ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಪೋಸ್ಟ್‌ ಶೇರ್ ಮಾಡಿದ ನಟಿ, ದಾಖಲಾಗಿದ್ದು 22 ಕೇಸ್‌!

|
Google Oneindia Kannada News

ಮುಂಬೈ, ಜು.4: ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪವರ್‌ ಎಂಥದ್ದು ಎಂದು ಈ ಮರಾಠಿ ನಟಿಗೆ ಗೊತ್ತಿರಲಿಲ್ಲವೇನೋ? ಶರದ್‌ ಪವಾರ್‌ ವಿರುದ್ಧ ಕೇವಲ ಒಂದೇ ಒಂದು ಪೋಸ್ಟ್‌ ಅನ್ನು ಸ್ವಂತ ಬರೆಯದೇ ಯಾರೋ ಹಾಕಿದ್ದನ್ನು ಶೇರ್‌ ಮಾಡಿ ಈಗ ಬರೋಬ್ಬರಿ 22 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

Recommended Video

Ketaki Chitale ವಿರುದ್ಧ ಇಪ್ಪತ್ತೆರೆಡು ಪ್ರಕರಣಗಳು , ಎಲ್ಲದಕ್ಕೂ ಒಂದು ಪೋಸ್ಟ್ ಕಾರಣ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಅನ್ನು ಶೇರ್ ಮಾಡಿದ ಆರೋಪದ ಮೇಲೆ ಮೇ ತಿಂಗಳಲ್ಲಿ ಬಂಧನಕ್ಕೊಳಗಾದ ನಟಿ ಕೇತಕಿ ಚಿತಾಲೆ ಕೇವಲ ಒಂದು ಫೇಸ್‌ಬುಕ್‌ ಪೋಸ್ಟ್‌ ಅನ್ನು ಕಾಫಿ ಪೇಸ್ಟ್ ಮಾಡಿ ತನ್ನ ವಾಲ್‌ನಲ್ಲಿ ಅಪ್‌ಲೋಡ್ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ತಮ್ಮನ್ನು ಪೊಲೀಸರು, ಎನ್‌ಸಿಪಿ ಕಾರ್ಯಕರ್ತರು ಹೇಗೆ ನಡೆಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

 ಫೆಮಿನಾ ಮಿಸ್ ಇಂಡಿಯಾ ಕಿರೀಟ ಕರ್ನಾಟಕದ ಸಿನಿ ಶೆಟ್ಟಿಗೆ ಮುಡಿಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ ಕರ್ನಾಟಕದ ಸಿನಿ ಶೆಟ್ಟಿಗೆ ಮುಡಿಗೆ

 ನನಗೆ ವಾರೆಂಟ್‌ ಕೂಡ ನೀಡಲಿಲ್ಲ

ನನಗೆ ವಾರೆಂಟ್‌ ಕೂಡ ನೀಡಲಿಲ್ಲ

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವಮಾನಿಸಿದ ಆರೋಪದ ಮೇಲೆ ಬಂಧಿತರಾಗಿರುವ ಮರಾಠಿ ನಟಿ ಕೇತಕಿ ಚಿತಾಲೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಎನ್‌ಸಿಪಿ ಸದಸ್ಯರು ತನ್ನನ್ನು ನಿಂದಿಸಿದ್ದಾರೆ ಎಂದು ಮಂಗಳವಾರ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ತನ್ನನ್ನು ಅನ್ಯಾಯಯುತ ತನ್ನ ಮನೆಯಿಂದ ವಾರಂಟ್ ಕೂಡ ನೀಡದೆ ಸೂಚನೆಯಿಲ್ಲದೆ ಜೈಲಿಗೆ ಕರೆದೊಯ್ಯಲಾಯಿತು. ಹಲ್ಲೆ ನಡೆಸಲಾಯಿತು ಎಂದು ಹೇಳಿಕೊಂಡಿದ್ದಾರೆ. ಮಹಾವಿಕಾಸ ಅಘಾಡಿ ಸರ್ಕಾರವು ತನ್ನ ವಿರುದ್ಧ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಟೀಕಿಸಿದ್ದಾರೆ.

