ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಣೆ ಪಾಲಿಕೆ: ಠಾಕ್ರೆ ಬಣಕ್ಕುಳಿದದ್ದು ಒಬ್ಬನೇ ಸದಸ್ಯ; ಎಲ್ಲಾ ಶಿಂಧೆಮಯ

|
Google Oneindia Kannada News

ಮುಂಬೈ, ಜುಲೈ 7: ಶಿವಸೇನಾ ಪಕ್ಷದೊಳಗೆ ಕೇವಲ ಶಾಸಕರು ಮತ್ತು ಸಂದರ ಬಂಡಾಯ ಮಾತ್ರವಲ್ಲ, ಇನ್ನೂ ಕೆಳಗಿನ ಹಂತದ ಜನಪ್ರತಿನಿಧಿಗಳವರೆಗೂ ವಿಸ್ತರಣೆಯಾಗಿದೆ. ಥಾಣೆ ಮಹಾ ನಗರಪಾಲಿಕೆಯಲ್ಲಿ ಇರುವ 67 ಶಿವಸೇನಾ ಸದಸ್ಯರ ಪೈಕಿ ಬರೋಬ್ಬರಿ 66 ಮಂದಿ ಸದಸ್ಯರು ಏಕನಾಥ್ ಶಿಂಧೆ ಬಣ ಸೇರಿಕೊಂಡಿದ್ದಾರೆ. ಒಬ್ಬ ಸದಸ್ಯ ಮಾತ್ರ ಠಾಕ್ರೆ ಬಣದಲ್ಲಿ ಉಳಿದುಕೊಂಡಿದ್ದಾರೆ.

ಥಾಣೆ ನಗರಪಾಲಿಕೆಯಲ್ಲಿ ಆದ ಈ ಬೆಳವಣಿಗೆ ಅನಿರೀಕ್ಷಿತವೇನಲ್ಲ. ಥಾಣೆ ಜಿಲ್ಲೆ ಏಕನಾಥ್ ಶಿಂಧೆಯ ವೈಯಕ್ತಿಕ ವರ್ಚಸ್ಸು ಇರುವ ಪ್ರದೇಶ. ಆದರೆ ಮುಂಬೈ ಬಳಿಕ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಪಾಲಿಕೆ ಥಾಣೆಯದ್ದು. ಹೀಗಾಗಿ, ಉದ್ಧವ್ ಠಾಕ್ರೆಗೆ ತಮ್ಮ ಪ್ರಭಾವ ಬೆಳೆಸಿಕೊಳ್ಳಲು ಥಾಣೆ ಬಹಳ ಮುಖ್ಯ.

ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ

ಥಾಣೆ ಮಹಾನಗರಪಾಲಿಕೆಯನ್ನು ಇತ್ತೀಚೆಗೆ ವಿಸರ್ಜಿಸಲಾಗಿತ್ತು. ಬೇರೆ ಬೇರೆ ಕಾರಣಕ್ಕೆ ಚುನಾವಣೆಯನ್ನು ಮುಂದೂಡುತ್ತಾ ಬರಲಾಗಿದೆ. ಇದೇ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಥಾಣೆ ಪಾಲಿಕೆಯ ಶಿವಸೇನಾ ಸದಸ್ಯರು ಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಭೇಟಿಯಾಗಿ ಅವರಿಗೆ ಬೆಂಬಲ ನೀಡಿರುವುದು ತಿಳಿದುಬಂದಿದೆ.

Thane Corporation: Shinde 66, Thackeray 1, Power Tussle

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ನಡೆದ ಬಹುಮತ ಪರೀಕ್ಷೆಯಲ್ಲಿ ಶಿವಸೇನಾ ಪಕ್ಷದ 55 ಶಾಸಕರ ಪೈಕಿ 40 ಮಂದಿ ಸಿಎಂ ಏಕನಾಥ್ ಶಿಂಧೆಗೆ ಬೆಂಬಲ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳು ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಪಕ್ಷದ ಮೇಲೆ ಹೊಂದಿರುವ ಹಿಡಿತ ದುರ್ಬಲವಾಗಿರುವುದನ್ನು ಸೂಚಿಸುತ್ತಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿಗೆ 25, ಶಿಂಧೆ ಬಣದ 13 ಶಾಸಕರಿಗೆ ಮಂತ್ರಿಗಿರಿಮಹಾರಾಷ್ಟ್ರದಲ್ಲಿ ಬಿಜೆಪಿಗೆ 25, ಶಿಂಧೆ ಬಣದ 13 ಶಾಸಕರಿಗೆ ಮಂತ್ರಿಗಿರಿ

ಬಾಳಾ ಠಾಕ್ರೆ ಹೆಸರು
ಶಿವಸೇನಾ ಪಕ್ಷವನ್ನು ಹುಟ್ಟುಹಾಕಿದ್ದ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರನ್ನು ಏಕನಾಥ್ ಶಿಂಧೆ ಕೂಡ ಬಳಸಿಕೊಳ್ಳುತ್ತಿದ್ದಾರೆ. ಶಿವಸೇನಾ ಪಕ್ಷ ಅಧಿಕೃತವಾಗಿ ತಮ್ಮದೇ ಎಂದು ಶಿಂಧೆ ಹೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ಶಿವಸೇನಾ ಪಕ್ಷ ವಿಭಜನೆ ಆಗುವುದಾದರೆ ಆ ಪಕ್ಷದ ಅಧಿಕೃತ ಚಿಹ್ನೆ ಯಾವ ಬಣಕ್ಕೆ ಹೋಗಬೇಕೆಂಬುದನ್ನು ಚುನಾವಣಾ ಆಯೋಗ ಮಾತ್ರ ನಿರ್ಧರಿಸಬಲ್ಲುದು.

