ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆ ಮೇಲೆ ಬಂದು ಸ್ವಿಗ್ಗಿ ಆರ್ಡರ್ ಡೆಲಿವರಿ ಮಾಡಿದ ವ್ಯಕ್ತಿ: ಯಾರೆಂದು ಹುಡುಕಿಕೊಟ್ಟರೆ 5000 ಬಹುಮಾನ

|
Google Oneindia Kannada News

ಮುಂಬೈ, ಜುಲೈ 07: ಮುಂಬೈ ಮಹಾನಗರಿಯಲ್ಲಿ ಕಳೆದ ಕೆಲವು ದಿನಗಳಿಂದ ಎಡಬಿಡದೆ ಭಾರಿ ಮಳೆ ಸುರಿಯುತ್ತಿದೆ. ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿ ಜನ ತತ್ತರಿಸಿದ್ದಾರೆ. ಇನ್ನೂ ಮಳೆಯ ನಡುವೆಯೂ ಫುಡ್ ಡೆಲಿವರಿ, ತರಕಾರಿ ಡೆಲಿವರಿ ಮಾಡುವವರು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಫುಡ್ ಡೆಲಿವರಿ ಏಜೆಂಟ್‌ಗಳು ಊಟ ಮನೆಗೆ ತಲುಪಿಸುತ್ತಾರೆ, ಆದರೆ ಇವನ ಐಡಿಯಾ ಮಾತ್ರ ವಿಶೇಷ.

Recommended Video

Swiggy ಹುಡುಗ ಕುದುರೆ ಏರಿ ಬಂದವನು ಅಸಲಿಗೆ ಯಾರುಗೊತ | OneIndia Kannada

ಮಳೆಯಲ್ಲೂ ಇಲ್ಲೊಬ್ಬ ಡಿಫರೆಂಟಾಗಿ ಫುಡ್ ಡೆಲಿವರಿ ಮಾಡಿದ್ದಾನೆ. ಈ ಸ್ವಿಗ್ಗಿ ಡೆಲಿವರಿ ಮಾಡುವ ವ್ಯಕ್ತಿ ಈಗ ದೇಶಾದ್ಯಂತ ಮನೆ ಮಾತಾಗಿದ್ದಾನೆ, ಮಾತ್ರವಲ್ಲ ಇವನಿಗಾಗಿ ಸ್ವತಃ ಸ್ವಿಗ್ಗಿ ಕಂಪನಿ ಕೂಡ ಹುಡುಕಾಡುತ್ತಿದೆ ಅದ್ಯಾಕಪ್ಪ ಅಂತೀರಾ, ಈ ಸ್ಟೋರಿ ಓದಿ.

ಬಿಬಿಎಂಪಿ ಹೊಸ ಯೋಜನೆ; ಬೀದಿಬದಿ ಆಹಾರವೂ ಆನ್‌ಲೈನ್ ಮೂಲಕ ಮನೆಗೆ!ಬಿಬಿಎಂಪಿ ಹೊಸ ಯೋಜನೆ; ಬೀದಿಬದಿ ಆಹಾರವೂ ಆನ್‌ಲೈನ್ ಮೂಲಕ ಮನೆಗೆ!

ನಗರದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾರೆ. ಅದರಲ್ಲೂ ಮನೆ ಮನೆಗೆ ಊಟ ತಲುಪಿಸುವ ಫುಡ್ ಡೆಲಿವರಿ ಉದ್ಯೋಗಿಗಳ ಗೋಳು ಹೇಳತೀರದು. ಆದರೆ ಇಲ್ಲೊಬ್ಬ ಮಾತ್ರ, ಊಟ ಡೆಲಿವರಿ ಕೊಡಲು ಕುದುರೆ ಮೇಲೆ ಹೋಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನ ದಾದರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕೆಲವೇ ಗಂಟೆಗಳಲ್ಲಿ ವಿಡಿಯೋ ವೈರಲ್

ವೀಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಹಲವರು ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವು ಬಳಕೆದಾರರು ಸ್ವಿಗ್ಗಿ ಡೆಲಿವರಿ ಏಜೆಂಟ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು "ಈಗ ನಾನು ಇದನ್ನು 'ಶಾಹಿ ವಿತರಣೆ' ಎಂದು ಕರೆಯುತ್ತೇನೆ" ಎಂದು ತಮಾಷೆಯಾಗಿ ಬರೆದಿದ್ದಾರೆ.

