• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ಯಾರಸಿಟಮಲ್‌ನಿಂದ ಝಿಕಾ ಸೋಂಕಿನಿಂದ ಚೇತರಿಕೆ ಸಾಧ್ಯ ಎಂದ ತಜ್ಞ

|
Google Oneindia Kannada News

ಮುಂಬೈ, ಆಗಸ್ಟ್ 04: ಪ್ಯಾರಾಸಿಟಮಲ್‌ನಿಂದ ಝಿಕಾ ಸೋಂಕಿನಿಂದ ಚೇತರಿಕೆ ಸಾಧ್ಯ ಎಂದು ತಜ್ಞರೊಬ್ಬರು ಹೇಳಿದ್ದಾರೆ.

ಶೇ.80ರಷ್ಟು ರೋಗಿಗಳಿಗೆ ಯಾವುದೇ ಲಕ್ಷಣಗಳು ಇರುವುದಿಲ್ಲ ಹಾಗೂ ಉಳಿದ ಶೇ.20ರಷ್ಟು ಮಂದಿಗೆ ಸಾಧಾರಣ ಜ್ವರ ಹೊಂದಿರುತ್ತಾರೆ. ಸಾಕಷ್ಟು ನೀರು ಕುಡಿಯುವುದು, ವಿಶ್ರಾಂತಿಪಡೆಯುವುದು ಹಾಗೂ ಪ್ಯಾರಸಿಟಮಲ್ ಮಾತ್ರೆಯಿಂದ ಸೋಂಕನ್ನು ಕಡಿಮೆ ಮಾಡಬಹುದು ಎಂದು ಡಾ. ಪ್ರದೀಪ್ ಅವಟೆ ಹೇಳಿದ್ದಾರೆ.

ಕೊರೊನಾ ನಡುವೆ, ಏನಿದು ಝಿಕಾ ವೈರಸ್? ಏನಿದರ ಲಕ್ಷಣ?ಕೊರೊನಾ ನಡುವೆ, ಏನಿದು ಝಿಕಾ ವೈರಸ್? ಏನಿದರ ಲಕ್ಷಣ?

ಸೊಳ್ಳೆಯಿಂದ ಹರಡುವ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ, ಮಹಾರಾಷ್ಟ್ರದಲ್ಲಿ ಝಿಕಾ ಸೋಂಕು ತಗುಲಿದ್ದ 50 ವರ್ಷದ ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಇತ್ತೀಚೆಗೆ ಮಹಿಳೆಗೆ ಝಿಕಾ ವೈರಸ್ ತಗುಲಿರುವುದು ದೃಢಪಟ್ಟ ಪುಣೆಯಲ್ಲಿ ಮೂವರು ಸದಸ್ಯರ ಕೇಂದ್ರ ತಂಡ ಬೀಡು ಬಿಟ್ಟಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಮೂವರು ಸದಸ್ಯರ ತಂಡವು ಪುಣೆಯ ಪ್ರಾದೇಶಿಕ ನಿರ್ದೇಶಕರ ಕಚೇರಿಯ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿದೆ. ನವದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ತಜ್ಞರು ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮಲೇರಿಯಾ ರಿಸರ್ಚ್ ಕೀಟ ಶಾಸ್ತ್ರಜ್ಞರು ಇರಲಿದ್ದಾರೆ.

ಪುರಂದರ ತಾಲೂಕಿನ ವ್ಯಾಪ್ತಿಯಲ್ಲಿ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಆರೋಗ್ಯ ಸಚಿವಾಲಯ ಕಳುಹಿಸಿರುವ ತಂಡವು ಪುಣೆ ಜಿಲ್ಲೆಗೆ ಭೇಟಿ ನೀಡುತ್ತಿದೆ ಎಂದು ಟೋಪೆ ಹೇಳಿದರು.

ಸೊಳ್ಳೆ ಸಂತಾನೋತ್ಪತ್ತಿ ಪ್ರದೇಶಗಳು ನಾಶವಾಗುತ್ತಿವೆ ಹಾಗೂ ರೋಗಿಗಳ ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ರೋಗ ಹರಡದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಝಿಕಾ ಫ್ಲವಿವಿರಿಡೆ ಕುಟುಂಬಕ್ಕೆ ಸೇರಿದ ವೈರಸ್ ಆಗಿದೆ. ಡೆಂಗ್ಯೂ, ಹಳದಿ ಜ್ವರ, ಮೆದುಳು ಜ್ವರ (ಜಪಾನೀಸ್ ಎನ್ಸೆಫಾಲಿಟಿಸ್) ಹಾಗೂ ವೆಸ್ಟ್ ನೈಲ್ ವೈರಸ್ ಹರಡುವ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಈ ವೈರಸ್ ಹರಡುತ್ತದೆ. ಝಿಕಾ ಹೆಸರು ಬಂದಿರುವುದು ಯುಗಾಂಡದ ಜಿಕಾ ಅರಣ್ಯದಿಂದ. 1947 ರಲ್ಲಿ ಇದೇ ಅರಣ್ಯದಲ್ಲಿ ಕೋತಿಗಳನ್ನು ಐಸೊಲೇಟ್ ಮಾಡಲಾಗಿತ್ತು.

