ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಣಸಿಗನ ಬಂಧನ: ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಹೊಸ ತಿರುವು

|
Google Oneindia Kannada News

ಮುಂಬೈ, ಸೆ 6: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು, ವ್ಯವಸ್ಥಿತ ಕೊಲೆ ಎನ್ನುವುದಕ್ಕೆ ಯಾವುದೇ ಬಲವಾದ ಸಾಕ್ಷಿಗಳು ಲಭ್ಯವಾಗದ ಹಿನ್ನಲೆಯಲ್ಲಿ, ಕೇಸಿನ ಆಯಾಮವನ್ನು ಸಿಬಿಐ ಬದಲಾಯಿಸುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.

Recommended Video

ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Oneindia Kannada

ಆದರೆ, ತಾಜಾ ಬೆಳವಣಿಗೆಯೊಂದರಲ್ಲಿ, ಸುಶಾಂತ್ ಸಿಂಗ್ ಮನೆಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ದಿಪೇಶ್ ಸಾವಂತ್ ಅವರನ್ನು ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ಬಂಧಿಸುವ ಮೂಲಕ, ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವು: ಸಿಬಿಐ ಮೂಲದಿಂದ ಬ್ರೇಕಿಂಗ್ ನ್ಯೂಸ್ಸುಶಾಂತ್ ಸಿಂಗ್ ರಜಪೂತ್ ಸಾವು: ಸಿಬಿಐ ಮೂಲದಿಂದ ಬ್ರೇಕಿಂಗ್ ನ್ಯೂಸ್

ಸುಶಾಂತ್ ಸಾವಿನ ಪ್ರಕರಣದ ತನಿಖೆ ವೇಳೆ ಚಿತ್ರರಂಗದ ಡ್ರಗ್ ಮಾಫಿಯಾದ ವಿಚಾರ ಬಹಿರಂಗವಾಗಿತ್ತು. ಸುಶಾಂತ್ ಗೆಳತಿ, ರಿಯಾ ಚಕ್ರವರ್ತಿ ಮೊಬೈಲ್ ಚಾಟ್ ಆಧರಿಸಿ ತನಿಖೆ ನಡೆಸುತ್ತಿದ್ದ ಮಾದಕ ವಸ್ತು ನಿಯಂತ್ರಣ ಇಲಾಖೆ (NCB) ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಈಗಾಗಲೆ ಬಂಧಿಸಿದೆ.

ಡ್ರಗ್ಸ್, ನಟಿ ರಾಗಿಣಿ ಅರೆಸ್ಟ್: ಇಕ್ಕಟ್ಟಿನಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರಡ್ರಗ್ಸ್, ನಟಿ ರಾಗಿಣಿ ಅರೆಸ್ಟ್: ಇಕ್ಕಟ್ಟಿನಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ

ಶನಿವಾರ (ಸೆ 5), ಸುಶಾಂತ್ ಸಿಂಗ್ ಮನೆಯ ಬಾಣಸಿಗ ದಿಪೇಶ್ ಸಾವಂತ್ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈತ, ಈ ಪ್ರಕರಣದ ಪ್ರತ್ಯಕ್ಷದರ್ಶಿ ಎಂದು ಹೇಳಲಾಗುತ್ತಿದ್ದು, ತೀವ್ರ ವಿಚಾರಣೆಯ ನಂತರ, ಈತನನ್ನು ಬಂಧಿಸಲಾಗಿದೆ.

ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರಬರ್ತಿ

ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರಬರ್ತಿ

ದಿಪೇಶ್ ಸಾವಂತ್ ಬಂಧನದ ನಂತರ, ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದತೆ ಬಂಧನಗೊಂಡವರ ಸಂಖ್ಯೆ ಎಂಟಕ್ಕೆ ಏರಿದೆ. ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರಬರ್ತಿ, ಸುಶಾಂತ್ ಮನೆಯ ಮ್ಯಾನೇಜರ್ ಸಾಮ್ಯೂಲ್ ಮಿರಾಂಡ ಅವರನ್ನು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿರುವ ಅಧಿಕಾರಿಗಳು, ಸೆಪ್ಟಂಬರ್ 9ರ ವರೆಗೆ ತಮ್ಮ ವಶಕ್ಕೆ ಪಡೆದುಕೊಂಡಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಹೊಸ ತಿರುವು