ತನ್ನಲ್ಲದ ತಪ್ಪಿಗೆ ಕೈತಪ್ಪಿದ ಪೈಲಟ್ ಹುದ್ದೆ: ಫುಡ್ ಡೆಲಿವರಿ ಬಾಯ್ ಕಥೆ ಕೇಳಿತನ್ನಲ್ಲದ ತಪ್ಪಿಗೆ ಕೈತಪ್ಪಿದ ಪೈಲಟ್ ಹುದ್ದೆ: ಫುಡ್ ಡೆಲಿವರಿ ಬಾಯ್ ಕಥೆ ಕೇಳಿ

ಮಾಹಿತಿ ನೀಡಿದ ಮೊದಲ ವ್ಯಕ್ತಿಗೆ 5000 ಹಣ

ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಿಗ್ಗಿ ಕಂಪನಿ, ಆ ಏಜೆಂಟ್ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದೆ. ಕುದುರೆ ಮೇಲೆ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಬಗ್ಗೆ ಮಾಹಿತಿ ನೀಡಿದ ಮೊದಲ ವ್ಯಕ್ತಿಗೆ 5000 ರುಪಾಯಿ ನೀಡುವುದಾಗಿ ಸ್ವಿಗ್ಗಿ ಕಂಪನಿ ಘೋಷಿಸಿದೆ. ಕಂಪನಿಯು ಸ್ವಿಗ್ಗಿ ಡೆಲಿವರಿ ಏಜೆಂಟ್‌ ಗೌರವಾರ್ಥವಾಗಿ ಕುದುರೆಯ ಮೇಲೆ ಡೆಲಿವರಿ ಬಾಯ್‌ಗೆ ಆರ್ಡರ್ ಟ್ರ್ಯಾಕಿಂಗ್ ಐಕಾನ್ ಅನ್ನು ಬದಲಾಯಿಸಿದೆ.

"ಫುಡ್‌ ಡಿಲಿವರಿ ಏಜೆಂಟ್‌ನ ಚತುರ ಯೋಜನೆ ಮತ್ತು ಕುದುರೆಯ ಮೇಲೆ ಬಂದು ಡೆಲಿವರಿ ಮಾಡಿದ್ದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಆತನ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ ಮೊದಲ ವ್ಯಕ್ತಿಗೆ 5000 ರುಪಾತಿ ಸ್ವಿಗ್ಗಿ ಹಣ ನೀಡುತ್ತೇವೆ. ಆತನನ್ನು ಹುಡುಕಲು ನಮಗೆ ಸಹಾಯ ಮಾಡಿ" ಎಂದು ಕಂಪನಿ ಹೇಳಿಕೊಂಡಿದೆ.

