ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶಾಂತ್ ಸಿಂಗ್ ರಜಪೂತ್ ಸಾವು: ಸಿಬಿಐ ಮೂಲದಿಂದ ಬ್ರೇಕಿಂಗ್ ನ್ಯೂಸ್

|
Google Oneindia Kannada News

ಮುಂಬೈ, ಸೆ 2: ಬಾಲಿವುಡ್ ನ ಉದಯೋನ್ಮುಖ ಕಲಾವಿದ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರಣೆಯನ್ನು ವಹಿಸಿಕೊಂಡಿರುವ ಕೇಂದ್ರ ತನಿಖಾ ದಳದ (ಸಿಬಿಐ) ಮೂಲಗಳಿಂದ ಮಾಹಿತಿಯೊಂದು ಲಭ್ಯವಾಗಿದೆ ಎಂದು ಆಂಗ್ಲ ಮಾಧ್ಯಮಗಳು ಹೇಳಿವೆ.

ಸುಶಾಂತ್​ ಸಿಂಗ್​ ಸಾವನ್ನಪ್ಪಿ ಎರಡೂವರೆ ತಿಂಗಳು ಕಳೆದಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಕೆಲವರ ವಾದ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಗಳು ತೀವ್ರವಾಗಿ ಕೇಳಿ ಬಂದಿದ್ದರಿಂದ, ಸಿಬಿಐಗೆ ತನಿಖೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು.

ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ: ಕೆ.ಜೆ ಜಾರ್ಜ್ ಗೆ ಮತ್ತೆ ಸಂಕಷ್ಟ!ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ: ಕೆ.ಜೆ ಜಾರ್ಜ್ ಗೆ ಮತ್ತೆ ಸಂಕಷ್ಟ!

ನ್ಯಾಯಾಲಯದ ಆದೇಶದಂತೆ ತನಿಖೆ ಆರಂಭಿಸಿರುವ ಸಿಬಿಐ, ಇತ್ತೀಚಿನ ದಿನಗಳಲ್ಲಿ ಹಲವು ಜನರ ವಿಚಾರಣೆಯನ್ನು ನಡೆಸಿತ್ತು. ಆದರೆ, ಇಲ್ಲಿಯವರೆಗೆ ಇದೊಂದು ಕೊಲೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ವರದಿಯಾಗಿದೆ.

ಸುಶಾಂತ್ ಸಿಂಗ್ ಸಾವಿನಲ್ಲಿ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ:ಸುಬ್ರಮಣಿಯನ್ ಸ್ವಾಮಿಸುಶಾಂತ್ ಸಿಂಗ್ ಸಾವಿನಲ್ಲಿ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ:ಸುಬ್ರಮಣಿಯನ್ ಸ್ವಾಮಿ

ಸುಶಾಂತ್ ಸಾವಿನ ಪ್ರಕರಣದ ತನಿಖೆ ವೇಳೆ ಚಿತ್ರರಂಗದ ಡ್ರಗ್ ಮಾಫಿಯಾದ ವಿಚಾರ ಬಹಿರಂಗವಾಗಿತ್ತು. ರಿಯಾ ಚಕ್ರವರ್ತಿ ಮೊಬೈಲ್ ಚಾಟ್ ಆಧರಿಸಿ ತನಿಖೆ ನಡೆಸುತ್ತಿದ್ದ ಮಾದಕ ವಸ್ತು ನಿಯಂತ್ರಣ ಇಲಾಖೆ (NCB) ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ತನಿಖಾ ಆಯಾಮ ಬದಲು ಸಾಧ್ಯತೆ, ಮುಂದೆ ಓದಿ...

