• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಕೇಶ್ ಅಂಬಾನಿ ಮನೆ ಸಮೀಪ ಎಸ್‌ಯುವಿಯಲ್ಲಿ ಸ್ಫೋಟಕ ವಸ್ತು ಪತ್ತೆ

|

ನವದೆಹಲಿ, ಫೆಬ್ರವರಿ 25: ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಮುಂಬೈನಲ್ಲಿರುವ ಅಂಟಿಲಿಯಾ ನಿವಾಸದ ಮುಂಭಾಗದಲ್ಲಿ 20 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಎಸ್‌ಯುವಿಯೊಂದು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಪೆಡ್ಡರ್ ರಸ್ತೆಯ ಅಂಬಾನಿ ನಿವಾಸದ ಸಮೀಪದಲ್ಲಿ ಸ್ಕಾರ್ಪಿಯೋ ಕಾರ್‌ನಲ್ಲಿ ಈ ಸ್ಫೋಟಕಗಳು ಪತ್ತೆಯಾಗಿವೆ.

ಈ ವಾಹನದಲ್ಲಿ ಯಾರೂ ಇರಲಿಲ್ಲ. ಹಲವು ಸಮಯದಿಂದ ಅಲ್ಲಿಯೇ ವಾಹನ ನಿಂತಿದ್ದನ್ನು ಮತ್ತು ಅದರಲ್ಲಿ ಯಾರೂ ಇಲ್ಲದಿರುವುದನ್ನು ಕಂಡ ಅಂಬಾನಿ ಅವರ ಭದ್ರತಾ ತಂಡವು ಗುರುವಾರ ಸಂಜೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಮಾಹಿತಿ ಆಧಾರದಲ್ಲಿ ಗಮ್ದೇವಿ ಪೊಲೀಸ್ ಠಾಣೆಯ ಪೊಲೀಸರ ತಂಡವು ಕೂಡಲೇ ಸ್ಥಳಕ್ಕೆ ಧಾವಿಸಿ ಎಸ್‌ಯುವಿಯನ್ನು ತಪಾಸಣೆಗೆ ಒಳಪಡಿಸಿತು.

ಅಂಬಾನಿ ಮಾಲೀಕತ್ವದ ವಿಶ್ವದ ಅತಿದೊಡ್ಡ ಮೃಗಾಲಯಕ್ಕೆ "ಕರಿಚಿರತೆ" ವಿವಾದ!

ವಾಹನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಬಾಂಬ್ ನಿಷ್ಕ್ರಿಯ ದಳವನ್ನು ಕೂಡ ಸ್ಥಳಕ್ಕೆ ಕರೆಯಿಸಿದರು. ವಾಹನವನ್ನು ಪರಿಶೀಲಿಸಿದ ಬಳಿಕ ಅದರ ಒಳಗೆ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಹೀಗಾಗಿ ಕೂಡಲೇ ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಯಿತು.

ವಾಹನದ ಒಳಗೆ ಜಿಲೆಟಿನ್ ಕಡ್ಡಿಗಳು ಮಾತ್ರವೇ ಪತ್ತೆಯಾಗಿದೆ. ಅದರಲ್ಲಿ ಸಂಯೋಜಿತ ಸ್ಫೋಟಕ ಸಾಧನಗಳು ಇರಲಿಲ್ಲ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಕೂಡ ಇದನ್ನು ಖಚಿತಪಡಿಸಿದ್ದಾರೆ. ಮುಂಬೈ ಅಪರಾಧ ದಳ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸ್ಫೋಟಕ ವಸ್ತುಗಳು ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಮಿಖಲ್ ರಸ್ತೆ ಹಾಗೂ ಸುತ್ತಮುತ್ತ ಕಾಮಾಂಡೊಗಳು ಸೇರಿದಂತೆ ಭಾರಿ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಮಹಾರಾಷ್ಟ್ರ ಪೊಲೀಸ್ ಭಯೋತ್ಪಾದನಾ ನಿಗ್ರಹ ಪಡೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದರು.

ಕಾರ್‌ನ ವಿವರಗಳನ್ನು ಹಾಗೂ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಕಲೆಹಾಕಲಾಗುತ್ತಿದೆ. ಅಪರಾಧ ದಳದ ಘಟಕವು ತನಿಖೆ ನಡೆಸುತ್ತಿದೆ. ಎಟಿಎಸ್ ಕೂಡ ಭಯೋತ್ಪಾದನಾ ಕೃತ್ಯದ ಶಂಕೆಯ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದರು.

English summary
SUV containing 20 gelatin sticks was found outside Mukesh Ambani's residence Antilia in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X