ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಳಾ ಆಸ್ತಿ: ಕೋರ್ಟ್ ಮೆಟ್ಟಿಲೇರಿದ ಠಾಕ್ರೆ ಸೋದರರು!

By Srinath
|
Google Oneindia Kannada News

Thackeray brothers clash over father Bal Thackeray's will -property
ಮುಂಬೈ, ಜ.21: ಹಾಗೆ ನೋಡಿದರೆ ಶಿವ ಸೇನಾಧಿಪತಿ ಬಾಳಾ ಠಾಕ್ರೆ ಬದುಕಿದ್ದಾಗಲೇ ಅವರ ಪುತ್ರರು ಶಿವಸೇನೆ ಸಾಮ್ರಾಜ್ಯಕ್ಕಾಗಿ ಕಿತ್ತಾಡುತ್ತಿದ್ದರು. ಮೊದಲು, ಅಪ್ಪ ಬಿಟ್ಟು ಹೋದ ಅಧಿಕಾರವನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಜಗಳವಾಡುತ್ತಿದ್ದವರು, ಇದೀಗ ಮರಣಾನಂತರ ಒಂದು ವರ್ಷದ ಬಳಿಕ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಹೌದು ಶಿವಸೇನೆ ಅಧಿಪತಿ ಬಾಳಾ ಠಾಕ್ರೆ ನಿಧನಾನಂತರ ಅವರ ಪುತ್ರರಾದ ಎರಡನೆಯವ ಜಯದೇವ ಠಾಕ್ರೆ ಮತ್ತು ಮೂರನೆಯವ ಉದ್ಧವ್ ಠಾಕ್ರೆ ಆಸ್ತಿಗಾಗಿ ಕಾದಾಡುತ್ತಿದ್ದಾರೆ.
( ಬಾಳಾ ಠಾಕ್ರೆ ಮೂಲತಃ ಮುಂಬೈವಾಲಾ ಅಲ್ಲ! )

ಕುತೂಹಲದ ಸಂಗತಿಯೆಂದರೆ ಬಾಳಾ ಠಾಕ್ರೆ ಆಸ್ತಿ ನೂರಾರು ಕೋಟಿ ಮೊತ್ತದ್ದು. ಅದರಲ್ಲಿ ಶಿವ ಸೇನೆಯ ಹಾಲಿ ಅಧ್ಯಕ್ಷ ಉದ್ಧವ್ ಠಾಕ್ರೆ ಇದೀಗ ಅಪ್ಪನ 100 ಕೋಟಿ ರೂ ಆಸ್ತಿ ಸಂಬಂಧ ಬಾಂಬೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತನ್ನಪ್ಪ ತನಗೇ ಅಂತ ನೂರು ಕೋಟಿ ರೂ. ಆಸ್ತಿ ಬಿಟ್ಟು ಹೋಗಿದ್ದಾರೆ. ಅದನ್ನು ವಿಲ್ ನಲ್ಲಿಯೂ ಬರೆದಿಟ್ಟಿದ್ದಾರೆ. ಹಾಗಾಗಿ ಅದು ತನಗೇ ದಕ್ಕುವಂತೆ ಆದೇಶಿಸಬೇಕು ಎಂದು ಕೋರ್ಟಿನ ಗಮನ ಸೆಳೆದಿದ್ದಾರೆ. ( ಸುನಂದಾ ಪುಷ್ಕಳ ಆಸ್ತಿ ಯಾರ ಪಾಲಾಗುತ್ತದೆ? )

ಆದರೆ ಜಯದೇವ ಠಾಕ್ರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿರುವ ಜಯದೇವ್, ಇಡೀ ಜೀವ ಮಾನವನ್ನು ಮರಾಠಿ ಭಾಷೆಯ ಏಳಿಗೆಗಾಗಿ ಮೀಸಲಿಟ್ಟಿದ್ದ ಬಾಳಾ ಠಾಕ್ರೆ ಅವರು ಇಂಗ್ಲೀಷಿನಲ್ಲಿ ಉಯಿಲು ಬರೆದಿಟ್ಟಿದ್ದಾರೆ ಅನ್ನುವುದು ಸುಳ್ಳು. ಇಬ್ಬರೂ ಮಕ್ಕಳನ್ನು ಸಮಾನವಾಗಿ ಕಾಣುತ್ತಿದ್ದ ಅವರು ಉದ್ಧವ್ ಠಾಕ್ರೆಗೆ ಮಾತ್ರವೇ ಆಸ್ತಿ ನೀಡಿದ್ದಾರೆ ಎಂಬುದು ಸುಳ್ಳೇ ಸುಳ್ಳು ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ಹೇಳುವಂತೆ ಬಾಳಾ ಠಾಕ್ರೆ ಬರೆದಿರುವ ಉಯಿಲಿನಲ್ಲಿ 1996ರಲ್ಲಿ ರಸ್ತೆ ಅಪಘಾತ ಮೃತಪಟ್ಟ ಮೊದಲ ಪುತ್ರ ಬಿಂದು ಮಾಧವ ಅವರ ಪುತ್ರ ನಿಹಾರ್ ಗೆ ಮತ್ತು ಜಯದೇವ ಅವರ ಹೆಸರಿಗೆ ಠಾಕ್ರೆ ಯಾವುದೇ ಆಸ್ತಿಯನ್ನೂ ಬರೆದಿಲ್ಲ. ( ಶಿವಸೇನೆ ಠಾಕ್ರೆಯ ಸ್ಥಿತಿ ಚಿಂತಾಜನಕ: 'ಬಾಳ' ಪುಟಗಳು )

English summary
Thackeray brothers clash over father Bal Thackeray's will. Shiv Sena president Uddhav Thackeray is facing a major legal battle with his estranged elder brother Jaidev over control of property and assets, worth several crores, belonging to late Sena patriarch Bal Thackeray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X