ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಾಶಕಾರಿ ಚಂಡಮಾರುತಕ್ಕೆ ಛತ್ರಿ ಹಿಡಿದವರು ಇವರೇ!

By Srinath
|
Google Oneindia Kannada News

Thanks to Professor Kapil Gupta cyclone phailin disaster averted in advance
ಮುಂಬೈ, ಅ.15: ವಿನಾಶಕಾರಿ ಚಂಡಮಾರುತ ಈ ಬಾರಿ ದೇಶದ ಕರಾವಳಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಇರಾದೆ ಹೊಂದಿತ್ತು. ಆದರೆ ಅದರ ಆಟಾಟೋಪ ಕ್ಷೀಣಿಸುವಂತೆ ಮಾಡುವಲ್ಲಿ ಮೊದಲಿಗರಾಗಿ ಕಂಡುಬರುವವರು ಐಐಟಿ ಬಾಂಬೆಯ ಒಬ್ಬ ಪ್ರೊಫೆಸರ್. ಅವರೇ ಪ್ರೊ. ಕಪಿಲ್ ಗುಪ್ತಾ.

ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಹಿಡಿದು ಕರಾವಳಿ ಭಾಗದ ಕಟ್ಟಕಡೆಯ ಪ್ರಜೆವರೆಗೂ ಪ್ರೊ. ಕಪಿಲ್ ಗುಪ್ತಾ ಅವರು ನೀಡಿದ ಮುಂಜಾಗ್ರತೆಯನ್ನು ಚಾಚೂತಪ್ಪದೆ ಪಾಲಿಸಿದರು.

ರಾಷ್ಟ್ರಪತಿ ಪ್ರಣಬ್ ದಾ ಅವರು ವಂಶಪಾರಂಪರ್ಯವಾಗಿ ದುರ್ಗಾ ಮಾತೆಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ರಾಷ್ಟ್ರಪತಿಗಳ ಪೋಷಾಕನ್ನು ಕಳಚಿಟ್ಟು ಸಾಮಾನ್ಯನಂತೆ ಪಂಚೆಯುಟ್ಟು ದುರ್ಗಾ ತಾಯಿಗೆ ಪೂಜೆ ಸಲ್ಲಿಸುವುದು ಇವರ ವಾಡಿಕೆ. ಆದರೆ ಈ ಬಾರಿ ಪ್ರೊ. ವಿಜೇತಾ ಸಿಂಗ್ ಅವರ Cyclone Phailin warningಗೆ ಬೆಚ್ಚಿಬಿದ್ದ ಪ್ರಣಬ್ ದಾ ಅವರು ಮೊದಲ ಬಾರಿಗೆ ಈ ಆಚರಣೆಯನ್ನು ಮುರಿಯುವಂತಾಗಿ, ಮಾತೆ ದುರ್ಗೆಗೆ ಈ ಬಾರಿ ಪೂಜೆ ನಡೆಸಿಲ್ಲ. ಅಷ್ಟರಮಟ್ಟಿಗೆ ಪ್ರೊ. ಕಪಿಲ್ ಗುಪ್ತಾ ಅವರು ಗೆಲುವಿನ ನಗೆ ನಕ್ಕಿದ್ದಾರೆ.

ಶನಿವಾರ ರಾತ್ರಿ Cyclone Phailin ಒಡಿಶಾ- ಆಂಧ್ರ ಕರಾವಳಿಗೆ ಅಪ್ಪಳಿಸುವ ಮುನ್ನ ಹೀಗ್ಹೀಗೆ ಅಪಾಯಕಾರಿ ಚಂಡಮಾರುತವೊಂದು ನಮ್ಮ ಬೆನ್ನುಹತ್ತಿದೆ. ಮುಂಜಾಗ್ರತೆ ವಹಿಸಲಿಲ್ಲವೆಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ಮಿಶ್ರಿತ ನಿಖರ ಸಂದೇಶ ನೀಡಿದರು. ಅದೂ ಬರೋಬ್ಬರು ಐದು ದಿನಗಳ ಮುಂಚೆಯೇ!

ಮುಂಬೈ ಮಹಾನಗರಿ 2005ರಲ್ಲಿ ಪ್ರವಾಹದಲ್ಲಿ ಅಕ್ಷರಶಃ ತೇಲಿದಾಗ Rather ಮುಳುಗಿದಾಗ ಒಬ್ಬ ಪ್ರೊ. ಕಪಿಲ್ ಗುಪ್ತಾ ಅವರು ಎದ್ದುಕುಳಿತರು. ಅಂದಿನಿಂದ ನಗರ ಪ್ರದೇಶಗಳಲ್ಲಿ ಸಂಭವಿಸುವ ಮಹಾಮಳೆಗಳ ಬಗ್ಗೆ ಅಧ್ಯಯನ ನಡೆಸುತ್ತಾ ಬಂದಿದ್ದಾರೆ.