ಸಿಬಿಐ ತನ್ನ ತನಿಖಾ ಆಯಾಮವನ್ನು ಬದಲಾಯಿಸುವ ಸಾಧ್ಯತೆ

ಸಿಬಿಐ ತನ್ನ ತನಿಖಾ ಆಯಾಮವನ್ನು ಬದಲಾಯಿಸುವ ಸಾಧ್ಯತೆ

ಹಲವು ಜನರನ್ನು ವಿಚಾರಣೆಗೆ ಒಳಪಡಿಸಿರುವ ಸಿಬಿಐ, ಈಗ ತನ್ನ ತನಿಖಾ ಆಯಾಮವನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಆಂಗ್ಲ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ. ಮೂವರು ಅಧಿಕಾರಿಗಳ ತಂಡ ಕೇಸಿನ ವಿಚಾರಣೆಯನ್ನು ನಡೆಸುತ್ತಿದೆ. ಇದುವರೆಗಿನ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಿಚಾರಗಳು ಬೆಳಕಿಗೆ ಬಂದಿಲ್ಲ ಎಂದು ವರದಿಯಾಗಿದೆ.

ಯಾವುದೇ ಸಾಕ್ಷಿ/ಪುರಾವೆಗಳು ಇದುವರೆಗಿನ ತನಿಖೆಯಲ್ಲಿ ಸಿಗದೇ ಇರುವ ಹಿನ್ನಲೆ

ಯಾವುದೇ ಸಾಕ್ಷಿ/ಪುರಾವೆಗಳು ಇದುವರೆಗಿನ ತನಿಖೆಯಲ್ಲಿ ಸಿಗದೇ ಇರುವ ಹಿನ್ನಲೆ

ಕೊಲೆ ಎನ್ನುವುದಕ್ಕೆ ಯಾವುದೇ ಸಾಕ್ಷಿ/ಪುರಾವೆಗಳು ಇದುವರೆಗಿನ ತನಿಖೆಯಲ್ಲಿ ಸಿಗದೇ ಇರುವ ಹಿನ್ನಲೆಯಲ್ಲಿ ಆತ್ಮಹತ್ಯೆಯ ಆಯಾಮದಲ್ಲಿ ವಿಚಾರಣೆ ಮುಂದುವರಿಸಲು ಸಿಬಿಐ ನಿರ್ಧರಿಸಿದೆ. ಜೂನ್ ಹದಿನಾಲ್ಕರಂದು ಸುಶಾಂತ್ ಸಿಂಗ್ ಶವ ಅವರ ಮುಂಬೈ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿತ್ತು.

ಸುಶಾಂತ್ ಸಾವು ಒಂದು ವ್ಯವಸ್ಥಿತ ಕೊಲೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ

ಸುಶಾಂತ್ ಸಾವು ಒಂದು ವ್ಯವಸ್ಥಿತ ಕೊಲೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ

ಕೇಸಿನ ಪ್ರಮುಖ ಶಂಕಿತರು ಮತ್ತು ಫೋರೆನ್ಸಿಕ್ ರಿಪೋರ್ಟ್ ಪ್ರಕಾರ ಸುಶಾಂತ್ ಸಾವು ಒಂದು ವ್ಯವಸ್ಥಿತ ಕೊಲೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ತನಿಖೆಯ ಆಯಾಮವನ್ನು ಬದಲಾಯಿಸಲು ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದರೂ, ಕೊಲೆ ಆಯಾಮದ ತನಿಖೆಯನ್ನು ನಿಲ್ಲಿಸುವುದಿಲ್ಲ ಎಂದು ವರದಿಯಾಗಿದೆ.

ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿಚಾರಣೆ

ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿಚಾರಣೆ

ಮುಂಬೈ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡ ನಂತರ ಸಿಬಿಐ, ಸುಶಾಂತ್ ಅವರ ಮುಂಬೈ ಬಂಗ್ಲೆಯನ್ನು ಮರುಸೃಷ್ಟಿಸಿ, ನಟಿ/ ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್ ಅವರ ವಿಚಾರಣೆಯನ್ನು ನಡೆಸಿದ್ದರು. ಇದರ ಜೊತೆಗೆ, ರಿಯಾ ಪೋಷಕರ ವಿಚಾರಣೆಯನ್ನೂ ಸಿಬಿಐ ಅಧಿಕಾರಿಗಳು ನಡೆಸಿದ್ದರು.

English summary
Sushant Singh Rajput Case: CBI Gets No Proof Of Murder, Now Focusing On The Suicide Angle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X