ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ವಿಮಾನದಲ್ಲೇ ಸತ್ತು ಬಿದ್ದವನ ಬಾಯಲ್ಲಿ ರಕ್ತ!

|
Google Oneindia Kannada News

ಮುಂಬೈ, ಜೂನ್.14: ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ತಪಾಸಣಾ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಾ ಘಟನೆಯೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ.

ಲಗೋಸ್ ನಿಂದ ಮುಂಬೈಗೆ ಆಗಮಿಸಲು ವಿಮಾನ ಏರಿದ 42 ವರ್ಷದ ವ್ಯಕ್ತಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಏರ್ ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯ ಪ್ರಯಾಣಕ್ಕೆ ಹೇಗೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

40 ಹಿರಿಯ ಪೈಲಟ್‌ಗಳ ಆಯ್ಕೆ: ಇವರು ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಪೈಲಟ್ಸ್..!40 ಹಿರಿಯ ಪೈಲಟ್‌ಗಳ ಆಯ್ಕೆ: ಇವರು ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಪೈಲಟ್ಸ್..!

ಏರ್ ಇಂಡಿಯಾ ವಿಮಾನ ಹತ್ತಿದ ಕೆಲವು ಹೊತ್ತಿನಲ್ಲಿಯೇ 42 ವರ್ಷದ ವ್ಯಕ್ತಿಯಲ್ಲಿ ತೀವ್ರ ಜ್ವರ ಹಾಗೂ ನಡುಕ ಶುರುವಾಗಿದೆ. ಏರ್ ಇಂಡಿಯಾ ಸಿಬ್ಬಂದಿ ಪ್ರಶ್ನೆ ಮಾಡಿದಾಗ ಪ್ರಯಾಣಿಕನು ತನಗೆ ಮಲೇರಿಯಾ ಜ್ವರ ಇರುವುದಾಗಿ ಒಪ್ಪಿಕೊಂಡಿದ್ದಾರೆ. ನಂತರದಲ್ಲಿ ಉಸಿರಾಡುವುದಕ್ಕೂ ಆಗದಂತಾ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಗೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಯಿತು.

ಏರ್ ಇಂಡಿಯಾ ವಿಮಾನದಲ್ಲಿಯೇ ಕುಸಿದು ಬಿದ್ದ ವ್ಯಕ್ತಿ

ಏರ್ ಇಂಡಿಯಾ ವಿಮಾನದಲ್ಲಿಯೇ ಕುಸಿದು ಬಿದ್ದ ವ್ಯಕ್ತಿ

ತೀವ್ರ ಜ್ವರ ಮತ್ತು ಉಸಿರಾಟ ತೊಂದರೆ ಕಾಣಿಸಿಕೊಂಡ ವ್ಯಕ್ತಿಗೆ ಏರ್ ಇಂಡಿಯಾ ಸಿಬ್ಬಂದಿ ಆಕ್ಸಿಜನ್ ನೀಡಿದರು. ಆದರೆ ತೀವ್ರವಾಗಿ ಅಸ್ವಸ್ಥಗೊಂಡ ಪ್ರಯಾಣಿಕನು ವಿಮಾನದಲ್ಲಿಯೇ ಕುಸಿದು ಬಿದ್ದಿದ್ದು, ಬಾಯಲ್ಲಿ ರಕ್ತ ಸೋರಿಕೆಯಾಗಿರುವುದಾಗಿ ತಿಳಿದು ಬಂದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

"ಏರ್ ಇಂಡಿಯಾದಲ್ಲಿ ಪ್ರಾಣಬಿಟ್ಟ ವ್ಯಕ್ತಿಯದ್ದು ಸಹಜ ಸಾವು"

ಜೂನ್.13ರಂದು AI1906 ವಿಮಾನದಲ್ಲಿ ಲಾಗೋಸ್ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ಮುಂಬೈಗೆ ಹೊರಟ 42 ವರ್ಷದ ವ್ಯಕ್ತಿಯು ಸಹಜವಾಗಿ ಮೃತಪಟ್ಟಿದ್ದಾರೆ ಎಂದು ಏರ್ ಇಂಡಿಯಾ ಕಂಪನಿಯು ತಿಳಿಸಿದೆ.

ಏರ್ ಇಂಡಿಯಾ ಸಿಬ್ಬಂದಿ ನಿರ್ಲಕ್ಷ್ಯ ತೋರಿಲ್ಲ

ಏರ್ ಇಂಡಿಯಾ ಸಿಬ್ಬಂದಿ ನಿರ್ಲಕ್ಷ್ಯ ತೋರಿಲ್ಲ

ಮಹಾರಾಷ್ಟ್ರದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗಿನ ಜಾವ 3.40ರ ವೇಳೆಗೆ ವಿಮಾನ ಲ್ಯಾಂಡಿಂಗ್ ಆಯಿತು. ಇದಕ್ಕೂ ಮೊದಲು ಲಾಗೋಸ್ ನಿಂದ ವಿಮಾನದಲ್ಲಿ ಹೊರಟ ಪ್ರಯಾಣಿಕನಿಗೆ ಯಾವುದೇ ಜ್ವರದ ಲಕ್ಷಣಗಳು ಕಂಡು ಬಂದಿರಲಿಲ್ಲ. ಏರ್ ಇಂಡಿಯಾ ಸಿಬ್ಬಂದಿಯು ಯಾವುದೇ ರೀತಿಯ ನಿರ್ಲಕ್ಷ್ಯ ಧೋರಣೆ ತೋರಿಲ್ಲ ಎಂದು ಏರ್ ಇಂಡಿಯಾ ಕಂಪನಿಯು ತಮ್ಮ ಸಿಬ್ಬಂದಿ ಮೇಲಿನ ಆರೋಪವನ್ನು ತಳ್ಳಿ ಹಾಕಿದೆ.

ಮುಂಬೈನಲ್ಲಿ ಶಿಷ್ಟಾಚಾರದ ಪ್ರಕಾರ ಮೃತದೇಹ ಶಿಫ್ಟ್

ಮುಂಬೈನಲ್ಲಿ ಶಿಷ್ಟಾಚಾರದ ಪ್ರಕಾರ ಮೃತದೇಹ ಶಿಫ್ಟ್

ಏರ್ ಇಂಡಿಯಾ ವಿಮಾನದಲ್ಲಿಯೂ ಕೂಡಾ ತಜ್ಞವೈದ್ಯರ ತಂಡವು ಚಿಕಿತ್ಸೆ ನೀಡಿತಾದರೂ ವ್ಯಕ್ತಿಯು ಬದುಕಿ ಉಳಿಯಲಿಲ್ಲ. ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಮೃತದೇಹವನ್ನು ಶಿಷ್ಟಾಚಾರದ ಪ್ರಕಾರ ಎಲ್ಲ ರೀತಿ ಸುರಕ್ಷತಾ ಕ್ರಮಗಳೊಂದಿಗೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಯಿತು ಎಂದು ಏರ್ ಇಂಡಿಯಾ ತಿಳಿಸಿದೆ.

English summary
The 42-year-old passenger died on the Air India flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X