ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕಾಪಡೆಗೆ ಅತ್ಯಾಧುನಿಕ ಯುದ್ಧ ನೌಕೆ ಐಎನ್‌ಎಸ್ ನೀಲಗಿರಿ ಅರ್ಪಣೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 28: ಭಾರತದಲ್ಲಿಯೇ ತಯಾರಿಸಲಾದ ಐಎನ್‌ಎಸ್ ನೀಲಗಿರಿ ಯುದ್ಧನೌಕೆ ಶನಿವಾರ ನೌಕಾಪಡೆಗೆ ಸೇರ್ಪಡೆಯಾಗಿದೆ.

ಅತ್ಯಾಧುನಿಕ ಯುದ್ಧ ನೌಕೆ 'ಐಎನ್‌ಎಸ್ ನೀಲಗಿರಿ'ಯನ್ನು ವಾಡಿಕೆಯಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪತ್ನಿ ಸಾವಿತ್ರಿ ಸಿಂಗ್ ಮುಂಬೈನ ಮ್ಯಾಜಗಾನ್ ಡಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ (ಎಂಡಿಎಲ್) ಸಮುದ್ರಕ್ಕೆ ಇಳಿಯಲು ಚಾಲನೆ ನೀಡಿದರು.

ಅರೇಬಿಯನ್ ಸಮುದ್ರದಲ್ಲಿ ಪಾಕ್ ನೌಕಾ ಸೇನೆ ಅಭ್ಯಾಸ; ಭಾರತದ ಕಣ್ಗಾವಲುಅರೇಬಿಯನ್ ಸಮುದ್ರದಲ್ಲಿ ಪಾಕ್ ನೌಕಾ ಸೇನೆ ಅಭ್ಯಾಸ; ಭಾರತದ ಕಣ್ಗಾವಲು

ರಾಜನಾಥ್ ಸಿಂಗ್ ಅವರ ಜತೆ ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಇತರೆ ಅಧಿಕಾರಿಗಳು ಹಾಜರಿದ್ದರು. ಹಲವು ಬಾರಿ ಪರೀಕ್ಷೆಗಳನ್ನು ನಡೆಸಿದ ಬಳಿ ಇದೇ ಮೊದಲ ಬಾರಿಗೆ ಈ ಯುದ್ಧನೌಕೆ ಸಮುದ್ರಕ್ಕೆ ಇಳಿದಿದೆ.

 Stealth Frigate INS Nilgiri Launched Navy Defence Minister Rajnath Singh

'ಯುದ್ಧನೌಕೆ ನೀಲಗಿರಿಯ ಬಿಡುಗಡೆ ವೇಳೆ ಭಾಗವಹಿಸಿರುವುದಕ್ಕೆ ಸಂತಸವಾಗುತ್ತಿದೆ. ಪ್ರಾಜೆಕ್ಟ್ 17 ಅಲ್ಫಾ (ಪಿ17ಎ) ವರ್ಗದ ಹಡಗುಗಳಲ್ಲಿ ಮೊದಲನೆಯದಾಗಿರುವ ಬೃಹತ್ ಯುದ್ಧನೌಕೆ ನೀಲಗಿರಿಯು ನೌಕಾಪಡೆಗೆ ಸೇರಿಕೊಳ್ಳುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ' ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾದ ನೌಕಾಪಡೆ ಮುಖ್ಯಸ್ಥವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಮುಂದಾದ ನೌಕಾಪಡೆ ಮುಖ್ಯಸ್ಥ

ಡಕ್‌ಯಾರ್ಡ್‌ನಲ್ಲಿ ಇನ್ನೂ ಹಲವು ಯುದ್ಧ ನೌಕೆಗಳನ್ನು ತಯಾರಿಸಲಾಗುತ್ತಿದೆ. ಐಎನ್ಎಸ್ ನೀಲಗಿರಿ ನೌಕೆಯು 2,650 ಟನ್ ತೂಕ ಹೊಂದಿದ್ದು, ಅದನ್ನು ಇಂಟಿಗ್ರೇಟೆಡ್ ನಿರ್ಮಾಣ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ.

ಇದೇ ವೇಳೆ ರಾಜನಾಥ್ ಸಿಂಗ್ ಅವರು ಭಾರತದ ಎರಸಡನೆಯ ಸ್ಕಾರ್ಪೀನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಖಂಡೂರಿಯನ್ನು ಸಹ ಉದ್ಘಾಟಿಸಿದರು.

ನೌಕಾಪಡೆಗೆ ಹೊಸ ಮುಖ್ಯಸ್ಥರ ನೇಮಕ: ಯಾರು ಈ ಕರಂಬೀರ್ ಸಿಂಗ್?ನೌಕಾಪಡೆಗೆ ಹೊಸ ಮುಖ್ಯಸ್ಥರ ನೇಮಕ: ಯಾರು ಈ ಕರಂಬೀರ್ ಸಿಂಗ್?

'ಐಎನ್ಎಸ್ ಖಂಡೂರಿಯನ್ನು ನೌಕಾಪಡೆಗೆ ಅರ್ಪಿಸಲು ಇಲ್ಲಿರುವುದಕ್ಕೆ ಖುಷಿಯಾಗುತ್ತಿದೆ. ಇದನ್ನು ಭಾರತದಲ್ಲಿ ಪ್ರಾಜೆಕ್ಟ್ 75ರ ಅಡಿ ನಿರ್ಮಿಸಲಾಗಿದೆ. ಈ ಯೋಜನೆಯು ಫ್ರಾನ್ಸ್ ಸಹಯೋಗದೊಂದಿಗೆ ನಡೆಯುತ್ತಿದ್ದು, ಇದು ಭಾರತ ಮತ್ತು ಫ್ರಾನ್ಸ್ ವಿಶೇಷ ಬಾಂಧವ್ಯದ ಸಂಕೇತವಾಗಿದೆ' ಎಂದು ರಾಜನಾಥ್ ಸಿಂಗ್ ಹೇಳಿದರು.

English summary
Stealth frigate INS Nilgiri was launched on Saturday in Mumbai's MDL. Defence Minister Rajnath Singh's wife Savitri Singh as part of traditions launched the ship into the sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X