ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ; ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ ಆರೋಪಿ ಬಂಧನ

|
Google Oneindia Kannada News

ಮುಂಬೈ, ಮೇ 25 : ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಕರ್ನಾಟಕ ಮೂಲದ ಸ್ವಾಮೀಜಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ತೆಲಂಗಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿ ಮೃತದೇಹವನ್ನು ಕಾರಿನಲ್ಲಿ ಸಾಗಣೆ ಮಾಡಲು ಆರೋಪಿ ಪ್ರಯತ್ನ ನಡೆಸಿದ್ದು ತನಿಖೆ ವೇಳೆ ಬಹಿರಂಗವಾಗಿದೆ.

Recommended Video

ನಾವೇನ್ ಪಾಕಿಸ್ಥಾನದವ್ರಾ? ವಿದೇಶದಲ್ಲಿರೋರು ಬರಬಹುದು ನಾವು ಬರೋ ಹಾಗಿಲ್ವಾ? | Mumbai | Karnataka

ನಾಂದೇಡ್‌ ಜಿಲ್ಲೆಯ ಉಮ್ರಿಯಲ್ಲಿರುವ ಆಶ್ರಮದಲ್ಲಿ ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ (33), ಅವರ ಸೇವಕ ಭಗವಾನ್ ಶಿಂಧೆ (55) ಎಂಬುವವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿತ್ತು.

ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸಾಧು ಹತ್ಯೆಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸಾಧು ಹತ್ಯೆ

ಹತ್ಯೆ ಆರೋಪಿ ಸಾಯಿನಾಥ್ ಲಿಂಗಾಡೆಯನ್ನು ತೆಲಂಗಾಣ ಗಡಿಯಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಲ್ಯಾಪ್ ಟಾಪ್ ಮತ್ತು 70 ಸಾವಿರ ಹಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಹಲವು ಕೊಲೆಯತ್ನ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಸಹ ದಾಖಲಾಗಿದ್ದವು.4

ರಾಮ್​ಪುರ್: ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ ರಾಮ್​ಪುರ್: ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ

Swamiji Killed In Maharashtra Accused Arrested

ಶನಿವಾರ ರಾತ್ರಿ ಆಶ್ರಮದ ಬಳಿಯ ಶಾಲೆಯಲ್ಲಿ ಸಾಯಿನಾಥ್ ಲಿಂಗಾಡೆ ಸ್ವಾಮೀಜಿಯ ಸೇವಕ ಭಗವಾನ್ ಶಿಂಧೆ ಭೇಟಿಯಾಗಿದ್ದ. ಅಲ್ಲಿ ಆತನನ್ನು ಹತ್ಯೆ ಮಾಡಿ ಶವವನ್ನು ಆಶ್ರಮದ ಶೌಚಾಲಯದೊಳಗೆ ಎಸೆದು ಆಶ್ರಮಕ್ಕೆ ಬಂದಿದ್ದ.

ಪಾಲ್ಗಾರ್ ಸಾಧುಗಳ ಹತ್ಯೆ; 7 ಆರೋಪಿಗಳ ಬಂಧನಪಾಲ್ಗಾರ್ ಸಾಧುಗಳ ಹತ್ಯೆ; 7 ಆರೋಪಿಗಳ ಬಂಧನ

ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಹತ್ಯೆ ಮಾಡಿ ಲ್ಯಾಪ್ ಟಾಪ್ ಮತ್ತು 70 ಸಾವಿರ ಹಣ ದೋಚಿದ್ದ. ಕಾರಿನಲ್ಲಿ ಸ್ವಾಮೀಜಿ ಶವವನ್ನು ಹಾಕಿಕೊಂಡು ಹೊರಟಾಗ ಆಶ್ರಮದ ಗೇಟ್ ಬಳಿ ಅಪಘಾತವಾಗಿತ್ತು. ಆದ್ದರಿಂದ, ಕಾರು ಅಲ್ಲಿಯೇ ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದ.

ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಕರ್ನಾಟಕದ ಬಳ್ಳಾರಿ ಮೂಲದವರು. ಆಶ್ರಮಕ್ಕೆ ಕದಿಯಲು ಬಂದ ಸಾಯಿನಾಥ್ ಲಿಂಗಾಡೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

English summary
Maharashtra police arrested Sainath Lingade who killed Swamiji in ashram at Nanded district of state. Accused looted 70 thousand Rs and laptop after the murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X