ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಎನ್‌ಐಎಯಿಂದ ಅಪರಾಧ ದೃಶ್ಯ ಮರುಸೃಷ್ಟಿ

|
Google Oneindia Kannada News

ಮುಂಬೈ, ಮಾರ್ಚ್ 20: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆಯ ಮುಂದೆ ಸ್ಫೋಟಕ ವಸ್ತುಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಪರಾಧ ದೃಶ್ಯ ಮರುಸೃಷ್ಟಿ ಮಾಡಿದೆ.

ಘಟನೆಯ ದಿನದಂದು ಕಾರ್ಮೈಕಲ್ ರಸ್ತೆಯಲ್ಲಿ ದಾಖಲಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿರುವ ವಿಡಿಯೋದಲ್ಲಿ ಕುರ್ತಾ ಧರಿಸಿದ ವ್ಯಕ್ತಿ ವಾಜೆ ಎಂದು ಎನ್ಐಎ ಶಂಕಿಸಿದೆ. ಆದರೆ ಅದು ಇನ್ನೂ ದೃಢಪಡಬೇಕಿದೆ.

ಮಹಾರಾಷ್ಟ್ರ: ಮನ್ಸುಖ್ ಮೃತದೇಹ ಪತ್ತೆಯಾದ ಸ್ಥಳದಲ್ಲೇ ಮತ್ತೊಂದು ಶವ ಪತ್ತೆ ಮಹಾರಾಷ್ಟ್ರ: ಮನ್ಸುಖ್ ಮೃತದೇಹ ಪತ್ತೆಯಾದ ಸ್ಥಳದಲ್ಲೇ ಮತ್ತೊಂದು ಶವ ಪತ್ತೆ

ತನಿಖೆಯ ಅಂಗವಾಗಿ ಅಪರಾಧ ಪ್ರಕರಣದ ಮರುಸೃಷ್ಟಿ ಮಾಡಲಾಗಿದೆ ಎಂದು ಶನಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ತಡ ರಾತ್ರಿ ಮರುಸೃಷ್ಟಿ ಮಾಡಲಾಗಿದ್ದು, ಸಚಿನ್ ವಾಜೆ ಅವರನ್ನು ಕೆಲಕಾಲ ಅದೇ ಪ್ರದೇಶದಲ್ಲಿ ವಾಕಿಂಗ್ ಮಾಡುವಂತೆ ಸೂಚಿಸಲಾಯಿತು.

SUV Case: NIA Recreates Crime Scene With Sachin Waze Near Ambanis House

ಫೆ. 25 ರಂದು ಮುಕೇಶ್ ಅಂಬಾನಿಯ ಬಹುಮಹಡಿ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳು ತುಂಬಿದ ಎಸ್‌ಯುವಿ ವಾಹನ ಮತ್ತು ಅದರೊಳಗೆ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು.

ಶುಕ್ರವಾರ ರಾತ್ರಿ ವಾಜೆ ಮತ್ತು ತನಿಖಾಧಿಕಾರಿಗಳು 30 ನಿಮಿಷಗಳಿಗೂ ಹೆಚ್ಚು ಕಾಲ ಘಟನಾ ಸ್ಥಳದಲ್ಲಿದ್ದರು. ಅಪರಾಧದ ಸನ್ನಿವೇಶವನ್ನು ಮರುಸೃಷ್ಟಿ ಮಾಡಿದ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಮಾಡಲಾಗಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.

English summary
The National Investigation Agency (NIA) took suspended Mumbai police officer Sachin Waze to the spot where the explosives-laden Scorpio was found near industrialist Mukesh Ambani's residence here last month, and recreated the crime scene as part of its probe into the case, a police official said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X