{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/mumbai/tamil-group-protest-salman-khan-s-home-over-rajapaksa-support-090521.html" }, "headline": "ರಾಜಪಕ್ಸೆ ಪರ ಪ್ರಚಾರ, ಸಲ್ಲೂ ವಿರುದ್ಧ ತಮಿಳರ ಪ್ರತಿಭಟನೆ", "url":"http://kannada.oneindia.com/news/mumbai/tamil-group-protest-salman-khan-s-home-over-rajapaksa-support-090521.html", "image": { "@type": "ImageObject", "url": "http://kannada.oneindia.com/img/1200x60x675/2015/01/04-1420366036-sallu-jack.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/01/04-1420366036-sallu-jack.jpg", "datePublished": "2015-01-04T15:43:43+05:30", "dateModified": "2015-01-04T15:54:04+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Mumbai", "description": "Tamil groups protested outside Salman Khan's residence in Mumbai today morning voicing their disapproval over the actor's decision to campaign for Sri Lankan president Mahinda Rajapaksa. A group of people carrying pro-LTTE flags shouted slogans against the actor.", "keywords": "Tamil group protests outside Salman Khan's home over Rajapaksa support, ರಾಜಪಕ್ಸೆ ಪರ ಪ್ರಚಾರ, ಸಲ್ಲೂ ವಿರುದ್ಧ ತಮಿಳರ ಪ್ರತಿಭಟನೆ", "articleBody":"ಮುಂಬೈ, ಜ.4: ಶ್ರೀಲಂಕಾದ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ಪರ ಚುನಾವಣೆಯಲ್ಲಿ ಪ್ರಚಾರ ನಡೆಸಿದ ಬಾಲಿವುಡ್ ನಟ ಸಲ್ಮಾನ್& zwnj ಖಾನ್ ವಿರುದ್ಧ ತಮಿಳರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮುಂಬೈನ ಸಲ್ಮಾನ್ ನಿವಾಸದ ಎದುರು ತಮಿಳು ಸಂಘಟನೆಗಳು ಪ್ರತಿಭಟನೆ ನಡೆಸಿವೆ.ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಸಲ್ಮಾನ್& zwnj ಖಾನ್ ವಿರುದ್ಧ ಕಿಡಿಕಾರಿವೆ. ತಕ್ಷಣವೇ ಅವರ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಕ್ರಮ ಜರುಗಿಸಬೇಕೆಂದು ಅನೇಕ ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ. ಜಾಕ್ವಲಿನ್ ಜೊತೆ ಸಲ್ಲೂ ಸುತ್ತಾಟವೇಕೆ?