ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ಸುಶಾಂತ್ ಸಿಂಗ್ ಸಾವಿಗೆ 'Asphyxia' ಕಾರಣ ಎಂದ ಮರಣೋತ್ತರ ಪರೀಕ್ಷೆ ವರದಿ

|
Google Oneindia Kannada News

ಮುಂಬೈ, ಜೂನ್ 15: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ಮುಂಬೈನ ಬಾಂದ್ರಾದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Recommended Video

ಮರಣೋತ್ತರ ಪರೀಕ್ಷೆಯಿಂದ ಗೊತ್ತಾಯ್ತು ಸುಶಾಂತ್ ಸಾವಿನ ಹಿಂದಿನ ರಹಸ್ಯ. | Oneindia Kannada

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದಿತ್ತಾದರೂ ಅದಕ್ಕೆ ಖಚಿತ ಸಾಕ್ಷಿ ಸಿಕ್ಕಿರಲಿಲ್ಲ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ 'ಡೆತ್ ನೋಟ್' ಸಹ ಇರಲಿಲ್ಲ. ಸಹಜವಾಗಿ ಆ ಸಾವಿನ ಮೇಲೆ ಸ್ವಲ್ಪ ಮಟ್ಟಿಗೆ ಅನುಮಾನ ಇತ್ತು.

ಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆ

ಹಾಗಾಗಿ, ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದರು. ನಿರೀಕ್ಷೆಯಂತೆ ವರದಿ ಪೊಲೀಸರ ಕೈ ಸೇರಿದ್ದು ಸಾವಿಗೆ ನಿಜವಾದ ಕಾರಣ ಬಹಿರಂಗವಾಗಿದೆ. ಮುಂದೆ ಓದಿ...

'ಆತ್ಮಹತ್ಯೆ' ಎಂದ ಮರಣೋತ್ತರ ಪರೀಕ್ಷೆಯ ವರದಿ

'ಆತ್ಮಹತ್ಯೆ' ಎಂದ ಮರಣೋತ್ತರ ಪರೀಕ್ಷೆಯ ವರದಿ

ಬಾಲಿವುಡ್ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿರುವುದು ಸತ್ಯ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ಜುಹುದಲ್ಲಿನ ಕೂಪರ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆದಿದ್ದು, ಸುಮಾರು ಎರಡು ಗಂಟೆ ಬಳಿಕ ವರದಿ ನೀಡಿದ್ದಾರೆ ವೈದ್ಯರು. ಈ ವರದಿಯಲ್ಲಿ ಸುಶಾಂತ್ ಸಾವಿಗೆ 'asphyxia' ಕಾರಣ ಎಂದಿದ್ದಾರೆ.

ಏನಿದು 'asphyxia' ?

ಏನಿದು 'asphyxia' ?

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಖಚಿತಪಡಿಸಿರುವ ವೈದ್ಯರು ಆತನ ಸಾವಿಗೆ asphyxia ಅಂದರೆ 'ಉಸಿರುಗಟ್ಟುವಿಕೆ' ಪ್ರಮುಖ ಕಾರಣ ಎಂದಿದ್ದಾರೆ. ಸಹಜವಾಗಿ ನೇಣು ಬಿಗಿದುಕೊಂಡಾಗ ಉಸಿರಾಟ ತೊಂದರೆ ಉಂಟಾಗಿ ಉಸಿರುಗಟ್ಟುತ್ತೆ. ಈ ಸಮಯದಲ್ಲಿ ದೇಹಕ್ಕೆ ಆಕ್ಸಿಜನ್ ಕೊರತೆ ಉಂಟಾಗುತ್ತೆ. ದೇಹಕ್ಕೆ ಆಮ್ಲಜನಕ ಸಿಗದೇ ಇದ್ದಾಗ ಆತ ಪ್ರಜ್ಞೆ ಕಳೆದುಕೊಳ್ಳಬಹುದು ಅಥವಾ ಸಾವನ್ನಪ್ಪಬಹುದು. ಆದ್ದರಿಂದಲೇ ನಟ ಸುಶಾಂತ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಿದ್ದಾರೆ.

ನಟ ಸುಶಾಂತ್ ಶವದ ಫೋಟೋ ಹಂಚಿಕೊಳ್ಳುವವರ ವಿರುದ್ಧ ಕ್ರಮನಟ ಸುಶಾಂತ್ ಶವದ ಫೋಟೋ ಹಂಚಿಕೊಳ್ಳುವವರ ವಿರುದ್ಧ ಕ್ರಮ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟ

ಸುಶಾಂತ್ ಸಿಂಗ್ ದೈಹಿಕವಾಗಿ ತುಂಬಾ ಆರೋಗ್ಯವಾಗಿದ್ದರು. ಆದರೆ, ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ಹೇಳಿದೆ. ಕಳೆದ 6 ತಿಂಗಳಿನಿಂದ ಸುಶಾಂತ್ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದರು. ಆದರೆ, ಯಾವ ವಿಚಾರಕ್ಕಾಗಿ ಎನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಪಟ್ಟಂತೆ ಸುಶಾಂತ್ ನಿವಾಸದಿಂದ ಪೊಲೀಸರು ಕೆಲವು ವೈದ್ಯಕೀಯ ವರದಿಗಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.

ಕೊವಿಡ್ ಪರೀಕ್ಷೆ ಆಗಿತ್ತು

ಕೊವಿಡ್ ಪರೀಕ್ಷೆ ಆಗಿತ್ತು

ಸುಶಾಂತ್ ಸಿಂಗ್ ಕೊರೊನಾ ವೈರಸ್ ಪರೀಕ್ಷೆಗೂ ಒಳಪಟ್ಟಿದ್ದರು. ಅದರಲ್ಲಿ ಫಲಿತಾಂಶ ನೆಗಿಟಿವ್ ಬಂದಿತ್ತು. ಆದರೂ ಹೆಚ್ಚಿನ ಪರೀಕ್ಷೆಗಾಗಿ ಮತ್ತೊಮ್ಮೆ ಸುಶಾಂತ್ ಸಿಂಗ್ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಈ ನಡುವೆ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವೂ ತನಿಖೆಯಲ್ಲಿದೆ. ಅದರಲ್ಲಿ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ಅನುಮಾನ ಮೂಡಿಸಿದೆ.

English summary
Sushant Singh Rajput's Post-Mortem Report Mentions 'Asphyxia' as Cause of Death and Says Ligature Marks Were Also Seen Around The Neck.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X