ಹಾಗೆ ಸದಾ ಅಧ್ಯಯನ ನಿರತರಾಗಿದ್ದ ಪ್ರೊ. ಕಪಿಲ್ ಅವರಿಗೆ ಅಕ್ಟೋಬರ್ 7ರಂದು ಒಂದು ಚಿಕ್ಕ ಸಂದೇಶ ಕಣ್ಣಿಗೆ ಬೀಳುತ್ತದೆ. ಅಮೆರಿಕದ ವಾಯುಪಡೆ ಮತ್ತು ನೌಕಾಪಡೆಯ ವೆಬ್ ಸೈಟ್ ಮೇಲೆ ಕಣ್ಣಿಟ್ಟಿದ್ದ ಪ್ರೊ. ಕಪಿಲ್ ಅವರಿಗೆ ಒಂದು ಚಿಕ್ಕ ಸಂದೇಶ ಗಮನಸೆಳೆಯುತ್ತದೆ. ಹಾಗಂತ, ಅಮೆರಿಕದ ವಾಯುಪಡೆ ಮತ್ತು ನೌಕಾಪಡೆಯ ಅಧಿಕಾರಿಗಳೇನೂ ವಿಶೇಷ ಸಂದೇಶಗಳನ್ನು ಕಳುಹಿಸುವುದಿಲ್ಲ. ಸಂಬಂಧಪಟ್ಟವರು ಅವರ ಸಂಶೋಧನೆ/ ಅಧ್ಯಯನದ ಮೇಲೆ ಕಣ್ಣಿಟ್ಟಿದ್ದು, ಸಂದೇಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

ಅದು ಶುಭಸ್ಯ ಶೀಘ್ರಂ ಆದರೆ ಇನ್ನೂ ಒಳಿತು ಎಂದು ಪ್ರೊ. ಕಪಿಲ್ ಅಮೆರಿಕದ ಆ ಸಂದೇಶವನ್ನು ಹೆಕ್ಕಿ ತೆಗೆದು ಅಕ್ಟೋಬರ್ 7ರಂದೇ ಐದು ದಿನಗಳ ಮುಂಚೆಯೇ ವಾರ್ನಿಂಗ್ ಬಗ್ಗೆ ಭಾರತೀಯ ಹವಾಮಾನ ಇಲಾಖೆ, ತದನಂತರ National Disaster Management Authority (NDMA) ಗಮನ ಸೆಳೆದರು. ಆಗ ಎಚ್ಚೆತ್ತ ನಮ್ಮ ಹವಾಮಾನ ಇಲಾಖೆ ಮುಂದೆ ಒಳ್ಳೆಯ ಕೆಲಸವನ್ನೇ ಮಾಡಿ Cyclone Phailin ಇಳಿಮುಖವಾಗುವವರೆಗೂ ಅನುಕ್ಷಣವೂ ಮೈಯೆಲ್ಲಾ ಕಣ್ಣಾಗಿ ಕೆಲಸ ನಿರ್ವಹಿಸಿದೆ.

National Disaster Management Authority ಸಹ ಜಿದ್ದಿಗೆ ಬಿದ್ದಂತೆ ಎಲ್ಲ ಇಲಾಖೆಗಳ ಸಹಯೋಗ ಬಯಸಿ, ಸಮರೋಪಾದಿಯಲ್ಲಿ ಕರಾವಳಿ ಭಾಗದಲ್ಲಿನ ಎಲ್ಲರನ್ನೂ ಅಲ್ಲಿಂದ ಗುಳೆ ಎಬ್ಬಿಸಿದೆ.

ಹವಾಯಿ ಮೂಲದ Joint Typhoon Warning Centre (JTWC) ಸೇರಿದಂತೆ ಅನೇಕ weather websiteಗಳ ಮೇಲೆ ನಾನು ಸದಾ ಕಣ್ಣಿಟ್ಟಿರುತ್ತೇನೆ. ಅ. 7ರಂದು ರಾತ್ರಿ 11.30ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಅನಾಹುತ ಸಂಭವಿಸಲಿದೆ ಎಂಬ ಸಣ್ಣ ಸಂದೇಶವನ್ನು ಮತ್ತೆ ಮತ್ತೆ ಓದಿಕೊಂಡೆ. ಅದು ನನಗೆ ಮನದಟ್ಟಾಗುತ್ತಿದ್ದಂತೆ ಸಂಬಂಧಪಟ್ಟವರನ್ನು ಎಚ್ಚರಿಸಿದೆ.

ಮಾರನೆಯ ದಿನ ಬೆಳಗ್ಗೆಯೇ ಭಾರತೀಯ ಹವಾಮಾನ ಇಲಾಖೆಯು (IMD) ನಿಖರವಾಗಿ real-time ಮಾಹಿತಿಯನ್ನು ರವಾನಿಸಿತು. ಮುಂದಾಗಬಹುದಾದ ಭಾರಿ ಅನಾಹುತವನ್ನು ನಿಖರವಾಗಿ ಅಂದಾಜಿಸಿ, ಇಡೀ ದೇಶವೇ ನೆಮ್ಮದಿಯ ನಿಟ್ಟಿಸಿರುಬಿಡುವಂತೆ ಮಾಡಿತು - Thanks to Professor Kapil Gupta! (ಸಚಿತ್ರ ವರದಿ- indianexpress)

English summary
Thanks to Professor Kapil Gupta cyclone phailin disaster averted in advance. Heeding to IIT-Bombay professor Kapil Gupta timely alertness lakhs of people were saved by commendable pre-emptive measures by administration in states of Andra Pradesh and Odisha. Professor Kapil Gupta noticed the warning on October 7!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X