ತಮಿಳುನಾಡಿನಾದ್ಯಂತ ಭಾರೀ ಪ್ರತಿಭಟನೆ ನಡೆಸಿದ ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಸಲ್ಮಾನ್ ನಿವಾಸದ ಎದುರು ಪ್ರತಿಭಟನೆ ಆರಂಭವಾಗಿತ್ತು. ಅದರೆ, ಸಲ್ಮಾನ್ ನಿವಾಸಕ್ಕೆ ಪೊಲೀಸರು ಭಾರೀ ಭದ್ರತೆ ಒದಗಿಸಿ, ಮನೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.ಸಲ್ಮಾನ್& zwnj ಖಾನ್& zwnj ಗೆ ತಮಿಳರಿಂದ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಭದ್ರತೆಯನ್ನು ನೀಡಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ತಿಳಿಸಿದ್ದಾರೆ. ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸಲ್ಮಾನ್& zwnj ಖಾನ್ ವಿರುದ್ಧ ಪ್ರತಿಭಟನೆ ಜೋರಾಗಿದೆ. ಅವರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.ತಕ್ಷಣವೇ ಸಲ್ಮಾನ್& zwnj ಖಾನ್ ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಇನ್ನು ಮುಂದೆ ಶ್ರೀಲಂಕಾದಲ್ಲಿ ಪ್ರಚಾರ ನಡೆಸುವುದಿಲ್ಲ ಎಂದು ವಾಗ್ದಾನ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕೊಲಂಬೋದಲ್ಲಿ ಸಲ್ಮಾನ್& zwnj ಖಾನ್ ರಾಜಪಕ್ಸೆ ಪರ ಪ್ರಚಾರ ನಡೆಸಿದ್ದರು. ಇದು ತಮಿಳರ ಕೆಂಗಣ್ಣಿಗೆ ಗುರಿಯಾಗಿತ್ತು. ಜಾಫ್ನಾದಲ್ಲಿ ಎಲ್& zwnj ಟಿಟಿಇ ಉಗ್ರರ ಮೇಲೆ ದಾಳಿ ನಡೆಸಿದಾಗ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ. ತಮಿಳರನ್ನು ನಿಕೃಷ್ಟವಾಗಿ ರಾಜಪಕ್ಸೆ ನಡೆಸಿಕೊಂಡಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ. ಶ್ರೀಲಂಕಾ ಭೇಟಿ ಬಗ್ಗೆ ಟ್ವೀಟ್ ಮಾಡಿದ್ದ ಸಲ್ಮಾನ್ ಖಾನ್, ರಾಜಪಕ್ಸೆ ಪರ ಪ್ರಚಾರ ಮಾಡಿದ್ದರ ಬಗ್ಗೆ ಏನು ಹೇಳಿರಲಿಲ್ಲ ಎಂಬುದು ಗಮನಾರ್ಹ.ಸಲ್ಮಾನ್ ಖಾನ್ ಅಲ್ಲದೆ ಬಿಜೆಪಿ ಸಾಮಾಜಿಕ ಮಾಧ್ಯಮಗಳ ತಜ್ಞ ಅರವಿಂದ್ ಗುಪ್ತ ಅವರು ಕೂಡಾ ರಾಜಪಕ್ಸೆ ಜನಪ್ರಿಯತೆ ಹೆಚ್ಚಿಸಲು ನೆರವಾಗುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಜ.8 ರಂದು ಚುನಾವಣೆ ನಡೆಯಲಿದೆ.ರಾಜಪಕ್ಸೆ ಅವರ ಮಗ ನಮಲ್ ರಾಜಪಕ್ಸೆ ಹಾಗೂ ನೆಚ್ಚಿನ ನಟಿ ಜಾಕ್ವಲೀನ್ ಫರ್ನಾಂಡೀಸ್ ಅವರ ಕೋರಿಕೆಯ ಮೇರೆಗೆ ಸಲ್ಮಾನ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.(ಪಿಟಿಐ)" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಪಕ್ಸೆ ಪರ ಪ್ರಚಾರ, ಸಲ್ಲೂ ವಿರುದ್ಧ ತಮಿಳರ ಪ್ರತಿಭಟನೆ

