• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೇನಾಮಿ ಆಸ್ತಿ ಕೇಸಿನಿಂದ ನಟ ಶಾರುಖ್ ಖಾನ್ ಗೆ ಖುಲಾಸೆ

|

ನವದೆಹಲಿ, ಜನವರಿ 29: ಕಿಂಗ್ ಖಾನ್ ಶಾರುಖ್ ಖಾನ್ ಅವರು ಬೇನಾಮಿ ಆಸ್ತಿ ಪ್ರಕರಣದಿಂದ ಮುಕ್ತರಾಗಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್‌ನ ಬೀಚ್ ಪಟ್ಟಣದಲ್ಲಿ ನಟ ಶಾರುಕ್ ಖಾನ್ ಬೇನಾಮಿ ಆಸ್ತಿಯನ್ನು ಹೊಂದಿದ್ದಾರೆ ಎಂಬ ಆರೋಪವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಜಪ್ತಿ ಆದೇಶ ಆಧಾರರಹಿತ ಮತ್ತು ಉತ್ಪ್ರೇಕ್ಷಿಸಲ್ಪಟ್ಟಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕಿಂಗ್ ಖಾನ್ ಶಾರುಖ್ ಒಡೆತನದ ಆಲಿಬಾಗ್ ತೋಟದ ಮನೆಗೆ ಬೀಗ ಬಿದ್ದಿದೆ. ಬೇನಾಮಿ ಆಸ್ತಿ ವ್ಯವಹಾರ ಕಾಯ್ದೆ ಅಡಿಯಲ್ಲಿ ಫಾರ್ಮ್ ಹೌಸನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕೃಷಿ ಜಮೀನನ್ನು ಖರೀದಿ, ಫಾರ್ಮ್ ಹೌಸ್ ನಿರ್ಮಿಸಿ, ಕಾನೂನು ಉಲ್ಲಂಘಿಸಿರುವ ಬಗ್ಗೆ ಕಳೆದ ಡಿಸೆಂಬರ್ ನಲ್ಲಿ ಈ ಕುರಿತಂತೆ ನಟ ಶಾರುಖ್ ಖಾನ್ ಗೆ ನೋಟಿಸ್ ನೀಡಲಾಗಿತ್ತು.

ಬೇನಾಮಿ ಆಸ್ತಿ ಪ್ರಕರಣ: ಶಾರುಖ್ ಫಾರ್ಮ್ ಹೌಸ್ ಗೆ ಬೀಗ

ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಮತ್ತು ಅವರ ಪೋಷಕರು ಶೇರುದಾರರಾಗಿರುವ ಕಂಪೆನಿಯ ವಿರುದ್ಧ ಆದೇಶವನ್ನು ಹೊರಡಿಸಿರುವ ಆದಾಯ ತೆರಿಗೆ ಇಲಾಖೆಯನ್ನು ಮೇಲ್ಮನವಿ ನ್ಯಾಯಾಲಯ (ಎಎ) ತರಾಟೆಗೆ ತೆಗೆದುಕೊಂಡಿದೆ.

ತೆರಿಗೆ ಇಲಾಖೆ ತಿಳಿಸಿರುವಂತೆ ಅಲಿಬಾಗ್ ತಾಲೂಕದ ಥಾಲ್ ಗ್ರಾಮದ ಕೃಷಿ ಭೂಮಿ ಮತ್ತು ಅದರಲ್ಲಿರುವ ಕಟ್ಟಡ ಬೇನಾಮಿ ಆಸ್ತಿ ಅಲ್ಲ ಎಂದು ನಾವು ತೀರ್ಪು ನೀಡುತ್ತಿದ್ದು ಆಮೂಲಕ ತನಿಖಾ ಅಧಿಕಾರಿ ನೀಡಿರುವ ಜಪ್ತಿ ಆದೇಶವನ್ನು ನಾವು ರದ್ದು ಮಾಡುತ್ತಿದ್ದೇವೆ ಎಂದು ತೀರ್ಪು ಪ್ರಾಧಿಕಾರದ ಡಿ ಸಂಘೈ (ಮುಖ್ಯಸ್ಥ) ಮತ್ತು ತುಶಾರ್ ವಿ. ಶಾ (ಸದಸ್ಯ, ಕಾನೂನು) ಅವರ ವಿಭಾಗೀಯ ಪೀಠ ತಿಳಿಸಿದೆ.

ಅಲಿಬಾಗ್‌ನ ಕೃಷಿ ಭೂಮಿಯಲ್ಲಿ ನಿರ್ಮಿಸಲಾಗಿರುವ ಹದಿನೈದು ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್ ಮತ್ತು ಜಮೀನನ್ನು ಆದಾಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿತ್ತು.ದೇಜಾವೂ ಫಾರ್ಮ್ಸ್ ಪ್ರೈ.ಲಿ. ಕಂಪೆನಿಯನ್ನು ಬೇನಾಮ್ದಾರ್ ಮತ್ತು ಶಾರೂಕ್ ಖಾನ್‌ರನ್ನು ಅದರ ಫಲಾನುಭವಿ ಎಂದು ನಮೂದಿಸಿತ್ತು. ಈ ಆಸ್ತಿಯ ಸರಾಸರಿ ಮೊತ್ತ 146.7 ಮಿಲಿಯನ್ ರೂಪಾಯಿ ಎನ್ನಲಾಗುತ್ತಿದೆ. 19,960 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಫಾರ್ಮ್​ ಹೌಸ್ ಇದೆ. ಇದರಲ್ಲಿ ಸ್ವಿಮ್ಮಿಂಗ್ ಪೂಲ್, ಹೆಲಿಪ್ಯಾಡ್ ಕೂಡಾ ಇದೆ. ಆದರೆ, ಮಾರುಕಟ್ಟೆ ದರ ಇನ್ನೂ ಅಧಿಕ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor Shah Rukh Khan has been absolved of the charge of being a beneficiary of a benami property at the beach town of Alibaug in Maharashtra as an appellate authority under the law has “revoked” the income tax department’s attachment order, calling it baseless and coloured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more