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಹೊಸ ತಿರುವು

ಶೌವಿಕ್ ವಿಚಾರಣೆಯ ವೇಳೆ ಡ್ರಗ್ಸ್ ಯಾರಿಗೆಲ್ಲಾ ನೀಡುತ್ತಿದ್ದ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದು, ರಿಯಾ ಚಕ್ರವರ್ತಿಯನ್ನು ವಿಚಾರಣೆಗೆ ಮತ್ತೆ ಕರೆಸಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ಹೇಳಿದ್ದಾರೆ. ಮೂಲಗಳ ಪ್ರಕಾರ, ರಿಯಾ ಅವರ ಬಂಧನವಾಗುವ ಸಾಧ್ಯತೆಯಿದೆ. ಬಾಣಸಿಗ ದಿಪೇಶ್, ಸುಶಾಂತ್ ಗೆ 59 ಗ್ರಾಂ ಮರಿಜುನಾ ಸಪ್ಲೈ ಮಾಡಿದ್ದ ಎಂದು ಹೇಳಲಾಗುತ್ತಿದೆ.

ಮೂರು ವಿವಿಧ ಏಜೆನ್ಸಿಗಳು ತನಿಖೆ ನಡೆಸುತ್ತಿದೆ

ಮೂರು ವಿವಿಧ ಏಜೆನ್ಸಿಗಳು ತನಿಖೆ ನಡೆಸುತ್ತಿದೆ

ಸುಶಾಂತ್ ಸಿಂಗ್ ಸಾವಿನ ವಿಚಾರಣೆಯನ್ನು ಮೂರು ವಿವಿಧ ಏಜೆನ್ಸಿಗಳು (ಸಿಬಿಐ, ಇಡಿ ಮತ್ತು ಎನ್ಸಿಬಿ) ನಡೆಸುತ್ತಿದೆ. ಜೂನ್ ಹದಿನಾಲ್ಕರಂದು ಸುಶಾಂತ್ ಸಿಂಗ್ ಶವ ಅವರ ಮುಂಬೈ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿತ್ತು. ಕೊಲೆ ಎನ್ನುವುದಕ್ಕೆ ಯಾವುದೇ ಸಾಕ್ಷಿ/ಪುರಾವೆಗಳು ಇದುವರೆಗಿನ ತನಿಖೆಯಲ್ಲಿ ಸಿಗದೇ ಇರುವ ಹಿನ್ನಲೆಯಲ್ಲಿ ಆತ್ಮಹತ್ಯೆಯ ಆಯಾಮದಲ್ಲಿ ವಿಚಾರಣೆ ಮುಂದುವರಿಸಲು ಸಿಬಿಐ ನಿರ್ಧರಿಸಿದೆ ಎಂದು ವರದಿಯಾಗಿತ್ತು.

ಕೇಸ್ ಮುಂದಿನ ದಿನಗಳಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆ

ಕೇಸ್ ಮುಂದಿನ ದಿನಗಳಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆ

ಸಿಬಿಐನ ಮೂವರು ಅಧಿಕಾರಿಗಳ ತಂಡ ಕೇಸಿನ ವಿಚಾರಣೆಯನ್ನು ನಡೆಸುತ್ತಿದೆ. ಬಾಣಸಿಗನನ್ನು ಸತತ ಏಳು ಗಂಟೆ ವಿಚಾರಣೆಯ ಬಳಿಕ ಬಂಧಿಸಲಾಗಿದೆ. ರಿಯಾ ಚಕ್ರವರ್ತಿಯನ್ನು ಮತ್ತೆ ವಿಚಾರಣೆಗೆ ಕರೆಯಲಾಗಿದ್ದು, ಬಾಣಸಿಗನನ್ನೂ ಹೆಚ್ಚಿನ ವಿಚಾರಣೆ ಒಳಪಡಿಸಲಾಗುತ್ತಿದೆ. ಹಾಗಾಗಿ, ಕೇಸ್ ಮುಂದಿನ ದಿನಗಳಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆಯಿದೆ.

English summary
Sushant Singh Rajput Death Case: Dipesh Sawant Arrested By NCB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X