ಶಿವಸೇನಾ ಶಾಸಕರು ಬಿಟ್ಟುಹೋಗಿರಬಹುದು. ಆದರೆ, ಕಾರ್ಯಕರ್ತರು ತಮ್ಮ ಜೊತೆ ಇದ್ದಾರೆ. ಮತ್ತೊಮ್ಮೆ ಪಕ್ಷ ಕಟ್ಟುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿಕೊಂಡಿದ್ದರು. ಆದರೆ, ಈಗ ಥಾಣೆ ಮಹಾನಗರಪಾಲಿಕೆಯ ಸದಸ್ಯರು ಏಕನಾಥ್ ಶಿಂಧೆಗೆ ಬೆಂಬಲ ನೀಡಿರುವ ಬೆಳವಣಿಗೆ ಈ ಹಿನ್ನೆಲೆಯಲ್ಲಿ ಕುತೂಹಲ ಮೂಡಿಸಿದೆ. ಥಾಣೆ ಏಕನಾಥ್ ಶಿಂಧೆಯ ಪ್ರಾಬಲ್ಯ ಇರುವ ಪ್ರದೇಶವಾದ್ದರಿಂದ ಇಷ್ಟು ದೊಡ್ಡ ಬೆಂಬಲ ಸಹಜ. ಪುಣೆ ಇತ್ಯಾದಿ ಬೇರೆ ಕಡೆಯ ಸ್ಥಳೀಯ ಸಂಸ್ಥೆಗಳಲ್ಲಿ ಶಿವಸೇನಾ ಸದಸ್ಯರು ಯಾವ ಬಣಕ್ಕೆ ಬೆಂಬಲ ನೀಡುತ್ತಾರೆ ಎಂಬುದು ಕುತೂಹಲ.

Thane Corporation: Shinde 66, Thackeray 1, Power Tussle

ಶಿವಸೇನಾ ಮತ್ತು ಹಿಂದುತ್ವ
ಶಿವಸೇನಾ ಪಕ್ಷದ್ದು ಸಾಂಪ್ರದಾಯಿಕವಾಗಿ ಹಿಂದುತ್ವ ವಿಚಾರ ಮತ್ತು ಮರಾಠಿ ಅಸ್ಮಿತೆ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾ ಬಂದಿದೆ. ಬಿಜೆಪಿಗಿಂತಲೂ ಹೆಚ್ಚು ಉಗ್ರ ಹಿಂದುತ್ವವಾದಿ ಪಕ್ಷವಾಗಿದ್ದುದು ಹೌದು. ರಾಮಜನ್ಮಭೂಮಿ ಮೊದಲಾದ ಆಂದೋಲನಗಳಲ್ಲಿ ಬಹಳ ಸಕ್ರಿಯವಾಗಿ ತೊಡಗಿಸಿಕೊಂಡ ಪಕ್ಷ ಅದು. ಆದರೆ, ಉದ್ಧವ್ ಠಾಕ್ರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈ ಜೋಡಿಸಿದ್ದು ಪಕ್ಷದೊಳಗೆ ಅನೇಕರಿಗೆ ಮುಜುಗರ ಮಾಡಿದ್ದು ನಿಜ.

ಏಕನಾಥ್ ಶಿಂಧೆಗೆ ಇದೇ ಪ್ಲಸ್ ಪಾಯಿಂಟ್ ಆಗಿದೆ. ಹಿಂದುತ್ವವನ್ನು ಕೈಬಿಟ್ಟಿದ್ದರಿಂದ ತಾವು ಬಂಡಾಯ ಏಳಬೇಕಾಯಿತು ಎಂದು ಅವರು ವಾದಿಸಿದ್ದಾರೆ. ಇದು ಶಿವಸೇನಾ ಪಕ್ಷದ ಕಟ್ಟರ್ ಬೆಂಬಲಗರನ್ನು ಸಮಾಧಾನಗೊಳಿಸುತ್ತದಾ ಎಂಬುದು ಪ್ರಶ್ನೆ.

ಉದ್ಧವ್ ಠಾಕ್ರೆ ತಮ್ಮ ಅಧಿಕಾರದ ಕೊನೆಯ ಘಳಿಗೆಯಲ್ಲಿ ಕೆಲ ನಗರಗಳ ಹೆಸರನ್ನು ಬದಲಾಯಿಸುವ ಮೂಲಕ ತಾನು ಹಿಂದುತ್ವವನ್ನು ಮರೆತಿಲ್ಲ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದರು. ಈಗ ಅಧಿಕಾರ ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಮುಂದೆ ತಮ್ಮ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಯಾವ ಕಾರ್ಯತಂತ್ರ ರೂಪಿಸುತ್ತಾರೆ ಎಂಬ ಕುತೂಹಲ ಇದೆ.

(ಒನ್ಇಂಡಿಯಾ ಸುದ್ದಿ)

English summary
Out of 67 Shiv Sena members in Thane Municipal Corporation 66 have supported Eknath Shinde faction. Only one has supported Thackeray faction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X