ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ರೈಲ್ವೆ ಸೇತುವೆಯಲ್ಲಿ ಕಾಲ್ತುಳಿತ 22 ಸಾವು

By Mahesh
|
Google Oneindia Kannada News

ಮುಂಬೈ, ಸೆ. 29: ಮುಂಬೈನ ಎಲ್ಫಿನ್ ಸ್ಟೋನ್ ರೈಲ್ ನಿಲ್ದಾಣದ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆಯಲ್ಲಿ ಕಾಲ್ತುಳಿತ ಘಟನೆ ಶುಕ್ರವಾರ ಸಂಭವಿಸಿದೆ. ಮಳೆ ಜೋರಾದ ಹಿನ್ನಲೆಯಲ್ಲಿ ರಕ್ಷಣೆ ಪಡೆಯಲು ಸೇತುವೆಯತ್ತ ಧಾವಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಈ ದುರ್ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದು, 25 ಅಧಿಕ ಮಂದಿಗೆ ಗಾಯಗಳಾಗಿರುವ ವರದಿಗಳು ಬಂದಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Stampede at Mumbai's Elphinstone Railway Station many dead

ಲೋಯರ್ ಪರೇಲ್ ಹಾಗೂ ಎಲ್ಫಿನ್ ಸ್ಟೋನ್ ನಿಲ್ದಾಣಗಳ ನಡುವಿನ ಸಂಚಾರಿ ಮಾರ್ಗದಲ್ಲಿ ಶುಕ್ರವಾರ ಬೆಳಗ್ಗೆ 10.45 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಪ್ರಯಾಣಿಕರು ನೆರವಾಗುತ್ತಿದ್ದಾರೆ. ಮುಂಜಾನೆ ಬಿದ್ದ ಮಳೆ ಹಾಗೂ ಪ್ರಯಾಣಿಕರು ಹೆಚ್ಚಾಗಿದ್ದ ಕಾರಣ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಗಾಯಗೊಂಡವರನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. 15 ಮಂದಿ ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಮೃತಪಟ್ಟಿದ್ದರು ಎಂದು ಹಿರಿಯ ವೈದ್ಯಾಧಿಕಾರಿ ಡಾ. ಪ್ರವೀಣ್ ಬಂಗಾರ್ ಹೇಳಿದ್ದಾರೆ.

English summary
Stampede at Mumbai's Elphinstone Railway Station's foot over bridge; 3 dead, 25 people reportedly injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X