ನಂತರ 1952 ರಲ್ಲಿ ಯುಗಾಂಡ ಹಾಗೂ ತಾಂಜಿನಿಯಾದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಕಂಡುಬಂದಿತು. 2007 ರಲ್ಲಿ, ಝಿಕಾ ವೈರಸ್ ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾದ ಯುಪ್ ದ್ವೀಪದಲ್ಲಿ ಹರಡಿತು. ನಂತರ, 2013 ರಲ್ಲಿ, ಫ್ರೆಂಚ್ ಪಾಲಿನೇಷ್ಯಾ ಮತ್ತು ಸುತ್ತಮುತ್ತಲಿನ ಸಣ್ಣ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿತು.

ಸೊಳ್ಳೆಗಳ ಹೊರತಾಗಿ ಕೂಡ ಝಿಕಾ ವೈರಸ್ ಶಾರೀರಿಕ ಕ್ರಿಯೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದೇ ಸಂದರ್ಭದಲ್ಲಿ ಗರ್ಭಿಣಿಯಿಂದ ಆಕೆಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಹರಡಬಹುದು. ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ಹೇಳಿರುವಂತೆ ಜಿಕಾ ವೈರಸ್ ರಕ್ತ ವರ್ಗಾವಣೆಯ ಮೂಲಕ ಕೂಡ ಹರಡಬಹುದು ಎಂದಾಗಿದೆ. ಆದರೆ ಇದು 100% ಖಾತ್ರಿಯಾಗಿಲ್ಲ.

ಝಿಕಾ ವೈರಸ್‌ನಿಂದ ಮೈಕ್ರೋಸೆಫಾಲಿ ಕಾಯಿಲೆ ಉಂಟಾಗುವುದರಿಂದ ಇದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಗರ್ಭಿಣಿಯರು ಈ ವೈರಸ್‌ನ ದಾಳಿಗೆ ತುತ್ತಾಗುವುದರಿಂದ ಇದು ಅವರ ಮೂಲಕ ಹುಟ್ಟುವ ಮಗುವಿಗೆ ಹರಡುತ್ತದೆ. ಇದರಿಂದ ಗರ್ಭದಲ್ಲಿರುವ ಶಿಶು ಮೈಕ್ರೋಸೆಫಾಲಿ ಕಾಯಿಲೆ ತುತ್ತಾಗುತ್ತದೆ. ಹುಟ್ಟುವಾಗಲೇ ಮಗುವಿನ ತಲೆ ಇತರ ಮಕ್ಕಳ ತಲೆಗಿಂತ ಚಿಕ್ಕದಾಗಿರುತ್ತದೆ. ಮೈಕ್ರೋಸೆಫಾಲಿ ಕಾಯಿಲೆಗೆ ತುತ್ತಾದ ಮಕ್ಕಳ ಮೆದುಳು ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಬ್ರೆಜಿಲ್ ಸೇರಿದಂತೆ ಝಿಕಾ ಹರಡುವ ದೇಶಗಳಲ್ಲಿ Guillain-Barré syndrome ಕೂಡ ವೇಗವಾಗಿ ಹೆಚ್ಚಾಗಿದೆ. ಇದು ನರವೈಜ್ಞಾನಿಕ ಕಾಯಿಲೆಯಾಗಿದ್ದು ಇದರಿಂದ ಪಾರ್ಶ್ವವಾಯು ಮತ್ತು ಸಾವು ಉಂಟಾಗುತ್ತದೆ. ಯು.ಎಸ್. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಧ್ಯಯನದ ಪ್ರಕಾರ, Guillain-Barré syndrome ಹೊಂದಿರುವ ಜನರಲ್ಲಿ ಮರಣ ಪ್ರಮಾಣ 8.3% ಆಗಿದೆ.

English summary
"Zika is a moderate disease as 80 per cent patients do not get any symptoms and remaining 20 per cent have moderate flu-like symptoms. One can recover by drinking enough water, taking rest and having a simple paracetamol tablet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X