾದ ಚರ್ಚೆ ನಡೆಸಿದ್ದೇನೆ. ಹೋಟೆಲ್‌ಗೆ ಭದ್ರತೆ ಹೆಚ್ಚಳ ಮಾಡುವಂತೆ ಸೂಚನೆ ನೀಡಿದ್ದೇನೆ" ಎಂದು ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ನೂತನ ದಂಡನಾಯಕನಾಗಿ ಎ++ ಉಗ್ರ ಡಾ.ಸೈಫುಲ್ಲಾ? ಹಿಜ್ಬುಲ್ ಮುಜಾಹಿದ್ದೀನ್ ನೂತನ ದಂಡನಾಯಕನಾಗಿ ಎ++ ಉಗ್ರ ಡಾ.ಸೈಫುಲ್ಲಾ?

ಸೋಮವಾರ ರಾತ್ರಿ ಕರೆ ಬಂದ ತಕ್ಷಣ ಪೊಲೀಸರು ತಾಜ್ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಲಷ್ಕರ್ ಉಗ್ರ ಸಂಘಟನೆಗೆ ಸೇರಿದವನು ಎಂದು ಹೇಳಿಕೊಂಡ ವ್ಯಕ್ತಿ ಹೋಟೆಲ್‌ಗೆ ಕರೆ ಮಾಡಿದ್ದ.

26/11ರ ದಾಳಿ ಮಾದರಿಯಲ್ಲಿ ಮತ್ತೆ ದಾಳಿ ಮಾಡುವುದಾಗಿ ಕರೆ ಮಾಡಿದ್ದ ವ್ಯಕ್ತಿ ಬೆದರಿಕೆ ಹಾಕಿದ್ದ. ಪಾಕಿಸ್ತಾನದ ನಂಬರ್‌ನಿಂದ ಹೋಟೆಲ್‌ಗೆ ಎರಡು ಬಾರಿ ವ್ಯಕ್ತಿ ಕರೆ ಮಾಡಿದ್ದ. ಎರಡೂ ಬಾರಿಯೂ ಒಬ್ಬನೇ ಕರೆ ಮಾಡಿದ್ದ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

English summary
Maharashtra home minister Anil Deshmukh said he has asked police to beef up security arrangements in the state. Anonymous caller called Taj hotel and threatened to carry out 26/11 like attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X