ಮೆಚ್ಚುಗೆಗೆ ಅರ್ಹ ಎಂದ ಸ್ವಿಗ್ಗಿ

ಮೆಚ್ಚುಗೆಗೆ ಅರ್ಹ ಎಂದ ಸ್ವಿಗ್ಗಿ

"ನಮ್ಮ ಮೊನೊಗ್ರಾಮ್ಡ್ ಡೆಲಿವರಿ ಬ್ಯಾಗ್ ಅನ್ನು ಅಪರಿಚಿತ ವ್ಯಕ್ತಿಯೊಬ್ಬರು ಜೀವಂತ ಬಿಳಿ ಕುದುರೆಯ ಮೇಲೆ (ಪ್ರತಿಮೆಯಲ್ಲ) ಸಾಕಷ್ಟು ಆತ್ಮವಿಶ್ವಾಸದಿಂದ ಕುಳಿತುಕೊಂಡಿರುವ ಅರೆಸೆಂಟ್ ಹವ್ಯಾಸಿ ವಿಡಿಯೋ ನೋಡಿದ್ದೇವೆ. ಇದು ನಮಗೆ ಅನಿರೀಕ್ಷಿತ, ಆದರೆ ಮೆಚ್ಚುಗೆಗೆ ಅರ್ಹವಾಗಿದೆ" ಎಂದು ಕಂಪನಿಯು ತಿಳಿಸಿದೆ.

"ಸ್ಪಷ್ಟವಾಗಿ ಹೇಳಬೇಕೆಂದರೆ, ಹೆಚ್ಚು ಪರಿಸರ ಸ್ನೇಹಿ ವಿತರಣಾ ಅಭ್ಯಾಸಗಳ ಅನ್ವೇಷಣೆಯಲ್ಲಿ, ನಾವು ನಮ್ಮ ಸಾಮಾನ್ಯ ವಿತರಣಾ ವಾಹನಗಳನ್ನು ಕುದುರೆ, ಹೇಸರಗತ್ತೆ, ಕತ್ತೆಗಳು, ಒಂಟೆಗಳು, ಆನೆಗಳೊಂದಿಗೆ ಬದಲಾಯಿಸಿಲ್ಲ" ಎಂದು ಸ್ವಿಗ್ಗಿ ಹೇಳಿಕೊಂಡಿದೆ.

ಭಾರಿ ಮಳೆಗೆ ತತ್ತರಿಸಿದ ಮಹಾನಗರಿ

ಭಾರಿ ಮಳೆಗೆ ತತ್ತರಿಸಿದ ಮಹಾನಗರಿ

ಈ ವಾರದ ಆರಂಭದಲ್ಲಿ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನಗರದಲ್ಲಿ ಆರೆಂಜ್ ಎಚ್ಚರಿಕೆಯನ್ನು ನೀಡಿದೆ. ನಿರಂತರ ಮಳೆಯ ನಡುವೆ, ಕಲ್ಬಾದೇವಿ ಮತ್ತು ಸಿಯಾನ್ ಪ್ರದೇಶಗಳಲ್ಲಿ ಎರಡು ಕಟ್ಟಡಗಳು ಕುಸಿದ ಘಟನೆಗಳು ವರದಿಯಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಬೃಹನ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್ ಅಂಡರ್‌ಟೇಕಿಂಗ್ (ಬೆಸ್ಟ್) 12 ಬಸ್ ಮಾರ್ಗಗಳನ್ನು ಬದಲಾಯಿಸಲಾಯಿತು. ನಗರದ ನಾಲ್ಕೈದು ಸ್ಥಳಗಳಲ್ಲಿ ಜಲಾವೃತವಾಗಿರುವ ಕಾರಣ 12 ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್‌ಗಳನ್ನು ತಿರುಗಿಸಲಾಗಿದೆ. ಭಾರಿ ಮಳೆಯಿಂದಾಗಿ ರೈಲು ಸೇವೆಗಳು ಐದರಿಂದ 15 ನಿಮಿಷಗಳಷ್ಟು ವಿಳಂಬವಾಗಿದೆ ಎಂದು ಕೆಲವು ರೈಲ್ವೆ ಪ್ರಯಾಣಿಕರು ಹೇಳಿದ್ದಾರೆ.

English summary
The Swiggy delivery Agent was filmed travelling on horseback to deliver food packages as roads were flooded with water due to incessant rainfall in mumbai city. After video went viral, Swiggy has announced 5,000 Swiggy Money for the first person who shares useful information about the delivery person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X