By Mahesh
|
Google Oneindia Kannada News

ಮುಂಬೈ, ಜ.4: ಶ್ರೀಲಂಕಾದ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ಪರ ಚುನಾವಣೆಯಲ್ಲಿ ಪ್ರಚಾರ ನಡೆಸಿದ ಬಾಲಿವುಡ್ ನಟ ಸಲ್ಮಾನ್‌ಖಾನ್ ವಿರುದ್ಧ ತಮಿಳರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮುಂಬೈನ ಸಲ್ಮಾನ್ ನಿವಾಸದ ಎದುರು ತಮಿಳು ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಸಲ್ಮಾನ್‌ಖಾನ್ ವಿರುದ್ಧ ಕಿಡಿಕಾರಿವೆ. ತಕ್ಷಣವೇ ಅವರ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಕ್ರಮ ಜರುಗಿಸಬೇಕೆಂದು ಅನೇಕ ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ. [ಜಾಕ್ವಲಿನ್ ಜೊತೆ ಸಲ್ಲೂ ಸುತ್ತಾಟವೇಕೆ?]

ತಮಿಳುನಾಡಿನಾದ್ಯಂತ ಭಾರೀ ಪ್ರತಿಭಟನೆ ನಡೆಸಿದ ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಸಲ್ಮಾನ್ ನಿವಾಸದ ಎದುರು ಪ್ರತಿಭಟನೆ ಆರಂಭವಾಗಿತ್ತು. ಅದರೆ, ಸಲ್ಮಾನ್ ನಿವಾಸಕ್ಕೆ ಪೊಲೀಸರು ಭಾರೀ ಭದ್ರತೆ ಒದಗಿಸಿ, ಮನೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

Tamil group protests outside Salman Khan's home over Rajapaksa support

ಸಲ್ಮಾನ್‌ಖಾನ್‌ಗೆ ತಮಿಳರಿಂದ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಭದ್ರತೆಯನ್ನು ನೀಡಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ತಿಳಿಸಿದ್ದಾರೆ. ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸಲ್ಮಾನ್‌ಖಾನ್ ವಿರುದ್ಧ ಪ್ರತಿಭಟನೆ ಜೋರಾಗಿದೆ. ಅವರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.

ತಕ್ಷಣವೇ ಸಲ್ಮಾನ್‌ಖಾನ್ ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಇನ್ನು ಮುಂದೆ ಶ್ರೀಲಂಕಾದಲ್ಲಿ ಪ್ರಚಾರ ನಡೆಸುವುದಿಲ್ಲ ಎಂದು ವಾಗ್ದಾನ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕೊಲಂಬೋದಲ್ಲಿ ಸಲ್ಮಾನ್‌ಖಾನ್ ರಾಜಪಕ್ಸೆ ಪರ ಪ್ರಚಾರ ನಡೆಸಿದ್ದರು. ಇದು ತಮಿಳರ ಕೆಂಗಣ್ಣಿಗೆ ಗುರಿಯಾಗಿತ್ತು.

ಜಾಫ್ನಾದಲ್ಲಿ ಎಲ್‌ಟಿಟಿಇ ಉಗ್ರರ ಮೇಲೆ ದಾಳಿ ನಡೆಸಿದಾಗ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ. ತಮಿಳರನ್ನು ನಿಕೃಷ್ಟವಾಗಿ ರಾಜಪಕ್ಸೆ ನಡೆಸಿಕೊಂಡಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ. ಶ್ರೀಲಂಕಾ ಭೇಟಿ ಬಗ್ಗೆ ಟ್ವೀಟ್ ಮಾಡಿದ್ದ ಸಲ್ಮಾನ್ ಖಾನ್, ರಾಜಪಕ್ಸೆ ಪರ ಪ್ರಚಾರ ಮಾಡಿದ್ದರ ಬಗ್ಗೆ ಏನು ಹೇಳಿರಲಿಲ್ಲ ಎಂಬುದು ಗಮನಾರ್ಹ.

ಸಲ್ಮಾನ್ ಖಾನ್ ಅಲ್ಲದೆ ಬಿಜೆಪಿ ಸಾಮಾಜಿಕ ಮಾಧ್ಯಮಗಳ ತಜ್ಞ ಅರವಿಂದ್ ಗುಪ್ತ ಅವರು ಕೂಡಾ ರಾಜಪಕ್ಸೆ ಜನಪ್ರಿಯತೆ ಹೆಚ್ಚಿಸಲು ನೆರವಾಗುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಜ.8 ರಂದು ಚುನಾವಣೆ ನಡೆಯಲಿದೆ.

ರಾಜಪಕ್ಸೆ ಅವರ ಮಗ ನಮಲ್ ರಾಜಪಕ್ಸೆ ಹಾಗೂ ನೆಚ್ಚಿನ ನಟಿ ಜಾಕ್ವಲೀನ್ ಫರ್ನಾಂಡೀಸ್ ಅವರ ಕೋರಿಕೆಯ ಮೇರೆಗೆ ಸಲ್ಮಾನ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.(ಪಿಟಿಐ)

English summary
Tamil groups protested outside Salman Khan's residence in Mumbai today morning voicing their disapproval over the actor's decision to campaign for Sri Lankan president Mahinda Rajapaksa. A group of people carrying pro-LTTE flags shouted slogans against the actor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X