 ಸುಮಾರು 20 ಜನರು ಗುಂಪಿನಿಂದ ಹಲ್ಲೆ

ಸುಮಾರು 20 ಜನರು ಗುಂಪಿನಿಂದ ಹಲ್ಲೆ

ನಟಿ ಕೇತಕಿ ನೀಡಿದ ಸಂದರ್ಶನದಲ್ಲಿ ನನ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ನಂತರ ಕಸ್ಟಡಿ ಕೈ ಬದಲಾಯಿಸಲಾಗಿದೆ. ಕಲಾಂಬೋಲಿಯಿಂದ ನನ್ನನ್ನು ಥಾಣೆ ಪೋಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅಲ್ಲಿದ್ದ ಎನ್‌ಸಿಪಿ ಮಹಿಳೆಯರು ನನ್ನನ್ನು ಥಳಿಸಿದ್ದಾರೆ. ಅವರು ಸುಮಾರು 20 ಜನರ ಗುಂಪಾಗಿ ಇದ್ದರು. ಅವರು (ಎನ್‌ಸಿಪಿ ಕಾರ್ಯಕರ್ತರು) ನನ್ನ ಮೇಲೆ ಬಣ್ಣ ಎಸೆದರು. ಇಲ್ಲ ನಾವು ಶಾಯಿ ಎಸೆದಿದ್ದೇವೆ ಎನ್ನುತ್ತಾರೆ. ಆದರೆ ಅದು ಶಾಯಿಯಾಗಿರಲಿಲ್ಲ. ಅದು ವಿಷಕಾರಿ ಕಪ್ಪು ಬಣ್ಣವಾಗಿತ್ತು. ಇದು ನಮ್ಮ ಚರ್ಮಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅವರು ಆ ಬಣ್ಣವನ್ನು ನನ್ನ ಮೇಲೆ ಎಸೆದರು. ಬಳಿಕ ಅವರು ಮೊಟ್ಟೆಗಳನ್ನು ಎಸೆದರು. ಆದರೆ ಪೊಲೀಸ್ ಕಾಂಪೌಂಡ್ ಒಳಗೆ ಪೊಲೀಸರು ಏನು ಮಾಡುತ್ತಿದ್ದರು? ನನಗೆ ಅರ್ಥವಾಗುತ್ತಿಲ್ಲ, ಇದು ಕಾನೂನುಬಾಹಿರವಾಗಿದೆ ಎಂದರು.

 ನನ್ನ ಬಲ ಎದೆಗೆ ಹೊಡೆದರು

ನನ್ನ ಬಲ ಎದೆಗೆ ಹೊಡೆದರು

ನನ್ನ ಮೇಲೆ ಹಲ್ಲೆ, ಕಿರುಕುಳ, ಥಳಿತ, ಕಿರುಕುಳ ಮಾತ್ರವಲ್ಲ, ನಾನು ಸೀರೆಯನ್ನು ಉಟ್ಟಿದ್ದೆ ಅದು ಕೆಳಗೆ ಬಿದ್ದಿತು. ಯಾರೋ ನನಗೆ ಹೊಡೆದರು, ನನ್ನ ಬಲ ಎದೆಗೆ ಹೊಡೆದರು. ಅವರು ನನಗೆ ಹೊಡೆದಾಗ ನಾನು ಪೊಲೀಸ್ ಕಾರಿನ ಮೇಲೆ ಬಿದ್ದೆ. ನನ್ನ ಸೀರೆ ಮೇಲಕ್ಕೆ ಹೋಯಿತು. ಸರಿ ಅವರು ಕೋಪಗೊಂಡಿದ್ದಾರೆ. ಅದು ಏನೇ ಇರಲಿ ಒಬ್ಬ ಹೆಣ್ಣಿಗೆ ಹೀಗೆ ಕಿರುಕುಳ ನೀಡಬಹುದೇ ಅವರು? ಭವಿಷ್ಯದಲ್ಲಿ ನಮ್ಮನ್ನು ಪ್ರತಿನಿಧಿಸಬೇಕಾದವರು ಇವರೇನಾ? ಎಂದು ನಟಿ ಕೇತಕಿ ಭಾವುಕರಾದರು.

 ಸೆಕ್ಷನ್ 153 ಎ, 505 (2),500,501 ಅಡಿ ಬಂಧನ

ಸೆಕ್ಷನ್ 153 ಎ, 505 (2),500,501 ಅಡಿ ಬಂಧನ

ಪವಾರ್ ಬಗ್ಗೆ ಅವಹೇಳನಕಾರಿ ಟೀಕೆಗಳುಳ್ಳ ಫೇಸ್‌ಬುಕ್ ಪೋಸ್ಟ್ ಅನ್ನು ಹಂಚಿಕೊಂಡ ನಂತರ ಥಾಣೆ ಪೊಲೀಸರು ಚಿತಾಲೆ ಅವರನ್ನು ಮೇ 14 ರಂದು ಬಂಧಿಸಿದ್ದರು. ಅಪರಾಧವನ್ನು ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 505 (2) (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳು), ಸೆಕ್ಷನ್ 500 (ಮಾನನಷ್ಟ ), ಮತ್ತು ಸೆಕ್ಷನ್‌ 501ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಕೇತಕಿ ಚಿತಾಲೆ ತನ್ನ ವಿರುದ್ಧ ಪ್ರಕರಣ ಇನ್ನೂ ಮುಂದುವರೆದಿದ್ದು, ಕೊನೆಯಲ್ಲಿ ಸತ್ಯ ಗೆಲ್ಲುತ್ತದೆ. ನಾನು ಅನುಭವಿಸಿದ ನೋವು ನಾನು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

English summary
Marathi actress Ketaki Chitale is now in trouble for sharing an objectionable post about NCP chief Sharad Pawar. After uploading just one Facebook post on her wall 22 filed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X