• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಖಿ ಸಾವಂತ್ ವಿರುದ್ಧ 10 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ ತನುಶ್ರೀ ದತ್ತಾ

|

ಮುಂಬೈ, ಅಕ್ಟೋಬರ್ 22: 2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಸಿನಿಮಾ ಸೆಟ್ ಗೆ ಮಾದಕ ದ್ರವ್ಯ ಸೇವಿಸಿ, ನಟಿ ತನುಶ್ರೀ ದತ್ತಾ ಬಂದಿದ್ದರು ಎಂದು ಆರೋಪಿಸಿದ್ದ ರಾಖಿ ಸಾವಂತ್ ವಿರುದ್ಧ 10 ಕೋಟಿ ರುಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತನುಶ್ರೀ ದತ್ತಾ ಅವರ ವಕೀಲರು ಈ ವಿಚಾರವನ್ನು ಮಾಧ್ಯಮಕ್ಕೆ ಖಚಿತಪಡಿಸಿದ್ದಾರೆ.

"ತನುಶ್ರೀ ದತ್ತಾ ಪರವಾಗಿ ನಾವು ಹತ್ತು ಕೋಟಿ ರುಪಾಯಿಯ ಸಿವಿಲ್ ಹಾಗೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರಾಖಿ ಸಾವಂತ್ ವಿರುದ್ಧ ಹೂಡಿದ್ದೇವೆ. ನನ್ನ ಕಕ್ಷೀದಾರರ ಚಾರಿತ್ರ್ಯ ಹಾಗೂ ವರ್ಚಸ್ಸಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದು ಹೌದು" ಎಂದು ವಕೀಲರಾದ ನಿತೀನ್ ಸತ್ಪುತೆ ಮಾಹಿತಿ ನೀಡಿದ್ದಾರೆ.

ತನುಶ್ರೀ ದತ್ತಾ ವಿವಾದದ ಬಗ್ಗೆ ಕಾಮೆಂಟ್ ಮಾಡಿದ ಬಾಯಿಬಡುಕಿ ರಾಖಿ ಸಾವಂತ್.!

ಹಾರ್ನ್ ಓಕೆ ಪ್ಲೀಸ್ ಸಿನಿಮಾ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ತನುಶ್ರೀ ದತ್ತಾ ಆರೋಪಿಸಿದ್ದರು. ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಹಾಗೂ ಸಿನಿಮಾ ನಿರ್ಮಾಪಕರ ವಿರುದ್ಧ ಕೂಡ ಆರೋಪ ಮಾಡಿದ್ದರು.

ಯಾವಾಗ ನಾನಾ ಪಾಟೇಕರ್ ನಡವಳಿಕೆ ವಿರುದ್ಧ ಧ್ವನಿ ಎತ್ತಿದೆನೋ ಆಗ ರೌಡಿಗಳನ್ನು ಕರೆಸಿ, ತನ್ನ ಕಾರಿನ ಮೇಲೆ ದಾಳಿ ಮಾಡಿಸಿದ್ದರು ಎಂದು ಕೂಡ ಆರೋಪಿಸಿದ್ದರು. ಆ ತಕ್ಷಣವೇ ತನುಶ್ರೀ ದತ್ತಾ ಅವರ ಬದಲಿಗೆ ರಾಖಿ ಸಾವಂತ್ ರನ್ನು ಆ ಹಾಡಿಗಾಗಿ ಆಯ್ಕೆ ಮಾಡಿಕೊಳ್ಳಲಾಯಿತು.

ನಾನಾ ಪಾಟೇಕರ್ ರನ್ನು ಮಂಪರು ಪರೀಕ್ಷೆಗೊಳಪಡಿಸಿ: ತನುಶ್ರೀ

2008ರಲ್ಲಿ ನಡೆದ ಆ ಘಟನೆ ಬಗ್ಗೆ ರಾಖಿ ಸಾವಂತ್ ಈಚೆಗೆ ಮಾತನಾಡುತ್ತಾ, ತನುಶ್ರೀ ದತ್ತಾ ಮಾದಕ ದ್ರವ್ಯ ಸೇವಿಸಿದ್ದರು. ಸೆಟ್ ನಲ್ಲೇ ನಾಲ್ಕು ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು ಎಂದಿದ್ದರು. ಲೈಂಗಿಕ ದೌರ್ಜನ್ಯದ ಆರೋಪವನ್ನು ನಾನಾ ಪಾಟೇಕರ್ ನಿರಾಕರಿಸಿದ್ದಾರೆ. ಆದರೆ ತನುಶ್ರೀ ದತ್ತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪಾಟೇಕರ್ ಗೆ ಮಂಪರು ಪರೀಕ್ಷೆ ಹಾಗೂ ಸುಳ್ಳು ಪತ್ತೆ ಯಂತ್ರದ ಮೂಲಕ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

English summary
Tanushree Dutta has slapped a Rs 10 crore defamation suit against Rakhi Sawant after the later said Tanushree consumed drugs on the sets of 2008 film Horn Ok Pleassss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X